ತೀರ್ಥಹಳ್ಳಿ: ನದಿಗೆ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ಸಮಗ್ರ ನ್ಯೂಸ್‌ : ರಂಜಾನ್ ಉಪವಾಸ ಮುಗಿಸಿ ಮೂವರು ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಗೆ ಈಜಲು ಹೋಗಿ ನೀರು ಪಾಲಾದ ಘಟನೆ ತೀರ್ಥಹಳ್ಳಿ ರಾಮ ಮಂಟಪದ ಬಳಿ ನಡೆದಿದೆ.

Ad Widget ... ..

ಮೃತಪಟ್ಟ ವಿದ್ಯಾರ್ಥಿಗಳು ರಫನ್, ಇಯನ್, ಸಮ್ಮರ್ ಎಂದು ಗುರುತಿಸಲಾಗಿದೆ.

Ad Widget

ಹುಡುಗರು ರಂಜಾನ್ ಉಪವಾಸ ಮುಗಿಸಿ ಸ್ನಾನಕ್ಕೆ ಈಜಲು ಹೋಗಿ ನಾಪತ್ತೆಯಾದ ಬಳಿಕ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟಕ್ಕಿಳಿದಿದ್ದರು. ಸತತವಾಗಿ ಒಂದು ಘಂಟೆಯಿಂದ ತುಂಗಾ ನದಿಯ ತೀರದಲ್ಲಿ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ.

Leave a Comment

Your email address will not be published. Required fields are marked *