ಸಮಗ್ರ ನ್ಯೂಸ್: ಭಾರತದಲ್ಲಿ ಜಂಟಿಯಾಗಿ ಆಟೋಮೋಟಿವ್ ಸಾಫ್ಟ್‌ವೇರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಟೋ ಮೊಬೈಲ್ ಕ್ಷೇತ್ರದ ಜಾಗತಿಕ ದೈತ್ಯ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ ಪರಸ್ಪರ ಕೈ ಜೋಡಿಸಿದ್ದಾರೆ.
ಭಾರತದ ಪುಣೆ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಪೈಕಿ ಜಂಟಿ ಉದ್ಯಮದ ಮುಖ್ಯ ಕೇಂದ್ರ ಬೆಂಗಳೂರು ಮತ್ತು ಪುಣೆಯಲ್ಲಿ, ಐಟಿ ಚೆನ್ನೈನಲ್ಲಿ ಸ್ಥಾಪನೆಯಾಗಲಿವೆ ಎಂದು ಕಂಪನಿಗಳು ಹೇಳಿವೆ.
ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದವು ಸಾಫ್ಟ್‌ವೇರ್-ಡಿಫೈನ್ಸ್ ವೆಹಿಕಲ್, ಬಿಎಂಡಬ್ಲ್ಯು ಗ್ರೂಪ್ ಪ್ರೀಮಿಯಂ ಕಾರುಗಳಿಗೆ ಪರಿಹಾರಗಳು ಮತ್ತು ಡಿಜಿಟಲ್ ರೂಪಾಂತರ ಪರಿಹಾರ ಒಳಗೊಂಡಂತೆ ಆಟೋಮೋಟಿವ್ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇದು ನೂರು ನವೋದ್ಯಮಿಗಳೊಂದಿಗೆ ಜೊತೆಗೂಡಿ ಪ್ರಾರಂಭವಾಗಲಿದ್ದು, ಮುಂಬರುವ ವರ್ಷಗಳಲ್ಲಿ ನವೋದ್ಯಮಿಗಳ ಸಂಖ್ಯೆ ನಾಲ್ಕು ಅಂಕೆಗಳನ್ನು ದಾಟುವ ನಿರೀಕ್ಷೆಯಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.