Ad Widget

ತೆಲಂಗಾಣ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ – ಅಮಿತ್‌ ಶಾ ವಿರುದ್ಧ ಕೇಸ್‌ ದಾಖಲು

ಸಮಗ್ರ ನ್ಯೂಸ್‌ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ತೆಲಂಗಾಣದಲ್ಲಿ ಕೇಸ್‌ ದಾಖಲಾಗಿದೆ. ಮುಖ್ಯ ಚುನಾವಣಾಧಿಕಾರಿ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ನಿರಂಜನ್‌ ರೆಡ್ಡಿ ಅಮಿತ್‌ ಶಾ ವಿರುದ್ಧ ದೂರು ದಾಖಲಿಸಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget

ಮೇ 1ರಂದು ಅಮಿತ್‌ ಶಾ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇದಿಕೆಯಲ್ಲಿ, ಕೆಲವು ಮಕ್ಕಳು ಕಾಣಿಸಿಕೊಂಡಿದ್ದರು. ಅಲ್ಲದೇ ರ್ಯಾಲಿಯಲ್ಲಿ ಮಗುವೊಂದು ಬಿಜೆಪಿಯ ಲೋಗೋವನ್ನು ಕೈಯಲ್ಲಿ ಹಿಡಿದಿತ್ತು. ಆ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

Ad Widget . Ad Widget .

ಇ-ಮೇಲ್‌ ಮೂಲಕ ರೆಡ್ಡಿ ತೆಲಂಗಾಣ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಚುನಾವಣಾ ಪ್ರಚಾರ ಕಾರ್ಯದಲ್ಲಿ , ರ್ಯಾಲಿಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಖಡಕ್‌ ಸೂಚನೆ ನೀಡಿದೆ. ಇದೀಗ ಸ್ವತಃ ಕೇಂದ್ರ ಗೃಹ ಸಚಿವರೇ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಿತಂಜನ್‌ ರೆಡ್ಡಿಯವರ ದೂರನ್ನು ಚುನಾವಣಾಧಿಕಾರಿ ಹೈದರಾಬಾದ್‌ ಪೊಲೀಸರು ರವಾನಿಸಿದ್ದು, ಪೊಲೀಸರು ಅಮಿತ್‌ ಶಾ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಟಿ. ಯಮುನಾ ಸಿಂಗ್‌, ಶಾಸಕ ರಾಜಾ ಸಿಂಗ್‌ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಸೆಕ್ಷನ್‌ 188 ಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Comment

Your email address will not be published. Required fields are marked *