ಸಮಗ್ರ ನ್ಯೂಸ್ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲು ಹೆಚ್ಚಾಗಿದೆ. ಇಂದು ನಗರದ ತೆಂಕಿಲದ ವಿವೇಕಾನಂದ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರ ಕಾರ್ಯಾಚರಿಸುತ್ತಿದೆ. ಇದೀಗ ಮಸ್ಟರಿಂಗ್ ಕೇಂದ್ರದಿಂದ ತಮ್ಮ ತಮ್ಮ ಮತಗಟ್ಟೆಗಳಿಗೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳು ತೆರಳಿದ್ದಾರೆ. ಇನ್ನು ಬಿಸಿಲಿನ ತಾಪಕ್ಕೆ ಮತಗಟ್ಟೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ.
ಬಿಸಿಲಿನ ಝಳವನ್ನು ತಪ್ಪಿಸಲು ಮತದಾನದ ಪರಿಕರಗಳನ್ನೇ ತಡೆಯಾಗಿ ಸಿಬ್ಬಂದಿಗಳು ಬಳಸಿಕೊಂಡದ್ದು ಕಂಡು ಬಂತು. ಕೆಲವರು ಇವಿ ಪ್ಯಾಟ್ ಪೆಟ್ಟಿಗೆಯನ್ನು ತಲೆಯಲ್ಲಿಟ್ಟು ಬಿಸಿಲಿನ ಪ್ರಕರತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮತಯಂತ್ರ ಮರೆಯಾಗಿ ಇಡುವ ರಟ್ಟನ್ನು ತಲೆಮೇಲೆ ಇಟ್ಟುಕೊಂಡಿದ್ದಾರೆ.
ಇನ್ನು ಪುತ್ತೂರು ತಾಲೂಕಿನಲ್ಲಿ ಒಟ್ಟು 221 ಮತಕೇಂದ್ರ ಸ್ಥಾಪಿತವಾಗಿದೆ. ಸುಮಾರು 1500 ಕ್ಕೂ ಮಿಕ್ಕಿದ ಸಿಬ್ಬಂದಿಗಳ ನೇಮಕವಾಗಿದೆ. ಪುತ್ತೂರಿನಲ್ಲಿ ಒಟ್ಟು 9 ಮಾದರಿ ಮತಗಟ್ಟೆಗಳ ಸ್ಥಾಪನೆಯಾಗಿದೆ. 6 ಸಖೀ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳಿಂದ ಮತ ಕೇಂದ್ರದ ನಿರ್ವಹಣೆ ಮಾಡಲಾಗ್ತಿದೆ. ಸಖೀ ಮತಕೇಂದ್ರದ ಸಿಬ್ಬಂದಿಗಳಿಗೆ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹೋಪಾತ್ರ ಪಿಂಕ್ ಸಾರಿ ವಿತರಿಸಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.