April 2024

ಪ್ರಕ್ಷುಬ್ಧಗೊಳ್ಳುತ್ತಿರುವ ಸಮುದ್ರ/ ಬೇಕಲ ಕೋಟೆಯ ತೇಲುವ ಸೇತುವೆ ಸ್ಥಗಿತ

ಸಮಗ್ರ ನ್ಯೂಸ್: ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿರುವ ಪಳ್ಳಿಕೆರೆ ಬೇಕಲ ಕೋಟೆ ಬೀಚ್‌ನ ತೇಲುವ ಸೇತುವೆಯ ಸೇವೆಯನ್ನು ಅನಿರ್ದಿಷ್ಟಾವಧಿ ತನಕ ಸ್ಥಗಿತಗೊಳಿಸಲಾಗಿದೆ. ಕೆರಳದಲ್ಲಿ ಸಮುದ್ರ ಪದೇ ಪದೇ ಪಕ್ಷುಬ್ಧಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ತೇಲುವ ಸೇತುವೆ ಸೇವೆಯನ್ನು ಮುಂದಿನ ಸೂಚನೆ ಹೊರಬೀಳುವ ತನಕ ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ತಿಳಿಸಿದೆ. ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮ ಸಾರಥ್ಯದಲ್ಲಿ ಈ ಸೇತುವೆ ಕಾರ್ಯಾನಿರ್ವಹಿಸುತ್ತಿದೆ.

ಪ್ರಕ್ಷುಬ್ಧಗೊಳ್ಳುತ್ತಿರುವ ಸಮುದ್ರ/ ಬೇಕಲ ಕೋಟೆಯ ತೇಲುವ ಸೇತುವೆ ಸ್ಥಗಿತ Read More »

ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್​​ನಲ್ಲಿ ಉದ್ಯೋಗ ಖಾಲಿ ಇದೆ, ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 47 ಎಕ್ಸಿಕ್ಯೂಟಿವ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 15, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ. ಹುದ್ದೆಯ ಮಾಹಿತಿ:ಬಿಹಾರ- 5ದೆಹಲಿ- 1ಗುಜರಾತ್- 8ಹರಿಯಾಣ- 4ಜಾರ್ಖಂಡ್​-1ಕರ್ನಾಟಕ- 1ಮಧ್ಯ ಪ್ರದೇಶ- 3ಮಹಾರಾಷ್ಟ್ರ- 2ಒಡಿಶಾ- 1ಪಂಜಾಬ್​- 4ರಾಜಸ್ಥಾನ-

ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್​​ನಲ್ಲಿ ಉದ್ಯೋಗ ಖಾಲಿ ಇದೆ, ಬೇಗ ಅರ್ಜಿ ಸಲ್ಲಿಸಿ Read More »

ಲೋಕಸಭೆ ಚುನಾವಣೆಗ ಸಿಗದ ಟಿಕೆಟ್/ ರಾಜೀನಾಮೆ ನೀಡಿದ ಲೋಕ ಜನಶಕ್ತಿ ಪಕ್ಷದ ನಾಯಕರು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಲೋಕ ಜನಶಕ್ತಿ ಪಕ್ಷದ 22 ನಾಯಕರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ. ಚಿರಾಗ್ ಪಾಸ್ವಾನ್ ನೇತೃತ್ವದ ಪಕ್ಷದ ನಾಯಕರು ರಾಜೀನಾಮೆ ನೀಡಿದ್ದು, ಹಣಕ್ಕಾಗಿ ಟಿಕೆಟ್ ಮಾರಾಟದ ಆರೋಪ ಮಾಡಿದ್ದಾರೆ. ರಾಜೀನಾಮೆ ನೀಡಿದ ಪ್ರಮುಖರಲ್ಲಿ ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ಎಲ್‌ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾ‌ರ್, ರಾಜ್ಯ ಸಂಘಟನೆ ಸಚಿವ ರವೀಂದ್ರ ಸಿಂಗ್‌, ಅಜಯ್ ಕುಶ್ವಾಹ, ಸಂಜಯ್ ಸಿಂಗ್ ಮತ್ತು ರಾಜ್ಯ ಪ್ರಧಾನ

ಲೋಕಸಭೆ ಚುನಾವಣೆಗ ಸಿಗದ ಟಿಕೆಟ್/ ರಾಜೀನಾಮೆ ನೀಡಿದ ಲೋಕ ಜನಶಕ್ತಿ ಪಕ್ಷದ ನಾಯಕರು Read More »

ಬೀದರ್: ಹೊತ್ತಿ ಉರಿದ ಮೊಬೈಲ್ ಅಂಗಡಿ- 200ಕ್ಕೂ ಹೆಚ್ಚು ಮೊಬೈಲ್ ಗಳು ಬೆಂಕಿಗಾಹುತಿ

ಸಮಗ್ರ ನ್ಯೂಸ್‌ : ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ನೋಡನೋಡುತ್ತಿದ್ದಂತೆ ಇಡೀ ಅಂಗಡಿ ಹೊತ್ತಿ ಉರಿದ ಘಟನೆ ಬೀದರ್ ಜಿಲ್ಲೆಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಲೈಕ್ ಪಾಶಾ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಸಮಯದಲ್ಲೇ ಇಡೀ ಅಂಗಡಿ ಬೆಂಕಿಗಾಹುತಿಯಾಗಿದೆ. ಅಂಗಡಿಯಲ್ಲಿದ್ದ 200ಕ್ಕೂ ಹೆಚ್ಚು ಮೊಬೈಲ್ ಗಳು, ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು

ಬೀದರ್: ಹೊತ್ತಿ ಉರಿದ ಮೊಬೈಲ್ ಅಂಗಡಿ- 200ಕ್ಕೂ ಹೆಚ್ಚು ಮೊಬೈಲ್ ಗಳು ಬೆಂಕಿಗಾಹುತಿ Read More »

ನವದೆಹಲಿ : ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಿ ಎಂದು ಶಾಸಕರಿಗೆ ಪತ್ರ ಬರೆದ ಕೇಜ್ರಿವಾಲ್‌

ಸಮಗ್ರ ನ್ಯೂಸ್‌ : ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಜೈಲಿನಿಂದಲೇ ಎಲ್ಲಾ ಶಾಸಕರಿಗೆ ಸಂದೇಶವನ್ನು ರವಾನಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಪತ್ನಿ ಸುನಿತಾ ಕೇಜ್ರಿವಾಲ್‌ ಅವರು ಈ ಪತ್ರವನ್ನು ಮಾಧ್ಯಮಗಳ ಮುಂದೆ ಓದಿದ್ದಾರೆ. ನಾನು ಜೈಲಿನಲ್ಲಿರುವ ಕಾರಣ ದೆಹಲಿಯ ಜನರು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಬಾರದು. ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಬೇಕು ಎಂದಿದ್ದಾರೆ. ನಾನು ಜೈಲಿನಲ್ಲಿ ಇದ್ದೇನೆ ಎಂದು ದೆಹಲಿಯ ಜನರು ಯಾವುದೇ

ನವದೆಹಲಿ : ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಿ ಎಂದು ಶಾಸಕರಿಗೆ ಪತ್ರ ಬರೆದ ಕೇಜ್ರಿವಾಲ್‌ Read More »

ಲಕ್ನೋ: ಪತಿಯೂ ಬೇಕು, ಪ್ರೇಮಿಯೂ ಬೇಕೆಂದು ಮಹಿಳೆ ವಿದ್ಯುತ್‌ ಕಂಬವೇರಿ ಪ್ರತಿಭಟನೆ

ಸಮಗ್ರ ನ್ಯೂಸ್‌ : 34 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧ ಇಟ್ಟುಕೊಂಡು ಪತಿ ಹಾಗೂ ಪ್ರಿಯತಮ ಇಬ್ಬರೂ ನನಗೆ ಬೇಕು ಎಂದು ಹೇಳಿ ವಿದ್ಯುತ್‌ ಕಂಬವೇರಿ ಮಹಿಳೆ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶದ ಪಟ್ಟಣವೊಂದರಲ್ಲಿ ನಡೆದಿದೆ. ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಆಕೆ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಳು. ಕಳೆದ 7 ವರ್ಷಗಳಿಂದ ಪತಿಗೆ ತಿಳಿಯದಂತೆ ಇವರಿಬ್ಬರ ಪ್ರೇಮ ಪುರಾಣ ನಡೆಯುತ್ತಿತ್ತು. ಮಹಿಳೆಯ ಪತಿ ರಾಮ್ ಗೋವಿಂದ್

ಲಕ್ನೋ: ಪತಿಯೂ ಬೇಕು, ಪ್ರೇಮಿಯೂ ಬೇಕೆಂದು ಮಹಿಳೆ ವಿದ್ಯುತ್‌ ಕಂಬವೇರಿ ಪ್ರತಿಭಟನೆ Read More »

ಚಾಮರಾಜನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಂದಿ ದಾಳಿ

ಸಮಗ್ರ ನ್ಯೂಸ್‌ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಂದಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ನಡೆದಿದೆ. ತೆಂಕಲಹುಂಡಿ ಗ್ರಾಮದ ಬೆಳ್ಳೆಗೌಡ(70) ಕಾಡಂದಿ ದಾಳಿಗೆ ತುತ್ತಾದ ರೈತ. ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡಂದಿ ರೈತನ ತೊಡೆ ಮತ್ತು ಕಾಲಿಗೆ ಕೋರೆಯಿಂದ ಬಲವಾಗಿ ತಿವಿದ ಪರಿಣಾಮ ರೈತ ಬೆಳ್ಳೆಗೌಡ ಕೂಗಿಕೊಂಡಿದ್ದಾರೆ. ರೈತನ ಚೀರಾಟ ನೋಡಿ ಅಕ್ಕಪಕ್ಕದ ಜಮೀನಿನವರು ಸ್ಥಳಕ್ಕೆ ಬರುವಷ್ಟರಲ್ಲಿ ರೈತನ ಮೇಲೆರಗಿದ್ದ

ಚಾಮರಾಜನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಂದಿ ದಾಳಿ Read More »

ವಿಜಯಪುರ:ದೇಶಕ್ಕೆ ಕಾಂಗ್ರೆಸ್ ಮಾತ್ರ ಶಕ್ತಿ; ಆಲಗೂರ

ಸಮಗ್ರ ನ್ಯೂಸ್ : ದೇಶಕ್ಕೆ ಕಾಂಗ್ರೆಸ್ ಮಾತ್ರ ಶಕ್ತಿ ಎಂದು ಲೋಕಸಭೆ ಕಾಂಗ್ರೆಸ್ ಅಭ್ರ‍್ಥಿ ರಾಜು ಆಲಗೂರ ಹೇಳಿದರು. ಸಿಂದಗಿ ಮತಕ್ಷೇತ್ರದ ತಾಂಬಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶವೀಗ ಬದಲಾವಣೆ ಬಯಸಿದೆ. ವಿಜಯಪುರ ಲೋಕಸಭೆ ಕ್ಷೇತ್ರದ ಜನರೂ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ. ತಮಗೆ ಮತ ನೀಡಿ ಆರಿಸಿ ಕಳಿಸಿದ್ದೇ ಆದರೆ, ಜಿಲ್ಲೆ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಮಾಡಿ ತೋರಿಸುವೆ. ನಿಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವೆ ಎಂದು ಭರವಸೆ ನೀಡಿದರು. ಶಾಸಕರಾದ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ

ವಿಜಯಪುರ:ದೇಶಕ್ಕೆ ಕಾಂಗ್ರೆಸ್ ಮಾತ್ರ ಶಕ್ತಿ; ಆಲಗೂರ Read More »

ದೆಹಲಿ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ದೆಹಲಿ ಟೆಕ್ನಾಲಜಿ ಯೂನಿವರ್ಸಿಟಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 12, 2024 ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಬಿಇ ಅಥವಾ ಬಿ.ಟೆಕ್, ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ವಿದ್ಯಾರ್ಹತೆ:ದೆಹಲಿ ಟೆಕ್ನಾಲಜಿ ಯೂನಿವರ್ಸಿಟಿ ಖಾಲಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಡಿಪ್ಲೊಮಾ

ದೆಹಲಿ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ Read More »

ಚಿಕ್ಕಮಗಳೂರು : ಸಂವಿಧಾನ ಬದ್ದವಾದ ಮತದಾನ ಮಾಡಿ -ಪೂರ್ಣಿಮಾ

ಸಮಗ್ರ ನ್ಯೂಸ್‌ : ಸಂವಿಧಾನ ಬದ್ದವಾದ ನಮ್ಮ ಮತ ನಮ್ಮ ಹಕ್ಕು ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮ ಮತದಾರರಲ್ಲಿ ಮನವಿ ಮಾಡಿದರು. ಅವರು ತಾಲೂಕು ಪಂಚಾಯಿತಿ ವತಿಯಿಂದ ಆಜಾದ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅಂಗವಾಗಿ ಕ್ಯಾಂಡಲ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಹಬ್ಬದಲ್ಲಿ ಮತದಾರರು ಸಂಭ್ರಮದಿಂದ ಪಾಲ್ಗೊಳ್ಳಬೇಕು. ತಾಲೂಕು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೆ,

ಚಿಕ್ಕಮಗಳೂರು : ಸಂವಿಧಾನ ಬದ್ದವಾದ ಮತದಾನ ಮಾಡಿ -ಪೂರ್ಣಿಮಾ Read More »