Ad Widget .

ಪ್ರಚಾರದಲ್ಲಿ ಭಾಗಿಯಾದ ಮಹಿಳೆಯರಿಗೆ ಹಣ ಹಂಚಿದ ಕಾಂಗ್ರೆಸ್ ಮುಖಂಡರು

ಸಮಗ್ರ ನ್ಯೂಸ್: ಸಂಸತ್ ಸಮರದ ಅಖಾಡದಲ್ಲಿ ಈಗ ಕಾಂಚಾಣದ ಸದ್ದು ಜೋರಾಗಿದೆ. ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

Ad Widget . Ad Widget .

ನಂತರ ಸಚಿವರು, ಅಭ್ಯರ್ಥಿ, ಮುಖಂಡರು ರ್ಯಾಲಿ ನಡೆಸಿದರು ಈ ರ್ಯಾಲಿಯಲ್ಲಿ ಭಾಗಿಯಾದ ಮಹಿಳೆಯರಿಗೆ ಸ್ಥಳೀಯ ಮುಖಂಡನೊಬ್ಬ ಹಣ ಹಂಚುತ್ತಿದ್ದಾನೆ. ಆತನಿಂದ ಬಂಜಾರಾ ಸಮುದಾಯಕ್ಕೆ ಸೇರಿದ ಮಹಿಳೆಯರು ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಮುಖಂಡ ಎಲ್ಲ ಮಹಿಳೆಯರಿಗೆ ಮತ್ತು ಪುರುಷರಿಗೆ ಹಣ ಹಂಚಿರುವುದು ಬೆಳಕಿಗೆ ಬಂದಿದೆ. ಪ್ರಚಾರದ ವೇಳೆ ನೃತ್ಯಗಾರರು, ಹಲಗೆಯವರಿಗೆ ಕೈ ಮುಖಂಡರು ಹಣ ಹಂಚಿಕೆ ಮಾಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *