ಸಮಗ್ರ ನ್ಯೂಸ್ : ರಾಯಚೂರು ಲೋಕಸಭಾ ಕ್ಷೇತ್ರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ಉಪ ಚುನಾವಣೆ ಕ್ಷೇತ್ರಗಳಲ್ಲಿ ನಾನು ಸಂಪೂರ್ಣ ಸಮಯ ಕೊಟ್ಟು ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸ್ಪಷ್ಟ ಪಡಿಸಿದ್ದಾರೆ.
ತಮ್ಮ ಗೃಹ ಕಚೇರಿಯಲ್ಲಿ ಕೈಗೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಸುರಪೂರ ವಿಧಾನಸಭೆ ಅಭ್ಯರ್ಥಿ ರಾಜುಗೌಡ ಕೂಡ ಭೇಟಿಯಾಗಿ ಬೆಂಬಲ ಕೋರಿದ್ದು, ಹಾಗೆ ನಮ್ಮ ರಾಜ್ಯ ಜೆಡಿಎಸ್ ನಾಯಕರು ಕೂಡ ನನ್ನ ಜೊತೆ ಚರ್ಚೆ ಮಾಡಿದ್ದು, ಮೈತ್ರಿ ಕುರಿತು ಪರ ವಿರೋಧ ಚಿಂತನೆ ನಡೆಸಲಾಗಿ ಅಷ್ಟೆ ಅಲ್ಲದೆ ಸುದೀರ್ಘವಾಗಿ ನಾಯಕರ ಜೊತೆ ಹಾಗೂ ಕುಟುಂಬದವರ ಜೊತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಕಲಬುರಗಿ, ಯಾದಗಿರಿ ಜೆಡಿಎಸ್ನ ನಾಯಕರು, ಸ್ಥಳೀಯ ನಾಯಕರ ಸಾಧಕ ಬಾಧಕಗಳ ಚರ್ಚೆ ನಡೆಸಿದ್ದು, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ, ದೊಡ್ಡಪ್ಪಗೌಡ ನರಬೋಳಿ ಸೇರಿದಂತೆ ಹಲವು ನಾಯಕರ ಜೊತೆ ಚರ್ಚೆ ನಡೆಸಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಜೊತೆ ಮೈತ್ರಿ ಮಾಡಿಕೊಂಡ ಕಾರಣ ನನಗೆ ವೈಯಕ್ತಿಕವಾಗಿ ಅಸಮಧಾನವಿತ್ತು ಆದರೇ ನಮ್ಮ ರಾಜ್ಯದ ನಾಯಕರ ಆದೇಶದಂತೆ ನಡೆಯಬೇಕಾಗುತ್ತಿದ್ದು, ಅದರ ಜೊತೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜೆಯೇಂದ್ರ ಅವರು ನನಗೆ ಕರೆ ಮಾಡಿ ನಾಳೆ ನಡೆಯುವ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ನಾಮಪತ್ರ ಸಲ್ಲಿಸಲು ತಮ್ಮ ಉಪಸ್ಥಿತಿ ಅಗತ್ಯವಿದೆ ಆದ್ದರಿಂದ ತಾವು ಆಗಮಿಸಬೇಕು ಎಂದು ಕೋರಿದ್ದಾರೆ. ನಾನು ಕೂಡ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.
ಮೈತ್ರಿ ಅನಿವಾರ್ಯತೆ ಕುರಿತು ನಮ್ಮ ನಾಯಕರು ನನಗೆ ತಿಳಿಸಿದ್ದರಿಂದ ನಾನು ಜಾಧವ್ ನಾಮಿನೇಶನ್ ಸಂದರ್ಭದಲ್ಲಿ ಉಪಸ್ಥಿತಿ ಇರಲಿದ್ದೇನೆ. ಬಿಜೆಪಿಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.
ತಂದೆಯವರ ಅನುಪಸ್ಥಿತಿಯಲ್ಲಿ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ ಗುರುಮಠಕಲ್ ಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡಿ ಅವರೊಡನೆ ಕೇಳಿದಾಗ ನಿಮ್ಮ ನಿರ್ಧಾರ ಕ್ಕೆ ಬದ್ದರಾಗಿದ್ದೇವೆ ಎಂದು ತಿಳಿಸಿದ್ದು, ಜೆಡಿಎಸ್ ಪಕ್ಷದ ಗುರಮಿಠಕಲ್ ಮತಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದಾಗ ನೀವು ಶಾಸಕರಾಗಿ ರಾಜಕೀಯವಾಗಿ ಏನೆ ನಿರ್ದಾರ ತೆಗೆದುಕೊಂಡರು ಅದಕ್ಕೆ ನಾವು ಬದ್ದರಿದ್ದೇವೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ ಎಂದು ಕಂದಕೂರ ತಿಳಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿದ್ದರು.