Ad Widget .

ಬೆಂಗಳೂರು-ಹುಬ್ಬಳ್ಳಿ- ಮೈಸೂರು ರೈಲು ಏಪ್ರಿಲ್ 6 ಮತ್ತು 7 ರಂದು ಸ್ಥಗಿತ

ಸಮಗ್ರ ನ್ಯೂಸ್: ಬೆಂಗಳೂರು-ಹುಬ್ಬಳ್ಳಿ- ಮೈಸೂರು ರೈಲು ಸೇವೆಯನ್ನು ಏಪ್ರಿಲ್ 6 ಮತ್ತು 7 ರಂದು ಸ್ಥಗಿತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರು ವಿಭಾಗದ ಭದ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಎರಡು ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ.

Ad Widget . Ad Widget .

ನೈಋತ್ಯ ರೈಲ್ವೆ ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಏ. 6ರ ಹುಬ್ಬಳ್ಳಿ- ಬೆಂಗಳೂರು ನಡುವಿನ ವಿಶೇಷ ರೈಲು (07339) ಮತ್ತು ಏ.7 ರಂದು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ವಿಶೇಷ ರೈಲು (07340) ರದ್ದಾಗಿದೆ.

Ad Widget . Ad Widget .

ಏ.7 ಬೆಂಗಳೂರು-ಮೈಸೂರು ಮಾರ್ಗದಲ್ಲಿ ಮೆಮು ವಿಶೇಷ ರೈಲು (06255) ಮತ್ತು ಏ.8ರಂದು ಮೈಸೂರು-ಬೆಂಗಳೂರು ರೈಲು (06560) ಸಂಚಾರ ನಡೆಸುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ.

Leave a Comment

Your email address will not be published. Required fields are marked *