Ad Widget

ಮೋದಿಯಿಂದ ಪ್ರಜಾಪ್ರಭುತ್ವದ ಬಿಕ್ಕಟ್ಟು; ಸರ್ವಾಧಿಕಾರಿ ಧೋರಣೆಯಿಂದ ದೇಶ ಕತ್ತಲೆಡೆಗೆ| ನಿರ್ಮಲಾ ಸೀತಾರಾಮನ್ ಪತಿ ಪರಕಲ ಪ್ರಭಾಕರ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಅಧಿಕಾರಾವಧಿಯನ್ನು ಕಟುವಾಗಿ ಟೀಕಿಸಿರುವ ಲೇಖಕ ಹಾಗೂ ಆರ್ಥಿಕ ತಜ್ಞ, ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಲ ಪ್ರಭಾಕರ ಅವರು, ‘ಮೋದಿ ಸರ್ವಾಧಿಕಾರಿಯಾಗಿದ್ದಾರೆ ಮತ್ತು ನಮ್ಮ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ, ನಮ್ಮ ಸಾಮಾಜಿಕ ಸ್ವರೂಪಕ್ಕೆ ಧಕ್ಕೆಯುಂಟಾಗಿದೆ, ನಮ್ಮ ಆರ್ಥಿಕತೆಯು ಅಪಾಯದಲ್ಲಿದೆ ಮತ್ತು ನಮ್ಮನ್ನು ಕತ್ತಲಯುಗಕ್ಕೆ ಮರಳಿ ತಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget

ಸುದ್ದಿ ಜಾಲತಾಣ thewire.in ಗಾಗಿ ಕರಣ್ ಥಾಪರ್ ಗೆ ನೀಡಿರುವ ಸಂದರ್ಶನದಲ್ಲಿ ಪ್ರಭಾಕರ, ಪ್ರಸಕ್ತ ಸರಕಾರವು ಅಧಿಕಾರಕ್ಕೆ ಮರಳಿದರೆ ಅದು ಭಾರತದ ಪಾಲಿಗೆ ವಿನಾಶಕಾರಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು

Ad Widget . Ad Widget .

ಆದಾಗ್ಯೂ ಇಂತಹ ಸಾಧ್ಯತೆಯಿಲ್ಲ ಎಂದು ನಂಬಿರುವ ಪ್ರಭಾಕರ, ಮುಂಬರುವ ಚುನಾವಣೆಗಳಲ್ಲಿ 220-230ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಕಠಿಣವಾಗಲಿದೆ ಎಂದು ಹೇಳಿದರು.

ತನ್ನ ಚುನಾವಣಾ ವಿಶ್ಲೇಷಣೆಯನ್ನು ವಿವರಿಸಿದ ಅವರು, ಉತ್ತರ ಭಾರತದಲ್ಲಿ ಮೋದಿ ಮತ್ತು ಬಿಜೆಪಿ 50ರಿಂದ 60 ಹಾಗೂ ಆಂಧ್ರ ಪ್ರದೇಶದಲ್ಲಿ ಅದು ಗೆಲ್ಲಬಹುದಾದ ಸ್ಥಾನಗಳನ್ನು ಪರಿಗಣಿಸಿದ ನಂತರವೂ ದಕ್ಷಿಣದಲ್ಲಿ ಬಹುಶಃ 10ರಿಂದ 12 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದರು.

ಮೋದಿಯವರ ಗಳಿಕೆಯನ್ನು 230ಕ್ಕೆ ಸೀಮಿತಗೊಳಿಸಿದರೆ ಬಹುಮತವನ್ನು ಕ್ರೋಡೀಕರಿಸುವ ಚಾಕಚಕ್ಯತೆಯು ಅವರ ಬಳಿ ಇಲ್ಲ ಅಥವಾ ಅದಕ್ಕೆ ನೆರವಾಗಬಹುದಾದ ಜನರೂ ಅವರ ಬಳಿಯಿಲ್ಲ. ಆದ್ದರಿಂದ ಅವರು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದು ಅನಿವಾರ್ಯವಾಗಲಿದೆ ಎಂದೂ ಪ್ರಭಾಕರ ಹೇಳಿದರು.

ಆದರೆ ಒಂದು ವೇಳೆ ಮೋದಿ ಮೂರನೇ ಅವಧಿಗೂ ಗೆದ್ದರೆ ಮಣಿಪುರದಲ್ಲಿ ಇಂದು ಸಂಭವಿಸುತ್ತಿರುವುದು ದೇಶದ ಪ್ರತಿಯೊಂದೂ ರಾಜ್ಯದಲ್ಲಿ ಸಂಭವಿಸುವ ಸಾಧ್ಯತೆಯಿದೆ ಮತ್ತು ಪ್ರತಿಪಕ್ಷಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ ಸಮಗ್ರ ಪ್ರತಿಪಕ್ಷ ನಾಯಕತ್ವವು ಜೈಲು ಸೇರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *