Ad Widget .

ಹೊಸ ಅಪ್​ಡೇಟ್ ತರುತ್ತಿದೆ ವಾಟ್ಸ್​ಆ್ಯಪ್ | ಇಂಟರ್​ನೆಟ್ ಇಲ್ಲದಿದ್ದರೂ ಫೋಟೊ ಕಳಿಸಿ!

ಸಮಗ್ರ ನ್ಯೂಸ್:ವಾಟ್ಸ್​ಆ್ಯಪ್ ಹೊಸ ಫೀಚರ್​ವೊಂದನ್ನು ಪರೀಕ್ಷಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವಿಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದು. ಬೀಟಾ ಆವೃತ್ತಿಯಲ್ಲಿ ಇದು ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

Ad Widget . Ad Widget .

ಭಾರತ ಮಾತ್ರವಲ್ಲದೆ ಜಾಗತಿಕವಾಗಿ ವಾಟ್ಸ್​ಆ್ಯಪ್ ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹೊಸ ಹೊಸ ಫೀಚರ್​ಗಳನ್ನು ನೂತನ ಅಪ್​ಡೇಟ್ ಮೂಲಕ ವಾಟ್ಸ್​ಆ್ಯಪ್ ಒದಗಿಸುತ್ತದೆ. ಜತೆಗೆ ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ. ವಾಟ್ಸ್​ಆ್ಯಪ್ ಹೊಸ ಫೀಚರ್​ವೊಂದನ್ನು ಪರೀಕ್ಷಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವಿಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದು. ಬೀಟಾ ಆವೃತ್ತಿಯಲ್ಲಿ ಇದು ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ನಿಯರ್​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *