Ad Widget .

ಮಾರ್ಗಸೂಚಿ ಉಲ್ಲಂಘನೆ/ ಫೆಬ್ರವರಿಯಲ್ಲಿ 76.28 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ಸಮಗ್ರ ನ್ಯೂಸ್: ಮಾರ್ಗಸೂಚಿ ಉಲ್ಲಂಘನೆಯ ಹಿನ್ನಲೆಯಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಭಾರತದಲ್ಲಿ ಫೆಬ್ರವರಿ ತಿಂಗಳೊಂದರಲ್ಲಿಯೇ ತನ್ನ 76.28 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಇದಕ್ಕೂ ಹಿಂದಿನ ತಿಂಗಳಿನಲ್ಲಿ 67.28 ಲಕ್ಷ ಖಾತೆಗಳನ್ನು ನಿಷೇಧಿಸಿದೆ.

Ad Widget . Ad Widget .

ಮೆಟಾ ಒಡೆತನದ ವಾಟ್ಸಾಪ್ ಕಂಪನಿಯ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಖಾತೆಗಳನ್ನು ಮುಲಾಜಿಲ್ಲದೆ ನಿಷೇಧಿಸಲಾಗುತ್ತದೆ. ಇನ್ನು ವಾಟ್ಸಾಪ್‍ನಲ್ಲಿ ಅಶ್ಲೀಲ, ದ್ವೇಷಪೂರಿತ, ಕಾನೂನುಬಾಹಿರ, ಮಾನಹಾನಿಕರ, ಬೆದರಿಕೆ, ಬೆದರಿಕೆ, ಕಿರುಕುಳ ಅಥವಾ ಪ್ರಚೋದಿಸುವ ವಿಷಯವನ್ನು ಹಂಚಿಕೊಂಡಲ್ಲಿಯೂ ಖಾತೆ ನಿಷ್ಕ್ರಿಯವಾಗುತ್ತದೆ.

Ad Widget . Ad Widget .

ಭಾರತದಲ್ಲಿ ಈಗ 50 ಕೋಟಿಗೂ ಹೆಚ್ಚು ಬಳಕೆದಾರರು ವಾಟ್ಸಾಪ್ ಅನ್ನು ಬಳಸುತ್ತಿದ್ದು, ಸಂಸ್ಥೆಯು ಕಳೆದ ಫೆಬ್ರವರಿಯಲ್ಲಿ ಒಟ್ಟು 16618 ದೂರುಗಳನ್ನು ಸ್ವೀಕರಿಸಿದೆ. 2021ರ ಐಟಿ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸ್‍ಆಪ್ ದುರ್ಬಳಕೆ ಮೇಲೆ ಹದ್ದಿನಕಣ್ಣಿಟ್ಟಿರುವ ಸಂಸ್ಥೆ, ಈ ಬಗ್ಗೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ಸಂಸ್ಥೆ ಹೇಳಿದೆ.
ಎಂದು ಹೇಳಿದೆ.

Leave a Comment

Your email address will not be published. Required fields are marked *