ಸುಳ್ಯ: ಸಾವಿನಲ್ಲೂ ಜೊತೆಯಾದ ಸಹೋದರರು!!

ಸಮಗ್ರ ನ್ಯೂಸ್: ಅಣ್ಣ ನಿಧನರಾದ ವಿಷಯ ತಿಳಿದು‌ ತಮ್ಮ ಕೂಡಾ ಕುಸಿದು ಬಿದ್ದು ಮೃತಪಟ್ಟ ಮನಕಲಕುವ ಘಟನೆಯೊಂದಕ್ಕೆ ಸುಳ್ಯ ತಾಲೂಕಿನ ಅರಂತೋಡು ಸಾಕ್ಚಿಯಾಗಿದೆ.

Ad Widget ... ..

ಅರಂತೋಡು ಗ್ರಾಮದ ನಿವಾಸಿ ಅಬ್ದುಲ್ಲ ರವರು (82) ರವರು ಅಸೌಖ್ಯದಿಂದ ಇಂದು (ಎ.30) ಮುಂಜಾನೆ ನಿಧನರಾದರು. ಈ ವಿಷಯ ತಿಳಿಯುತಿದ್ದಂತೆ ಸಹೋದರ ಉದಯನಗರದ ನಿವಾಸಿ ಮಹಮ್ಮದ್ (76) ಅವರು ಮನೆಯಲ್ಲಿ ಕುಸಿದುಬಿದ್ದರು.

Ad Widget

ಮನೆಯವರು ತಕ್ಷಣ ಮಹಮ್ಮದ್ ರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಆ ವೇಳೆಗೆ ಮಹಮ್ಮದ್ ರವರು ಮೃತಪಟ್ಟರೆಂದು ತಿಳಿದುಬಂದಿದ್ದು ಸಹೋದರರು ಸಾವಿನಲ್ಲೂ ಜೊತೆಯಾದರು.

Leave a Comment

Your email address will not be published. Required fields are marked *