April 2024

ಚಿಕ್ಕೋಡಿ:ಚುಣಾವಣಾ ಪ್ರಚಾರದಿಂದ ಹಿಂದುಳಿದ ರಮೇಶ್ ಕತ್ತಿ, ಜೋಲ್ಲೆಗೆ ಎದುರಾದ ಸೋಲಿನ ಭೀತಿ|ಜಂಟಿ ಪಕ್ಷವಿದ್ದರೂ ಕ್ಷೇತ್ರದಲ್ಲಿ ಒಂಟಿಯಾದ್ರಾ ಜೊಲ್ಲೆ.!?

ಸಮಗ್ರ ನ್ಯೂಸ್: ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಕಾಂಗ್ರೆಸ್ ಪಕ್ಷದಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಬಲ ಪ್ರದರ್ಶನ ಮಾಡುತ್ತಾ ಭರ್ಜರಿ ಚುನಾವಣೆ ಪ್ರಚಾರ ಮಾಡಿ ಮತಯಾಚನೆ ನಡೆಸುತ್ತಿದ್ದಾರೆ. ಆದರೆ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೇಗೆ ಸೋಲಿನ ಭೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿಕ್ಕೋಡಿ ಬಿಜೆಪಿ ಲೋಕಸಭೆ ಟಿಕೆಟ್ ಪ್ರಭಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ ರಮೇಶ್ ಕತ್ತಿ ಅವರು ಯಾವುದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುತ್ತಿಲ್ಲ, ಟಿಕೆಟ್ […]

ಚಿಕ್ಕೋಡಿ:ಚುಣಾವಣಾ ಪ್ರಚಾರದಿಂದ ಹಿಂದುಳಿದ ರಮೇಶ್ ಕತ್ತಿ, ಜೋಲ್ಲೆಗೆ ಎದುರಾದ ಸೋಲಿನ ಭೀತಿ|ಜಂಟಿ ಪಕ್ಷವಿದ್ದರೂ ಕ್ಷೇತ್ರದಲ್ಲಿ ಒಂಟಿಯಾದ್ರಾ ಜೊಲ್ಲೆ.!? Read More »

ನವದೆಹಲಿ: ಮಾವಿನ ಹಣ್ಣು ತಿಂದು ಶುಗರ್‌ ಲೆವೆಲ್ ಏರಿಸಿಕೊಂಡ ಕೇಜ್ರಿವಾಲ್

ಸಮಗ್ರ ನ್ಯೂಸ್‌ : ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರ ಶುಗರ್ ಲೆವಲ್‌ನಲ್ಲಿ ವ್ಯತ್ಯಾಸ ಆಗುತ್ತಿದ್ದು, ಹೆಲ್ತ್ ಚೆಕಪ್ ಮಾಡಿಸಬೇಕು ಎಂದು ದೆಹಲಿ ರೋಸ್ ಅವೆನ್ಯೂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಅವರ ಆರೋಗ್ಯದ ಕುರಿತು ರೋಸ್ ಅವೆನ್ಯೂ ಕೋರ್ಟ್‌ಗೆ ಇ.ಡಿ ಪರ ವಕೀಲರು ಮಾಹಿತಿ ನೀಡಿದ್ದು, ಕೇಜ್ರಿವಾಲ್ ಅವರು ಜೈಲಿನಲ್ಲಿ ಮಾವಿನ ಹಣ್ಣು ತಿಂದು

ನವದೆಹಲಿ: ಮಾವಿನ ಹಣ್ಣು ತಿಂದು ಶುಗರ್‌ ಲೆವೆಲ್ ಏರಿಸಿಕೊಂಡ ಕೇಜ್ರಿವಾಲ್ Read More »

ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ

ಸಮಗ್ರ ನ್ಯೂಸ್‌ : ಪ್ರಧಾನಿಯವರ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಖುದ್ದು ಮೋದಿಯವರಿಗೇ ನೀಡಿರುವ ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿಯವರ ಕಚೇರಿಯಿಂದ ಬುಧವಾರ ಕರೆ ಬಂದಿದ್ದು, ಮೆಚ್ಚುಗೆ ಪತ್ರ ನೀಡಿದ್ದಾರೆ. ತೊಕ್ಕೊಟ್ಟುವಿನ ಪಿಲಾರ್ ನ ಕಲಾವಿದ ಕಿರಣ್ ಸಿ. ಅವರು ಮೋದಿಯವರ ಚಿತ್ರ ಬಿಡಿಸಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ರೋಡ್ ಶೋ ವೇಳೆ ಪ್ರದರ್ಶಿಸಿದ್ದಾರೆ. ಇದನ್ನು ಮೋದಿಯವರು ಗಮನಿಸಿ, ತಕ್ಷಣ ಎಸ್ ಪಿ ಜಿ ಕಮಾಂಡೊ ಮೂಲಕ ಚಿತ್ರವನ್ನು ತರಿಸಿ

ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ Read More »

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಎಂದ ಕುಮಾರಸ್ವಾಮಿ

ಸಮಗ್ರ ನ್ಯೂಸ್‌ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದಾಗಲೆಲ್ಲ ಬರ ಪರಿಸ್ಥಿತಿ ತಲೆದೋರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಅವರು ಸಂಸದ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆಯ ನಂತರ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ಸರ್ಕಾರ ಮಾಡಿದ್ದೆ. ಬಿ.ಎಸ್.ಯಡಿಯೂರಪ್ಪ , ಬಸವರಾಜ್ ಬೊಮ್ಮಾಯಿ ಸರ್ಕಾರ ಮಾಡಿದ್ದಾರೆ. ಆಗೆಲ್ಲಾ ಬರ ಬಂದಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬಂದಿದೆ ಎಂದರು. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳ

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಎಂದ ಕುಮಾರಸ್ವಾಮಿ Read More »

ಚಾಮರಾಜನಗರ: ಕಾಡಾನೆ ದಾಳಿಯಿಂದ ವ್ಯಕ್ತಿ ಸ್ಥಳದಲ್ಲೇ ಮೃತ್ಯು

ಸಮಗ್ರ ನ್ಯೂಸ್‌ : ಚಾಮರಾಜನಗರ ಜಿಲ್ಲೆಯ ಹನೂರು ಗುಂಡಿಮಾಳ ಗ್ರಾಮದಿಂದ ಹೊಸಪೋಡು ಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಒಡೆಯರ ಪಾಳ್ಯ ಸಮೀಪದ ಹೊಸ ಪೋಡು ಗ್ರಾಮದ ಈರಾ (61) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಾರ್ಯನಿಮಿತ್ತ ಒಡೆಯರ ಪಾಳ್ಯ ಗ್ರಾಮಕ್ಕೆ ಆಗಮಿಸಿದ್ದ ಹೊಸ ಫೋಡು ಗ್ರಾಮದ ನಿವಾಸಿ ಈರ ಎಂಬಾತ ಕೆಲಸ ಮುಗಿದ ಮೇಲೆ ಗುಂಡಿಮಾಳದ ವರಗೆ ಬಸ್ ನಲ್ಲಿ ಪ್ರಯಾಣಿಸಿ ನಂತರ ಹೊಸ ಪೋಡು

ಚಾಮರಾಜನಗರ: ಕಾಡಾನೆ ದಾಳಿಯಿಂದ ವ್ಯಕ್ತಿ ಸ್ಥಳದಲ್ಲೇ ಮೃತ್ಯು Read More »

ಕೋಲ್ಕತ್ತ: ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ| ನಾಲ್ವರು ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : ರಾಮನವಮಿ ಮೆರವಣಿಗೆಯ ಸಮಯದಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ 9.10ರ ಸುಮಾರಿಗೆ ಎಗ್ರಾದ ಸಮೀಪ ಮೆರವಣಿಗೆ ಸಾಗುತ್ತಿದ್ದಾಗ ಘಟನೆ ನಡೆದಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸದ್ಯ

ಕೋಲ್ಕತ್ತ: ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ| ನಾಲ್ವರು ಪೊಲೀಸರ ವಶಕ್ಕೆ Read More »

ದೇವಸ್ಥಾನಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ

ಸಮಗ್ರ ನ್ಯೂಸ್‌: ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಚೈತ್ರ ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ ಭಾರತದ ಪ್ರಮುಖ ಎರಡು ದೇವಾಲಯಗಳಾದ ಒಡಿಶಾದ ಪುರಿ ಜಗನ್ನಾಥ ದೇವಾಲಯ ಮತ್ತು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಒಂದೊಂದು ದೇವಸ್ಥಾನಕ್ಕೂ ತಲಾ 2,51,00,000 ರೂ. ಅಂದರೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದಾರೆ. ಹಿಂದೂ ಧರ್ಮ ಹಾಗೂ ದೇವಾಲಯದ ಬಗ್ಗೆ ಅಪಾರ ಗೌರವ ಹೊಂದಿರುವ ಅಂಬಾನಿ ಕುಟುಂಬ ಆಗಾಗ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ.

ದೇವಸ್ಥಾನಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ Read More »

ಹಾಸನ: ಕಾರು ಡಿಕ್ಕಿ ಹೊಡೆದು ಸೈಕಲ್‌ ಸವಾರ ಮೃತ್ಯು

ಸಮಗ್ರ ನ್ಯೂಸ್‌ : ಸೈಕಲ್‌ನಲ್ಲಿ ತೆರಳುತ್ತಿದ್ದ ವೃದ್ಧನಿಗೆ ಕಾಟೀಹಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ನಗರದ ಡೈರಿ ಸರ್ಕಲ್ ಬಳಿ ನಡೆದಿದೆ. ಶ್ರೀರಾಮನಗರದ ನಿವಾಸಿ ಆನಂದ್ (60) ಮೃತ ದುರ್ದೈವಿ. ಕಾರಿನ ಡಿಕ್ಕಿ ರಭಸಕ್ಕೆ ಕೆಳಗೆ ಹಾರಿ ಬಿದ್ದ ಆನಂದ್‌ ಅವರ ಮುಖವೇ ಅಪ್ಪಚ್ಚಿ ಆಗಿತ್ತು. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಹಾಸನ ಸಂಚಾರಿ

ಹಾಸನ: ಕಾರು ಡಿಕ್ಕಿ ಹೊಡೆದು ಸೈಕಲ್‌ ಸವಾರ ಮೃತ್ಯು Read More »

ಮಂಗಳೂರು: ಯುವ ದಂತವೈದ್ಯೆ ಹಠಾತ್ ಸಾವು

ಸಮಗ್ರ ವಾರ್ತೆ: ಯುವ ದಂತ ವೈದ್ಯೆಯೊಬ್ಬರು ಹಠಾತ್ತಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಾಂಡೇಶ್ವರ ಪಿಜಿಯಲ್ಲಿ ನಡೆದಿದೆ. ಮೃತರನ್ನು ಡಾ. ಸ್ವಾತಿ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಮಂಗಳವಾರದಿಂದ ನಗರದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತನಕ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದ ಸ್ವಾತಿ ಸೋಮವಾರ ಸಂಜೆ ಮನೆಯಿಂದ ಪಾಂಡೇಶ್ವರದ ಪಿಜಿಗೆ ಬಂದು ತಂಗಿದ್ದರು. ರಾತ್ರಿ ತಾಯಿ ತಂದೆ ಜತೆಗೆ ಮೊಬೈಲ್

ಮಂಗಳೂರು: ಯುವ ದಂತವೈದ್ಯೆ ಹಠಾತ್ ಸಾವು Read More »

ಚಿತ್ರದುರ್ಗ: ಗಂಡನ ಮನೆಯಲ್ಲಿ ಕಿರುಕುಳ- ಮಹಿಳೆ ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ನಡೆದಿದೆ. ಆಶಾ (26) ಮೃತ ದುರ್ದೈವಿ. ಮಕ್ಕಳಾಗಿಲ್ಲ ಎಂಬ ಕಾರಣವನ್ನೇ ನೆಪವನ್ನಾಗಿ ಇಟ್ಟುಕೊಂಡು ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆಶಾಗೆ, ಮದುವೆ ಆಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಆಶಾಗೆ ತವರು ಮನೆಗೆ ವಾಪಸ್‌ ಕಳಿಸುತ್ತೇನೆ ಎಂದು ಅತ್ತೆ ಹಿಂಸೆ

ಚಿತ್ರದುರ್ಗ: ಗಂಡನ ಮನೆಯಲ್ಲಿ ಕಿರುಕುಳ- ಮಹಿಳೆ ಆತ್ಮಹತ್ಯೆ Read More »