April 2024

ನವದೆಹಲಿ: ಆನ್‌ಲೈನ್ ವಂಚನೆಯಿಂದ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಹನ್ನೊಂದನೇ ತರಗತಿಯ ಯುವಕ ತಾಯಿಯ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ವೇಳೆ ವಂಚಕರು ಆ ಮೊಬೈಲ್ ಗೆ ಲಿಂಕ್ ಕಳುಹಿಸಿ ಆತನ ತಂದೆಯ ಬ್ಯಾಂಕ್ ಅಕೌಂಟ್ನಿಂದ ಸುಮಾರು 2 ಲಕ್ಷ ರೂ. ದೋಚಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ನಲಸೊಪರದ ಯುವಕ ಏಪ್ರಿಲ್ 3 ರಂದು ತನ್ನ ತಾಯಿಯ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ. ಆ ವೇಳೆ ವಂಚಕರು ಲಿಂಕ್ ಒಂದನ್ನು ಮೊಬೈಲ್ಗೆ ಕಳುಹಿಸಿದ್ದರು. ಆತ ತಪ್ಪಿ ಆ […]

ನವದೆಹಲಿ: ಆನ್‌ಲೈನ್ ವಂಚನೆಯಿಂದ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ Read More »

ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು;ಪೇಜಾವರ ಶ್ರೀ

ವಿಜಯಪುರ : ಸರ್ಕಾರ ಒಂದು ಕೋಮಿನ ಅಥವಾ ಗುಂಪಿನ ಸ್ವತ್ತಲ್ಲ -ಪೇಜಾವರ ಶ್ರೀ ಸಮಗ್ರ ನ್ಯೂಸ್‌ : ಸರ್ಕಾರ ಒಂದು ಕೋಮಿನ ಅಥವಾ ಗುಂಪಿನ ಸ್ವತ್ತಲ್ಲ. ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿದ್ದವರ ಕರ್ತವ್ಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಶ್ರೀಗಳು ಹೇಳಿದರು. ಅವರು ವಿಜಯಪುರದಲ್ಲಿ ಮಾತನಾಡಿ, ನಗರ್ತ್‍ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿ ಹಲ್ಲೆಗೊಳಗಾದ ಮುಖೇಶ್ ಮೇಲೆ ಕೇಸ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕಬಾರದು. ಎಲ್ಲಾ ಸಮಾಜಗಳನ್ನು ಒಟ್ಟಾಗಿ

ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು;ಪೇಜಾವರ ಶ್ರೀ Read More »

ವಿಜಯಪುರ: ನಮ್ಮ ಸ್ಪರ್ಧೆ ಭ್ರಷ್ಟ, ದೇಶ ವಿರೋಧಿ ಸರಕಾರದ ಜೊತೆ;ರಾಜು ಆಲಗೂರ

ಸಮಗ್ರ ನ್ಯೂಸ್‌ : ನಮ್ಮ ಹೋರಾಟ ಸರ್ವಾಧಿಕಾರಿ ಆಡಳಿತ ಹಾಗೂ ಭ್ರಷ್ಟ ಕೇಂದ್ರ ಸರಕಾರದ ವಿರುದ್ಧ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು. ದೇವರಹಿಪ್ಪರಗಿ ಮತಕ್ಷೇತ್ರದ ಹುಣಶ್ಯಾಳದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರ ಹಿತ ಕಾಪಾಡದ ಪ್ರಧಾನಿ ಮೋದಿಯವರು ಮೊದಲ ಸಲ ಆರಿಸಿ ಬಂದ ನಂತರ ಹೇಳಿದ್ದ ಯಾವ ಮಾತನ್ನೂ ಉಳಿಸಿಕೊಂಡಿಲ್ಲ. ಅದರ ಬದಲು ಅವರು ಜನರ ಜೀವನ ಕಸಿದುಕೊಂಡಿದ್ದಾರೆ. ಹಿಂದಿನ ನಮ್ಮ ಕೆಟ್ಟ ದಿನಗಳೇ ಒಳ್ಳೆಯದಾಗಿದ್ದವು ಎಂದು ಹೇಳಿದರು.

ವಿಜಯಪುರ: ನಮ್ಮ ಸ್ಪರ್ಧೆ ಭ್ರಷ್ಟ, ದೇಶ ವಿರೋಧಿ ಸರಕಾರದ ಜೊತೆ;ರಾಜು ಆಲಗೂರ Read More »

ನಂಜನಗೂಡು: ತಾಂಡವಪುರ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ರೂ. ಹಣ ಸೀಜ್

ಸಮಗ್ರ ನ್ಯೂಸ್‌ : ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಂಡವಪುರ ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿ ಒಬ್ಬ ಕಾರಿನಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಸುಮಾರು ಒಂದು ಲಕ್ಷ ರು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು.ಈ ವೇಳೆ ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ

ನಂಜನಗೂಡು: ತಾಂಡವಪುರ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ರೂ. ಹಣ ಸೀಜ್ Read More »

ಲಡಾಖ್‌: ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ

ಸಮಗ್ರ ನ್ಯೂಸ್‌ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 80 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಭಾನುವಾರ ಮಾಹಿತಿ ನೀಡಿದೆ. ತ್ರಿಶೂಲ್ ವಿಭಾಗದ ಸೈನಿಕರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್‌ ತಿಳಿಸಿದೆ. ಚಾಂಗ್ ಲಾದ ಹಿಮಾವೃತ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿತ್ತು. ಮಾಹಿತಿ ತಿಳಿದ ತ್ರಿಶೂಲ್ ವಿಭಾಗದ ಸೈನಿಕರು

ಲಡಾಖ್‌: ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ Read More »

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಕೋಟ

ಸಮಗ್ರ ನ್ಯೂಸ್‌ : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಜಿ ಪ್ರಧಾನಿ, ಜೆಡಿಎಸ್ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ನಾನು ಅತ್ಯಂತ ಗೌರವಿಸುವ ನಾಯಕರಲ್ಲಿ ದೇವೇಗೌಡರೂ ಒಬ್ಬರು. ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದಾಗಲೂ ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಾ ಎಂದು ದೇವೇಗೌಡರು ಆಶೀರ್ವದಿಸಿದರು ಎಂದು ಕೋಟ ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಕೋಟ Read More »

ಹುಬ್ಬಳ್ಳಿ:ಹನುಮಾನ್‌ ಚಾಲೀಸಾ ಎಫ್‌ಐಆರ್‌ ಪ್ರಕರಣ|ಕೂಡಲೇ ಕೈ ಬಿಡುವಂತೆ ಜೋಶಿ ಆಗ್ರಹ

ಸಮಗ್ರ ನ್ಯೂಸ್‌ : ನಗರ್ತ ಪೇಟೆಯ ಮೊಬೈಲ್‌ ಅಂಗಡಿಯೊಂದರಲ್ಲಿ ಇತ್ತೀಚೆಗೆ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆಸಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ದೂರು ದಾಖಲಾಗಿರುವುದನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಟುವಾಗಿ ಖಂಡಿಸಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಭಾನುವಾರ (ಎ.7) ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಲ್ಹಾದ್‌ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹನುಮಾನ್ ಚಾಲೀಸಾ ಆಡಿಯೊ ಹಾಕಿದ್ದವರ ಮೇಲೆ ಎಫ್‌ಐಆರ್‌ ಹಾಕಿರುವುದು ಎಷ್ಟು ಸರಿ? ಇವರೇನು ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ?

ಹುಬ್ಬಳ್ಳಿ:ಹನುಮಾನ್‌ ಚಾಲೀಸಾ ಎಫ್‌ಐಆರ್‌ ಪ್ರಕರಣ|ಕೂಡಲೇ ಕೈ ಬಿಡುವಂತೆ ಜೋಶಿ ಆಗ್ರಹ Read More »

ರಾಮನಗರ: ಯಲವನತ್ತ ಕಾಡಂಚಿನಲ್ಲಿ ಎರಡು ಕಾಡಾನೆಗಳು ಸಾವು

ಸಮಗ್ರ ನ್ಯೂಸ್‌ : ಬಿಸಿಲಿನ ಬೇಗೆ ತಾಳಲಾರದೆ ಕನಕಪುರ ತಾಲೂಕಿನ ಯಲವನತ್ತ ಅರಣ್ಯಪ್ರದೇಶ ಹಾಗೂ ಬೆಟ್ಟಹಳ್ಳಿ ಬೀಟ್‌ನಲ್ಲಿ 35 ಹಾಗೂ 14 ವರ್ಷದ ಎರಡು ಕಾಡಾನೆಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ 14 ವರ್ಷದ ಒಂಟಿ ಸಲಗ ನಿತ್ರಾಣಗೊಂಡಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ ಇದೀಗ ಕಾಡಂಚಿನಲ್ಲಿ ಕೊನೆಯುಸಿರೆಳೆದಿದೆ. ಕಾಡಿನಲ್ಲಿ ಕುಡಿಯಲು ನೀರು ಸಿಗದೆ ಪರದಾಡಿ ನಿತ್ರಾಣಗೊಂಡು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಎಫ್‌ಓ

ರಾಮನಗರ: ಯಲವನತ್ತ ಕಾಡಂಚಿನಲ್ಲಿ ಎರಡು ಕಾಡಾನೆಗಳು ಸಾವು Read More »

ಹೆಣ್ಣುಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ; ಜಗ್ಗೇಶ್

ಸಮಗ್ರ ನ್ಯೂಸ್‌ : ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರ್‌ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದವರಿಗೆ ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕೊಟ್ಟಿದ್ದು, ಹೆಣ್ಣುಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ ಎಂದು ಜಗ್ಗೇಶ್ ಶಾಪ ಹಾಕಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು. ತಾಯಿ ಬೆಲೆ ಗೊತ್ತಿರಬೇಕು. ಒಂದು ವೇಳೆ, ತಾಯಿ

ಹೆಣ್ಣುಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ; ಜಗ್ಗೇಶ್ Read More »

5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆ/ ಇಂದು ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಾ.11,12 ಮತ್ತು 25ರಿಂದ 28ರವರೆಗೆ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಮೌಲ್ಯಾಂಕನದ ಪರೀಕ್ಷೆಯ ಫಲಿತಾಂಶವನ್ನು ಶಾಲೆಗಳಲ್ಲಿ ಏ.8ರಂದು ಪ್ರಕಟಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ. ಏ.2ರೊಳಗೆ ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ಮರು ರವಾನಿಸಲು ಸೂಚಿಸಲಾಗಿತ್ತು. ಹಾಗೆಯೇ ಈ ವಿದ್ಯಾರ್ಥಿಗಳ ಫಲಿತಾಂಶವನ್ನು ಏ.8ರಂದು ನಡೆಸುವ

5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆ/ ಇಂದು ಫಲಿತಾಂಶ ಪ್ರಕಟ Read More »