ಸಮಗ್ರ ನ್ಯೂಸ್: ಯೋಗ ಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಕಂಪನಿಯ ಆರ್ಯುವೇದ ಉತ್ಪನ್ನಗಳ ವಿವಾದಾತ್ಮಕ ಜಾಹೀರಾತುಗಳನ್ನು ಎದುರಿಸಿದ ನಂತರ, ಇದೀಗ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸೋಮವಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಪತಂಜಲಿ ಗ್ರೂಪ್‍ನ ಭಾಗವಾಗಿರುವ ದಿವ್ಯ ಫಾರ್ಮಸಿ ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬೋನ್‍ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್ಷ್ಮಾ ಪವರ್’, ‘ಲಿಪಿಡೋಮ್’, ‘ಬಿಪಿ ಗ್ರಿಟ್’, ‘ಮಧುಗ್ರಿಟ್’, ‘ಮಧುನಾಶಿನಿ ವಟಿ ಎಕ್ಕಾ ಪವರ್’, ‘ಲಿವಾಮೃತ್ ಅಡ್ವಾನ್ಸ್’, ‘ಲಿವೋಗ್ರಿಟ್’ ಮತ್ತು ‘ಐಗ್ರಿಟ್ ಗೋಲ್ಡ್ ಅನ್ನು ನಿಲ್ಲಿಸಲಾಗಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಪತಂಜಲಿ ಅಲೋಪತಿ ವೈದ್ಯಕೀಯ ವ್ಯವಸ್ಥೆಯನ್ನು ಟೀಕಿಸಲು ಪ್ರಚಾರ ಮಾಡಿತು. ಇದನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸಿದ್ದಕ್ಕೆ ಪತಂಜಲಿ ಇತ್ತೀಚೆಗೆ ಕ್ಷಮೆಯಾಚಿಸಿದೆ. ಮಂಗಳವಾರವೂ ವಿಚಾರಣೆ ಮುಂದುವರಿಯಲಿದ್ದು, ಅದಕ್ಕೂ ಮುನ್ನ ಪರವಾನಗಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.