Ad Widget .

ಇಂದು ಸನ್ ರೈಸರ್ಸ್ ವಿರುದ್ಧ ಆರ್‍ಸಿಬಿ ಪಂದ್ಯ/ ಅಳಿವು ಉಳಿವಿನ ಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್

ಸಮಗ್ರ ನ್ಯೂಸ್: ಐಪಿಎಲ್‍ನ ಈ ಸೀಸನ್‍ನಲ್ಲಿ ಈಗಾಗಲೇ ಐದು ಪಂದ್ಯಗಳನ್ನು ಸೋತಿರುವ ಆರ್‍ಸಿಬಿಗೆ ಇಂದು ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಬಂದಿದೆ. ಆರ್‍ಸಿಬಿ ಇಂದು ಸನ್ ರೈಸರ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿ ಇದೆ.

Ad Widget . Ad Widget .

ಗೆದ್ದರೆ ಪ್ಲೇ ಆಫ್ ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್‍ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಬಾದ್ ಸನ್ ರೈಸರ್ಸ್ ವಿರುದ್ಧ ಸೆಣೆಸಾಡಲಿದೆ. 5 ಪಂದ್ಯಗಳಲ್ಲಿ 3 ಪಂದ್ಯವನ್ನ ಗೆದ್ದ ಸನ್‍ರೈಸರ್ಸ್ ತನ್ನ ಬ್ಯಾಟರ್ ಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಸನ್ ರೈಸರ್ಸ್ ಬ್ಯಾಟರ್‍ಗಳನ್ನು ಕಟ್ಟಿಹಾಕುವ ಸವಾಲು ಆರ್‍ಸಿಬಿ ಬೌಲರ್‍ಗಳ ಮುಂದಿದೆ.

Ad Widget . Ad Widget .

ಹೈದರಾಬಾದ್ ತಂಡ ಪಾಯಿಂಟ್ ಟೇಬಲ್‍ನಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದ್ದು, ಆರ್‍ಸಿಬಿ ಪಾಯಿಂಟ್ ಟೇಬಲ್‍ನಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‍ಸಿಬಿ ಫ್ಯಾನ್ಸ್ ಎಲ್ಲರಿಗಿಂತ ಹೆಚ್ಚು ಲಾಯಲ್ ಫ್ಯಾನ್ ಬೇಸ್ ಎನಿಸಿಕೊಂಡಿದ್ದು, ಪ್ರತೀ ಪಂದ್ಯದಲ್ಲಿಯೂ ಚಿಯರ್ ಮಾಡುತ್ತಲೇ ಬಂದಿದ್ದಾರೆ. ಈ ಪಂದ್ಯದಲ್ಲೂ ಕೂಡ ಫ್ಯಾನ್ಸ್ ಸಂಪೂರ್ಣ ಬೆಂಬಲ ನೀಡಲಿದ್ದು, ಇದು ಪ್ಲೇಯರ್ಸ್ ಮೇಲೆ ಇನ್ನಷ್ಟು ಒತ್ತಡ ನೀಡುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *