April 2024

ಹಾಸನದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ| ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಹಾಸನದಲ್ಲಿ ಮತದಾನ ಪ್ರಕ್ರಿಯೆ ಮುಗಿಯುವ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೆ.ಬಿ‌.ಪಾಳ್ಯದಲ್ಲಿ ನಡೆದಿದೆ. ಕೆ.ಬಿ.ಪಾಳ್ಯದ ಮತಗಟ್ಟೆ ಸಂಖ್ಯೆ 249ರ ಬಳಿ ಕಾಂಗ್ರೆಸ್‌ನ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಕೈ ಕಾರ್ಯಕರ್ತನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತಗಟ್ಟೆಗೆ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಅವರ ತಾಯಿ ಅನುಪಮಾ ಮಹೇಶ್ ಭೇಟಿ ನೀಡಿದ್ದರು. […]

ಹಾಸನದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ| ಕಾರ್ಯಕರ್ತರು ಆಸ್ಪತ್ರೆಗೆ ದಾಖಲು Read More »

ಗದಗ: ಬಾಲ್ಯವಿವಾಹ ತಡೆದ ಅಧಿಕಾರಿಗಳು|ಪೋಷಕರಿಂದ ಮುಚ್ಚಳಿಕೆ ಪತ್ರ

ಸಮಗ್ರ ನ್ಯೂಸ್: ಬಾಲ್ಯ ವಿವಾಹ ಅಪರಾಧ. ಹಿಂದೆ ಈ ಅನಿಷ್ಠ ಪದ್ಧತಿ ಇತ್ತು. ಆದರೆ ಈಗ ಈ ಪದ್ಧತಿಗೆ ಬ್ರೇಕ್ ಬಿದ್ದಿದೆ. ಆದ್ರೆ ಅಲ್ಲೊಂದು ಇಲ್ಲೊಂದು ಈ ವಿಚಾರ ಬೆಳಕಿಗೆ ಬರುವುದು ಮಾತ್ರ ತಪ್ಪಿಲ್ಲ. ಹೌದು, ಇಂದು ಗದಗದಲ್ಲಿ ನಡೀತಿದ್ದ ಬಾಲ್ಯ ವಿವಾಹವೊಂದಕ್ಕೆ ಅಧಿಕಾರಿಗಳು ಭೇಟಿ ನೀಡಿ ನಿಲ್ಲಿಸಿದ್ದಾರೆ. ನಗರದ ಕರ್ನಾಟಕ ಭವನದಲ್ಲಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಇಬ್ಬರು ಸಹೋದರರ ಮದುವೆ ನಿಶ್ಚಿಯ ಮಾಡಲಾಗಿತ್ತು. ಆದ್ರೆ, ಕಿರಿಯ ಸಹೋದರನ ಮದುವೆ ಆಗುತ್ತಿರುವ ಬಾಲಕಿಗೆ ಇನ್ನೂ 18

ಗದಗ: ಬಾಲ್ಯವಿವಾಹ ತಡೆದ ಅಧಿಕಾರಿಗಳು|ಪೋಷಕರಿಂದ ಮುಚ್ಚಳಿಕೆ ಪತ್ರ Read More »

ಮಂಡ್ಯ: ಮತ ಹಾಕಲು ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದ ಮಹಿಳೆ

ಸಮಗ್ರ ನ್ಯೂಸ್‌ : ಲಂಡನ್‌ನಿಂದ ಮಂಡ್ಯಕ್ಕೆ ಮಹಿಳೆಯೊಬ್ಬರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿಕೊಂಡು ಬಂದು ಮತ ಚಲಾಯಿಸಿದ ಘಟನೆ ಮಂಡ್ಯದ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋನಿಕಾ ಎಂಬಾಕೆ ಲಂಡನ್‌ನಿಂದ ಬಂದು ಕಾಳೇನ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದೇ ವೇಳೆ ಮಾತಾನಾಡಿದ ಸೋನಿಕಾ ಎಲ್ಲೆಡೆ ಬರ ಇದೆ ನಮ್ಮ ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯದಾಗಬೇಕು. ಮೋದಿ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ಮತ ಚಲಾಯಿಸಿದ್ದೀನಿ. ನೀವು

ಮಂಡ್ಯ: ಮತ ಹಾಕಲು ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಬಂದ ಮಹಿಳೆ Read More »

ಕಾರ್ಕಳ: ಕುದುರೆ ಏರಿ ಬಂದು ಮತದಾನ ಮಾಡಿದ ಯುವಕ

ಸಮಗ್ರ ನ್ಯೂಸ್ : ಯುವಕನೊಬ್ಬ ಕುದುರೆ ಏರಿ ಬಂದು ಮತದಾನ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದ ಘಟನೆ ಕಾರ್ಕಳದಲ್ಲಿ ನಡೆಯಿತು. ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ರವರ ಜೇಷ್ಠ ಪುತ್ರ ಏಕಲವ್ಯ ಆರ್ ಕಟೀಲ್ ಇಂದು ತಾನು ಸಾಕಿದ ಕುದುರೆಯನ್ನು ಏರಿ ಬೂತ್ ನಂ 87 ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಬಂದು ಮತ ಚಲಾಯಿಸುದರ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ಬೂತ್ ನಲ್ಲಿ ಇದ್ದ ಪಕ್ಷದ

ಕಾರ್ಕಳ: ಕುದುರೆ ಏರಿ ಬಂದು ಮತದಾನ ಮಾಡಿದ ಯುವಕ Read More »

ದ.ಕ ಜಿಲ್ಲೆಯ ಈ ಮತಗಟ್ಟೆಯಲ್ಲಿ ಶೇ.100 ಮತದಾನ| ದೇಶಕ್ಕೆ ಮಾದರಿಯಾದ ಕುಗ್ರಾಮದ ಮತದಾರರು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಎರಡನೇ ಹಂತದ (ಕರ್ನಾಟಕದಲ್ಲಿ ಮೊದಲ ಹಂತ) ಮತದಾನ ಇಂದು ನಡೆಯುತ್ತಿದ್ದು ದ.ಕ ಜಿಲ್ಲೆಯ ಬೆಳ್ತಂಗಡಿತಾಲೂಕಿನ ನೆರಿಯ ಗ್ರಾಮದ ಬಾಂಜಾರು ಮಲೆಯಲ್ಲಿ ಶೇ.100 ಮತದಾನವಾಗಿದೆ. ದ.ಕ‌ ಜಿಲ್ಲೆಯ ಅತ್ಯಂತ ಕುಗ್ರಾಮವಾಗಿರುವ ಬಾಂಜಾರು ಮಲೆಯ ಸಮುದಾಯ ಭವನದಲ್ಲಿ ನಡೆದ ಮತದಾನದಲ್ಲಿ ಎಲ್ಲರೂ ತಮ್ಮ ಹಕ್ಕುಗಳನ್ನು ಚಲಾಯಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನೂರು ಶೇಖಡಾ ಮತದಾನವಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಬಾಂಜಾರು ಮಲೆ ಮತಗಟ್ಟೆಯಲ್ಲಿ 4 ಗಂಟೆಯ ಸುಮಾರಿಗೆ ಶೇ.100

ದ.ಕ ಜಿಲ್ಲೆಯ ಈ ಮತಗಟ್ಟೆಯಲ್ಲಿ ಶೇ.100 ಮತದಾನ| ದೇಶಕ್ಕೆ ಮಾದರಿಯಾದ ಕುಗ್ರಾಮದ ಮತದಾರರು Read More »

ತಿಂಗಳಿಗೆ 44,000 ಕೊಡ್ತಾರೆ, ಈಗಲೇ ಅರ್ಜಿ ಸಲ್ಲಿಸಿ!

ಸಮಗ್ರ ಉದ್ಯೋಗ: ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಅಕಾಡೆಮಿಕ್ ಅಸೋಸಿಯೇಟ್- ಎಕನಾಮಿಕ್ಸ್​ ಏರಿಯಾ​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಏಪ್ರಿಲ್ 30, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ವಿದ್ಯಾರ್ಹತೆ:ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು

ತಿಂಗಳಿಗೆ 44,000 ಕೊಡ್ತಾರೆ, ಈಗಲೇ ಅರ್ಜಿ ಸಲ್ಲಿಸಿ! Read More »

ಉಡುಪಿ: ರಾಜೀವನಗರ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ

ಸಮಗ್ರ ನ್ಯೂಸ್‌ : ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 80ನೇ ಬಡಗಬೆಟ್ಟು ಗ್ರಾಪಂನ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೆ ವ್ಯಕ್ತಿ ಆಗಮಿಸಿ ಮತದಾನ ಮಾಡಿದ್ದು, ಇಲ್ಲಿ ನಕಲಿ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿವೆ. ಅರ್ಬಿಯ ಕೃಷ್ಣ ನಾಯಕ್ ಎಂಬವರು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದಾಗ ತಮ್ಮ ಹೆಸರಿನಲ್ಲಿ ಆಗಲೇ ಮತದಾನ ಮಾಡಿರುವುದಾಗಿ ಮತ ಗಟ್ಟೆ ಅಧಿಕಾರಿಗಳು ತಿಳಿಸಿದರು. ಆದರೆ ನಾನು ಮತದಾನ ಮಾಡಿಲ್ಲ ಎಂದು ಕೃಷ್ಣ ನಾಯಕ್ ವಾದ ಮಂಡಿಸಿದರು. ಇದರಿಂದ

ಉಡುಪಿ: ರಾಜೀವನಗರ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ Read More »

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ, ಉಪನ್ಯಾಸ

ಸಮಗ್ರ ನ್ಯೂಸ್: ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ಐ.ಎಸ್.ಟಿ.ಇ) ಇದರ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಅಣ್ಣಯ್ಯ ಕೆ. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.ವ್ರತ್ತಿಪರ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವ್ರತ್ತಿ ಅಭಿವ್ರದ್ಧಿ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಐ.ಎಸ್‌.ಟಿ.ಇ ಸಂಸ್ಥೆಯ ಬಗ್ಗೆ ಸಂಚಾಲಕ

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ, ಉಪನ್ಯಾಸ Read More »

ಚಾಮರಾಜನಗರ: ಇಂಡಿಗನತ್ತದಲ್ಲಿ ಮತ ಬಹಿಷ್ಕಾರ| ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದು ಮತಗಟ್ಟೆ ದ್ವಂಸ

ಸಮಗ್ರ ನ್ಯೂಸ್ : ಮತ ಬಹಿಷ್ಕಾರ ಹಾಕಿದ್ದ ಮತದಾರರನ್ನು ಮನವೊಲಿಸಲು ಯತ್ನಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್, ತಹಸೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೆ ಕೆರಳಿದ ಗುಂಪೊಂದು ಮಾತಿನ ಚಕಮಕಿಯಿಂದಾಗಿ ಮತಗಟ್ಟೆ ದ್ವಂಸ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಇರುವ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು. ಇದನ್ನು ಅರಿತ

ಚಾಮರಾಜನಗರ: ಇಂಡಿಗನತ್ತದಲ್ಲಿ ಮತ ಬಹಿಷ್ಕಾರ| ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದು ಮತಗಟ್ಟೆ ದ್ವಂಸ Read More »

ಪುತ್ತೂರು: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಸಮಗ್ರ ನ್ಯೂಸ್‌ : ಮತದಾನದ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಕಡಬದ ಬಿಳಿನೆಲೆ ಮತಗಟ್ಟೆ ಬಳಿ ನಡೆದಿದೆ. ಮತಗಟ್ಟೆ ಕೇಂದ್ರದ ಗೇಟಿನ ಬಳಿ ಪ್ರಚಾರಕ್ಕೆ ಯತ್ನಿಸಿದ್ದ ಒಂದು ರಾಜಕೀಯ ಪಕ್ಷದ ಕಾರ್ಯಕರ್ತರು ನಡೆಯನ್ನು ಇನ್ನೊಂದು ಪಕ್ಷದ ಕಾರ್ಯಕರ್ತರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಈ ಸಂದರ್ಭ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗುವ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ಚದುರಿಸಿದ್ದಾರೆ.

ಪುತ್ತೂರು: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ Read More »