April 2024

ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ IG ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ನಾಟಕ ಬ್ಯಾಂಕ್​ನ ಶಾಖೆಯ ಕೆಳಭಾಗದಲ್ಲಿರುವ ಎಟಿಎಂಗೆ (ATM) ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಈ ಅವಘಡ ಸಂಭವಿಸಿದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ Read More »

ಹುಬ್ಬಳ್ಳಿ :ನೇಹಾ ಹಿರೇಮಠ ಹತ್ಯೆ ಪ್ರಕರಣ- ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಬಂದ್‌ಗೆ ಕರೆ

ಸಮಗ್ರ ನ್ಯೂಸ್‌ : ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಆವರಣದಲ್ಲಿ ಭೀಕರವಾಗಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಸಾವಿಗೆ ನ್ಯಾಯ ಕೊಡಿಸಲು ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ ನೀಡಿದೆ. ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಬಂದ್ ಕರಪತ್ರ ಅಂಟಿಸಿ ಸಹೋದರಿ ನೇಹಾ ಸಾವಿಗೆ ನ್ಯಾಯ ಕೊಡಿಸಲು ಕೈ ಜೋಡಿಸುವಂತೆ ಮನವಿ ಮಾಡಲಾಗುತ್ತಿದೆ. ನೇಹಾ ಕೊಲೆಗೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಈಗ ಮುಸ್ಲಿಂ ಸಮುದಾಯ ಕೂಡ ನೇಹಾ ಕುಟುಂಬಕ್ಕೆ ನ್ಯಾಯ ಕೊಡಿಸಲು ಜೊತೆಗೂಡಿದೆ.

ಹುಬ್ಬಳ್ಳಿ :ನೇಹಾ ಹಿರೇಮಠ ಹತ್ಯೆ ಪ್ರಕರಣ- ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಬಂದ್‌ಗೆ ಕರೆ Read More »

ನಂಜನಗೂಡಿನಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಸಮಗ್ರ ನ್ಯೂಸ್‌ : ಚಾಮರಾಜನಗರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಎಸ್.ಬಾಲರಾಜು ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ನಂಜನಗೂಡು ನಗರದ ಆರ್‌ಪಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಾಲಯದ ಮುಂಭಾಗದಲ್ಲಿ ಬಿವೈ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು. ಆರ್ ಪಿ ರಸ್ತೆಯ ಮೂಲಕ ನಗರದ ಬಜಾರ್ ರಸ್ತೆಯಲ್ಲಿ ರೋಡ್ ಶೋ ನಡೆಸಿ ಬಿರುಸಿನ ಮತ ಪ್ರಚಾರ ನಡೆಸಿದ್ದಾರೆ. ಬಳಿಕ ಮಾತನಾಡಿದ

ನಂಜನಗೂಡಿನಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ Read More »

ಸುಳ್ಯ: ವರ್ಷ ಕಳೆದರೂ ಉದ್ಘಾಟನೆ‌ ಭಾಗ್ಯ ಕಾಣದ ವಿದ್ಯುತ್ ಪರಿವರ್ತಕ| ಮನವಿಗಳಿಗೂ ಕಿಮ್ಮತ್ತು ಕೊಡದ ಮೆಸ್ಕಾಂ

ಸಮಗ್ರ ನ್ಯೂಸ್: ಸ್ಥಾಪನೆ ಮಾಡಿ ಎರಡು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಟ್ರಾನ್ಸ್ ಫಾರ್ಮರ್ ಒಂದಕ್ಕೆ ಗ್ರಹಣ ಹಿಡಿದ ಘಟನೆ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಂಡುಬರುತ್ತಿದೆ. ಐವರ್ನಾಡು ಗ್ರಾಮದ ಬದಂತಡ್ಕ ಕೊಯಿಲ ಎಂಬಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಕಳೆದ ಒಂದು ವರ್ಷಗಳ ಹಿಂದೆ ಟಿಸಿ ಅಳವಡಿಸಲಾಗಿತ್ತು.‌ ಆರಂಭದಲ್ಲಿ ಚುರುಕಿನಿಂದ‌ ಕೆಲಸ ಪ್ರಾರಂಭಿಸಿ ಟಿಸಿ ಸ್ಥಾಪನೆ ಮಾಡಲಾಗಿದೆ. ಅದಾದ‌ ಬಳಿಕ ಸಂಪರ್ಕ ಇದುವರೆಗೆ ಲಭಿಸಿಲ್ಲ. ಈ ಕುರಿತಂತೆ ಗ್ರಾಮಸ್ಥರು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಇನ್ನು

ಸುಳ್ಯ: ವರ್ಷ ಕಳೆದರೂ ಉದ್ಘಾಟನೆ‌ ಭಾಗ್ಯ ಕಾಣದ ವಿದ್ಯುತ್ ಪರಿವರ್ತಕ| ಮನವಿಗಳಿಗೂ ಕಿಮ್ಮತ್ತು ಕೊಡದ ಮೆಸ್ಕಾಂ Read More »

ನೀತಿ ಸಂಹಿತೆ ಉಲ್ಲಂಘಿಸಿದ ಪ್ರಧಾನಿ ಮೋದಿ| ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣಗೈದು ವಿವಾದ

ಸಮಗ್ರ ನ್ಯೂಸ್: ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ಧರ್ಮವನ್ನು ತಮ್ಮ ಚುನಾವಣಾ ಭಾಷಣದಲ್ಲಿ ಎಳೆದು ತರುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. “ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸ್ಲಿಂ ಸಮುದಾಯಕ್ಕೆ ಎಂದು ಈ ಹಿಂದಿದ್ದ ಕಾಂಗ್ರೆಸ್ ಸರಕಾರ ಹೇಳಿತ್ತು. ಇದರ ತಾತ್ಪರ್ಯವೆಂದರೆ, ಯಾರಿಗೆ ಹೆಚ್ಚು ಮಕ್ಕಳಿದ್ದಾರೊ ಅವರಿಗೆ ದೇಶದ ಸಂಪತ್ತನ್ನು ಹಂಚುವುದಾಗಿದೆ. ಈ ಸಂಪತ್ತನ್ನು ನುಸುಳುಕೋರರಿಗೆ ಹಂಚಲಿದೆ. ನೀವು

ನೀತಿ ಸಂಹಿತೆ ಉಲ್ಲಂಘಿಸಿದ ಪ್ರಧಾನಿ ಮೋದಿ| ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣಗೈದು ವಿವಾದ Read More »

ಹವಾಮಾನ ವರದಿ| ಇಂದು, ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಇಂದು ಮತ್ತು‌ ನಾಳೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಆರೆಂಜ್ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಸೋಮವಾರ (ಎ. ೨೨) ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಬೆಳಗಾವಿ, ಧಾರವಾಡ, ಗದಗ, ಹಾವೇರಿ,

ಹವಾಮಾನ ವರದಿ| ಇಂದು, ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ Read More »

ಸುಳ್ಯ: ರೈತರ ಬೇಡಿಕೆಗಳಿಗೆ ನೀಡಿಲ್ಲ ಮನ್ನಣೆ| ಬಿಜೆಪಿ ಹೊರತಾದ ಪಕ್ಷಗಳ ಬೆಂಬಲಕ್ಕೆ ರೈತ ಸಂಘ ಕರೆ

ಸಮಗ್ರ ನ್ಯೂಸ್: ‘ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಯಾವುದೇ ಬೇಡಿಕೆ ಈಡೇರಿಸದೆ, ರೈತರಿಗೆ ವಿರುದ್ಧವಾಗಿ ಆಡಳಿತ ನಡೆಸಿ ರೈತ ವಿರೋಧಿ ನೀತಿ ಅನುಸರಿಸಿದೆ. ಈ ಕಾರಣದಿಂದ ಬಿಜೆಪಿ ಹೊರತಾದ ಇತರ ಪಕ್ಷಗಳನ್ನು ಬೆಂಬಲಿಸಬೇಕು’ ಎಂದುಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ಘಟಕ ಕರೆ ನೀಡಿದೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ, ‘ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಆಡಳಿತಕ್ಕೆ ಬರುವ ವೇಳೆ ವಿವಿಧ

ಸುಳ್ಯ: ರೈತರ ಬೇಡಿಕೆಗಳಿಗೆ ನೀಡಿಲ್ಲ ಮನ್ನಣೆ| ಬಿಜೆಪಿ ಹೊರತಾದ ಪಕ್ಷಗಳ ಬೆಂಬಲಕ್ಕೆ ರೈತ ಸಂಘ ಕರೆ Read More »

ಹುಬ್ಬಳ್ಳಿ: ರಾಜ್ಯ ಸರ್ಕಾರವೇ ಜಿಹಾದ್ ಪರ ನಿಂತಿದೆ-ಪ್ರಹ್ಲಾದ ಜೋಶಿ ಆಕ್ರೋಶ

ಸಮಗ್ರ ನ್ಯೂಸ್‌ : ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು. ಸರ್ಕಾರ ಮತ್ತು ಸಮಾಜ ಇಚ್ಛೆತ್ತುಕೊಳ್ಳಬೇಕು, ಬಹಳ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ಮಾಡಿದರು. ಸಿಎಂ, ಡಿಸಿಎಂ, ಗೃಹ ಸಚಿವರು ತುಷ್ಟಿಕರಣದ ನೀತಿಯಿಂದಾಗಿ ಹೇಗೆಲ್ಲ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನೇಹಾ ಕನ್ವರ್ಟ್ ಗೆ ಯತ್ನ:ನೇಹಾಳನ್ನು

ಹುಬ್ಬಳ್ಳಿ: ರಾಜ್ಯ ಸರ್ಕಾರವೇ ಜಿಹಾದ್ ಪರ ನಿಂತಿದೆ-ಪ್ರಹ್ಲಾದ ಜೋಶಿ ಆಕ್ರೋಶ Read More »

ಬಿಜೆಪಿಗೆ ಸೇರಿದ 2 ಕೋಟಿ ಹಣ ಜಫ್ತಿ|ಬಿಜೆಪಿ ನಾಯಕರಿಗೆ ಹಿಂದಿರುಗಿಸಲಾಗಿದೆ ಎಂಬ ಊಹಾ ಪೋಹಗಳಿಗೆ ಮುನೀಶ್ ಮೌದ್ಗಿಲ್ ಸ್ಪಷ್ಟನೆ

ಸಮಗ್ರ ನ್ಯೂಸ್: ನಿನ್ನೆ ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಬೆಂಗಳೂರಿನ ಬಿನ್ನಿಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಈ ಹಣವನ್ನು ಪುನಃ ಬಿಜೆಪಿ ನಾಯಕರಿಗೆ ಹಿಂದಿರುಗಿಸಲಾಗಿದೆ ಎಂಬ ಊಹಾಪೋಹಗಳು ಹರಿಡಿತ್ತು. ಈ ಕುರಿತು ಇದೀಗ ಬೆಂಗಳೂರು ನಗರ ಜಿಲ್ಲೆ ಎಮ್​ಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಸ್ಪಷ್ಟನೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಹಣವು ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು

ಬಿಜೆಪಿಗೆ ಸೇರಿದ 2 ಕೋಟಿ ಹಣ ಜಫ್ತಿ|ಬಿಜೆಪಿ ನಾಯಕರಿಗೆ ಹಿಂದಿರುಗಿಸಲಾಗಿದೆ ಎಂಬ ಊಹಾ ಪೋಹಗಳಿಗೆ ಮುನೀಶ್ ಮೌದ್ಗಿಲ್ ಸ್ಪಷ್ಟನೆ Read More »

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವು

ಸಮಗ್ರ ನ್ಯೂಸ್: ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಪ್ರವಾಸಕ್ಕೆ ಎಂದು ಹೋಗಿದ ಇವರೆಲ್ಲ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಚಿಕ್ಕ ಮಗುವೊಂದು ಆಕಸ್ಮಿಕವಾಗಿ ನೀರಿಗೆ ಬಿದ್ದಿತ್ತು. ಮಗುವನ್ನು ರಕ್ಷಿಸಲು ಒಬ್ಬರ ಹಿಂದೆ ಒಬ್ಬರು ಹೋಗಿ 6 ಜನರು ಮೃತಪಟ್ಟಿದ್ದಾರೆ. ನಜೀರ್ ಅಹ್ಮದ್(40), ಅಲ್ಛೀಯಾ ಅಹ್ಮದ್(10), ಮೋಹಿನ್(6), ರೇಷಾ ಉನ್ನಿಸಾ(38), ಇಫ್ರಾ‌ ಅಹ್ಮದ್(15),

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವು Read More »