ಸಮಗ್ರ ನ್ಯೂಸ್ : ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಅಂತಾ ಮೋದಿ ಬರ್ತಾ ಇದ್ದಾರೆ. ತೆರಿಗೆಯಲ್ಲಿ, 15 ನೇ ಹಣಕಾಸಿನಲ್ಲಿ ಕರ್ನಾಟಕಕ್ಕೆ ಮೋಸ ಮಾಡಿದ್ದಾರೆ. ರಾಜ್ಯದಲ್ಲಿ ಬರ ಘೋಷಣೆ ಆಗಿದ್ರೂ, ನಯಾಪೈಸೆ ಬಿಡುಗಡೆ ಮಾಡಿಲ್ಲಾ. ಮೋದಿ ಅವರು ಕರ್ನಾಟಕ ಮೇಲೆ ಪ್ರಹಾರದ ಮೇಲೆ ಪ್ರಹಾರ ಮಾಡಿದ್ದಾರೆ. ಮೋದಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡ್ತಾ ಇದ್ದಾರೆ. ಕರ್ನಾಟಕ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು.
ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ ವಿಚಾರಕ್ಕೆ ನನ್ನ ಮೇಲೆ ಗೂಬೆ ಕುರಿಸ್ತಿದ್ದಾರೆ ಎಂಬ ಖೂಬಾ ಹೇಳಿಕೆ ವಿಚಾರವಾಗಿ, ಖೂಬಾಗೆ ಸ್ವಪಕ್ಷದರಿಂದಲೇ ವಿರೋಧ ವ್ಯಕ್ತವಾಗಿದೆ. ಖೂಬಾ ಹಟಾವೋ ಅಂತಾ ಬಿಜೆಪಿಯವರೇ ಹೇಳ್ತಾ ಇದ್ದಾರೆ. ಖೂಬಾ ಕತೆ ಮುಗಿದಿದೆ, ಇದೂ ಖೂಬಾ ಕೊನೆ ಚುನಾವಣೆ. ಚುನಾವಣೆ ಬಳಿಕ ಖೂಬಾ ಬೀದಿಗೆ ಬರ್ತಾರೆ. ಖೂಬಾ ಎಲ್ಲಾ ನಾಟಕ ಮಾಡ್ತಾರೆ, ಸಂವಿಧಾನ ವಿರೋಧ ಧೋರಣೆ ಅನುಸರಿಸ್ತಾರೆ. ಜನರ ಮುಂದೆ ಬಂದು ಈ ತರಹಾ ನಾಟಕ ಮಾಡ್ತಾರೆ ಎಂದರು.
ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಅವಮಾನ ವಿಚಾರವಾಗಿ ಪ್ರತಿಕ್ರಿಸಿದ ಅವರು, ಸಂಜಯ್ ಪಾಟೀಲ್ ಹೇಳಿಕೆಯನ್ನ ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿ, ಕಾನೂನು ರೀತಿ ಕ್ರಮ ಜರುಗಿಸಬೇಕು. ಮಹಿಳೆಯರು ಒಂದೇ ಒಂದು ಮತವನ್ನ ಬಿಜೆಪಿಗೆ ನೀಡಬಾರದು. ಬಿಜೆಪಿಗೆ ಮತ ನೀಡಿದ್ರೆ ಅದೂ ನಾರಿಶಕ್ತಿಗೆ ಅವಮಾನ ಮಾಡಿದಂತೆ ಎಂದರು.
ರಾಹುಲ್ ಗಾಂಧಿ ಕುರಿತ ಗೋವಿಂದ ಕಾರಜೋಳ ಹೇಳಿಕೆಗೆ ಸಚಿವ ಖಂಡ್ರೆ ಕಿಡಿಕಾರಿದ್ದು, ಗೋವಿಂದ ಕಾರಜೋಳ ಅವರು, ಸೋತು ಸುಣ್ಣವಾಗಿದ್ದಾರೆ. ಈಗ ಮತ್ತೆ ಲೋಕಸಭೆಗೆ ಸ್ಪರ್ದೆ ಮಾಡ್ತಾ ಇದ್ದಾರೆ. ಸೋಲಿನ ಹತಾಶೆಯಿಂದ ಈ ರೀತಿ ಮಾತಾಡ್ತಿದ್ದಾರೆ. ಅವರ ಹೇಳಿಕೆಯನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳಲ್ಲಾ. ಗಾಂಧಿ ಪರಿವಾರದ ಬಗ್ಗೆ ಹಗುರವಾಗಿ ಮಾತಾನಾಡುವುದು ಬಿಜೆಪಿ ರೂಢಿ ಮಾಡಿಕೊಂಡಿದೆ ಎಂದರು.