Ad Widget .

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ, ಉಪನ್ಯಾಸ

ಸಮಗ್ರ ನ್ಯೂಸ್: ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ಐ.ಎಸ್.ಟಿ.ಇ) ಇದರ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

Ad Widget . Ad Widget .

ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಅಣ್ಣಯ್ಯ ಕೆ. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ವ್ರತ್ತಿಪರ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವ್ರತ್ತಿ ಅಭಿವ್ರದ್ಧಿ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಐ.ಎಸ್‌.ಟಿ.ಇ ಸಂಸ್ಥೆಯ ಬಗ್ಗೆ ಸಂಚಾಲಕ ಪಾಲಚಂದ್ರ ವೈವಿ ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮುಂದಿನ ವರ್ಷಕ್ಕೆ ಐ.ಎಸ್.ಟಿ.ಇ ಸಂಚಾಲಕರಾಗಿ ಕಾರ್ಯನಿರ್ವಹಿಸಲು ಶಾಲಿನಿ ಯವರಿಗೆ ಅಧಿಕಾರ ನೀಡಲಾಯಿತು.

Ad Widget . Ad Widget .

ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕವಿತಾ ಪಿ. ಡಿ ಸ್ವಾಗತಿಸಿ, ಶಾಲಿನಿ ಎಂ ಎಸ್ ವಂದಿಸಿ, ಚಂದ್ರಶೇಖರ್ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಯುಟ್ಯೂಬ್ ಲೈವ್ ಬಗ್ಗೆ ಫಾಲಚಂದ್ರ ವೈ.ವಿ. ಮಾಹಿತಿ ನೀಡಿದರು.

Leave a Comment

Your email address will not be published. Required fields are marked *