March 2024

ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ/ ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ತಡೆ

ಸಮಗ್ರ ನ್ಯೂಸ್: ರಾಜ್ಯ ಉಚ್ಛ ನ್ಯಾಯಾಲಯವು ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಿದೆ. ಕೊಡಗು ಜಿಲ್ಲೆಯ ಹಿಂದೂ ಜಾಗರಣ ವೇದಿಕೆಯ ಹಿರಿಯ ಸದಸ್ಯ ಸುನಿಲ್ ಮಾದಾಪುರ ಅವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಪ್ರವಚನ(ಭಾಷಣ)ಕ್ಕೆ ಅವಕಾಶವಿಲ್ಲವೆಂದು ಆದೇಶ ನೀಡುವ ಮೂಲಕ ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಹಿರಿಯ ವಕೀಲರಾದ ಅರುಣ್ ಶ್ಯಾಂ, ಸುಯೋಗ್ ಹೇರಳೆ ಹಾಗೂ ಮೂಲತಃ ಕೊಡಗಿನವರಾದ ಹೈಕೋರ್ಟ್’ನ ಯುವ […]

ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ/ ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ತಡೆ Read More »

ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಮೂವರಿಗೆ ಚಾಕು ಇರಿತ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಇಂದು ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದ ಘಟನೆ ಬೆಂಗಳೂರಿನ ರಾಗಿಗುಡ್ಡದಲ್ಲಿ ನಡೆದಿದೆ. ಬೇರೆ ಬೇರೆ ಏರಿಯಾದಿಂದ ವಿದ್ಯಾರ್ಥಿಗಳು ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ರಾಗಿಗುಡ್ಡದ ಪರಿಕ್ಷಾ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ರಾಗಿಗುಡ್ಡ ಮತ್ತು ಸಾರಕ್ಕಿ ಏರಿಯಾ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿದೆ. ಬಳಿಕ ಪರಿಕ್ಷೆ ಮುಗಿಸಿಕೊಂಡು ಹೋಗುವಾಗ ಮತ್ತೆ ಜಗಳವಾಗಿದ್ದು, ಗಲಾಟೆಯಲ್ಲಿ ಸಾರಕ್ಕಿಯ ಮೂವರು ವಿದ್ಯಾರ್ಥಿಗಳಿಗೆ ರಾಗಿ ಗುಡ್ಡದ ವಿದ್ಯಾರ್ಥಿಗಳು ಚಾಕು ಇರಿದಿದ್ದಾರೆ.

ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಮೂವರಿಗೆ ಚಾಕು ಇರಿತ Read More »

ಕೂಜಿಮಲೆಯಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಪ್ರಕರಣ| ನಕ್ಸಲ್ ಅಲ್ಲವೆಂದು ಪೊಲೀಸರ ಸ್ಪಷ್ಟನೆ

ಸಮಗ್ರ ನ್ಯೂಸ್: ಕೊಡಗು ಗಡಿಭಾಗದ ಕೂಜಿಮಲೆಯಲ್ಲಿ ನಿನ್ನೆ ಕಂಡು ಬಂದು ನಕ್ಸಲ್ ಮಹಿಳೆ ಎಂಬ ವದಂತಿಗೆ ಕಾರಣವಾಗಿದ್ದ ಅಪರಿಚಿತ ಮಹಿಳೆ ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ವೇಳೆ ವಶ ವಾಗಿದ್ದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಈಕೆ ರಾಜಸ್ಥಾನ ಮೂಲದವಳೆಂಬ ಮಾಹಿತಿ ದೊರೆತಿದ್ದು, ನಕ್ಸಲ್ ತಂಡದವಳಲ್ಲ ಎಂದು ಪೋಲೀಸರು ಸ್ಪಷ್ಟನೆ ನೀಡಿದ್ದಾರೆ. ಅಪರಿಚಿತ ಮಹಿಳೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದುದನ್ನು ಕೆಲವರು ನೋಡಿದ್ದರು. ಕೂಜಿಮಲೆಯಲ್ಲಿ ಹಾಗೂ ಐನೆಕಿದು ಬಳಿ ಕೆಲವು ದಿನಗಳ ಹಿಂದೆ ನಕ್ಸಲರು ಬಂದಿದ್ದ ಹಿನ್ನೆಲೆಯಲ್ಲಿ

ಕೂಜಿಮಲೆಯಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಪ್ರಕರಣ| ನಕ್ಸಲ್ ಅಲ್ಲವೆಂದು ಪೊಲೀಸರ ಸ್ಪಷ್ಟನೆ Read More »

ಗುಣಮುಖರಾದ ಸದ್ಗುರು/ ಆಸ್ಪತ್ರೆಯಿಂದ ಬಿಡುಗಡೆ

ಸಮಗ್ರ ನ್ಯೂಸ್: ಈಶ ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಆಧ್ಯಾತ್ಮಿಕ ಚಿಂತಕ ಸದ್ಗುರು ಸಂಪೂರ್ಣ ಗುಣಮುಖರಾಗಿದ್ದು, ದಿಲ್ಲಿ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಸದ್ಗುರು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಅವರ ಚೇತರಿಕೆಯ ಕುರಿತು ಆಶಾಭಾವ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ದಿಸ್‍ಚಾರ್ಜ್ ಮಾಡಲಾಗುತ್ತಿದೆ. ಅವರು ಚೇತರಿಕೆಗೊಳ್ಳುವ ಸಮಯದಲ್ಲೂ ಅವರ ಉತ್ಸಾಹಭರಿತರಾಗಿದ್ದರು. ಇದರಿಂದ ಅವರ ಲಕ್ಷಾಂತರ ಅನುಯಾಯಿಗಳಿಗೆ ಸಂತಸವಾಗಲಿದೆ ಎಂದು ಆಸ್ಪತ್ರೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸಂಗೀತ ರೆಡ್ಡಿ ಮಾಹಿತಿ ನೀಡಿದರು. ಮಿದುಳಿನಲ್ಲಿ ರಕ್ತಸ್ರಾವ ಸಮಸ್ಯೆ ಆದ

ಗುಣಮುಖರಾದ ಸದ್ಗುರು/ ಆಸ್ಪತ್ರೆಯಿಂದ ಬಿಡುಗಡೆ Read More »

ಮತ್ತೊಮ್ಮೆ ಮೋದಿ ಸರ್ಕಾರ/ ಏಷ್ಯಾನೆಟ್ ಡಿಜಿಟಲ್ ನೆಟ್‍ವರ್ಕ್ ಸಮೀಕ್ಷೆ

ಸಮಗ್ರ ನ್ಯೂಸ್: ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವೇ ಸೂಕ್ತ ಎಂದು ಏಷ್ಯಾನೆಟ್ ಡಿಜಿಟಲ್ ನೆಟ್‍ವರ್ಕ್ ಸಮೀಕ್ಷೆಯಲ್ಲಿ ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ಇಂಡಿಯಾ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ. ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್ ಆನ್‍ಲೈನ್‍ನಲ್ಲಿ ನಡೆಸಿದ ಮೆಗಾ ಮೂಡ್ ಆಫ್ ದ ನೇಷನ್ ಸಮೀಕ್ಷೆಯ ಪ್ರಕಾರ ಮುಂದಿನ ಚುನಾವಣೆಯಲ್ಲಿ ಎನ್‍ಡಿಎಗೆ ಪೈಪೆÇೀಟಿ ನೀಡಲು ವಿಪಕ್ಷಗಳು ದೊಡ್ಡ ಮಟ್ಟದ

ಮತ್ತೊಮ್ಮೆ ಮೋದಿ ಸರ್ಕಾರ/ ಏಷ್ಯಾನೆಟ್ ಡಿಜಿಟಲ್ ನೆಟ್‍ವರ್ಕ್ ಸಮೀಕ್ಷೆ Read More »

ನನ್ನನು ಎನ್ಕೌಂಟರ್ ಮಾಡುವುದಾಗಿ ಮತ್ತೊಂದು ಜೀವ ಬೆದರಿಕೆ; ಪ್ರಿಯಾಂಕ್ ಖರ್ಗೆ

ಸಮಗ್ರ ನ್ಯೂಸ್: ಬಿಜೆಪಿಯವರು ಈ ಚುನಾವಣೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದೀರಿ. ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದರೂ ಚುನಾವಣೆ ಗೆಲ್ಲಬೇಕು ಎಂಬ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ನನಗೆ ಮತ್ತೊಂದು ಜೀವ ಬೆದರಿಕೆ ಬಂದಿದೆ. ಅದರಲ್ಲಿ ನನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಬೆದರಿಕೆ ಹಾಕಲಾಗಿದೆ ಅಲ್ಲದೆ, ಈ ಬೆದರಿಕೆ ಪತ್ರ ಫಿನ್​ಲ್ಯಾಂಡ್​ನಿಂದ ಬಂದಿದೆ ಎಂದು ಹೇಳಿ ಸುದ್ದಿಗೋಷ್ಠಿಯಲ್ಲಿ

ನನ್ನನು ಎನ್ಕೌಂಟರ್ ಮಾಡುವುದಾಗಿ ಮತ್ತೊಂದು ಜೀವ ಬೆದರಿಕೆ; ಪ್ರಿಯಾಂಕ್ ಖರ್ಗೆ Read More »

ಕುಡಿದು ಬಂದ ಶಿಕ್ಷಕನಿಗೆ ಚಪ್ಪಲಿ ಏಟು ನೀಡಿ ಹೊಡೆದೋಡಿಸಿದ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ದಿನ ಶಾಲೆಗೆ ಕಂಠ ಪೂರ್ತಿ ಕುಡಿದು ಬರುವ ಶಿಕ್ಷಕನಿಗೆ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸಿದ್ದಾರೆ. ಶಾಲೆಗೆ ಬಂದ ಶಿಕ್ಷಕನನ್ನು ವಿದ್ಯಾರ್ಥಿಗಳು ಚಪ್ಪಲಿಯಿಂದ ಹೊಡೆದು ಓಡಿಸಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್‌ನ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಪಾಠ ಕಲಿಸುವ ಶಿಕ್ಷಕನಿಗೆ ಇಲ್ಲಿ ವಿದ್ಯಾರ್ಥಿಗಳು ಪಾಠ ಕಲಿಸಿದ್ದಾರೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಪ್ರತೀ ದಿನ ಮದ್ಯದ ಅಮಲಿನಲ್ಲಿ ಶಾಲೆಗೆ ಬರುತ್ತಿದ್ದು, ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿಗಳನ್ನು ಬೈಯುತ್ತಿದ್ದ. ಶಿಕ್ಷಕನ ಈ

ಕುಡಿದು ಬಂದ ಶಿಕ್ಷಕನಿಗೆ ಚಪ್ಪಲಿ ಏಟು ನೀಡಿ ಹೊಡೆದೋಡಿಸಿದ ವಿದ್ಯಾರ್ಥಿಗಳು Read More »

ತಡರಾತ್ರಿ ಬೆಂಗಳೂರಿನ ರೆಸ್ಟೋರೆಂಟ್ ಗೆ ಬಂತು ಬಾಂಬ್ ಬೆದರಿಕೆ ಕರೆ

ಸಮಗ್ರ ನ್ಯೂಸ್: ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಬೆನ್ನಲ್ಲೇ ಬೆಂಗಳೂರಿನಲ್ಲಿ ನಿನ್ನೆ ತಡ ರಾತ್ರಿ ಬಾಂಬ್ ಬೆದರಿಕೆ ಕರೆಯೊಂದು ಬಂದಿದೆ. ವ್ಯಕ್ತಿಯೊಬ್ಬ ರೆಸ್ಟೋರೆಂಟ್​ಗೆ ಕರೆ ಮಾಡಿ ಶೀಘ್ರದಲ್ಲೇ ರೆಸ್ಟೋರೆಂಟ್​ನಲ್ಲಿ ಬಾಂಬ್ ಸ್ಫೋಟವಾಗುತ್ತೆ ಎಂದು ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯಾಂಶ ತಿಳಿದುಬಂದಿದೆ. ಮಹದೇವಪುರದ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್​​​​ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ಬೆಚ್ಚಿಬಿದ್ದ ರೆಸ್ಟೋರೆಂಟ್‌ನವರು ಪೊಲೀಸರನ್ನು ಕರೆಸಿದ್ದರು. ರಾತ್ರಿ ಪೂರ್ತಿ ರೆಸ್ಟೋರೆಂಟ್ ಪರಿಶೀಲನೆ ನಡೆಸಿದರು ಆದರೆ ಪೊಲೀಸರಿಗೆ ಬಾಂಬ್‌

ತಡರಾತ್ರಿ ಬೆಂಗಳೂರಿನ ರೆಸ್ಟೋರೆಂಟ್ ಗೆ ಬಂತು ಬಾಂಬ್ ಬೆದರಿಕೆ ಕರೆ Read More »

ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ

ಸಮಗ್ರ ನ್ಯೂಸ್: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಸವಾರರಿಗೆ ಬಿಗ್ ಶಾಕ್ ಎದುರಾಗಿದೆ. ಹೌದು ಏಪ್ರಿಲ್ 1ರಿಂದ ಟೋಲ್ ಶುಲ್ಕ ಹೆಚ್ಚಳವಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ಹೊಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಸಲು ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ

ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ Read More »

ಕೂಜಿಮಲೆ‌ ಪ್ರದೇಶದಲ್ಲಿ ಮತ್ತೆ ನಕ್ಸಲ್ ಸಂಚಾರ!?| ರಬ್ಬರ್ ತೋಟದಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಯಾರು? ಚುರುಕುಗೊಂಡ ಶೋಧ ಕಾರ್ಯಾಚರಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದ ಕೂಜಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆ ಓಡಾಡಿದ್ದು, ಆಕೆ ನಕ್ಸಲ್‌ ಎಂಬ ಶಂಕೆಯ ಹಿನ್ನೆಲೆಯಲ್ಲಿ ಶೋಧ ನಡೆಸಲಾಗಿದೆ. ಬುಧವಾರ (ಮಾ27) ಮಧ್ಯಾಹ್ನ 12ರ ಬಳಿಕ ಅಪರಿಚಿತ ಮಹಿಳೆ ಎಸ್ಟೇಟ್‌ನ ರಬ್ಬರ್‌ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬಂದಿ ನೋಡಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್) ಆಗಮಿಸಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ. ಶಂಕಿತ ಮಹಿಳೆ ರಬ್ಬರ್‌ ತೋಟದಿಂದ

ಕೂಜಿಮಲೆ‌ ಪ್ರದೇಶದಲ್ಲಿ ಮತ್ತೆ ನಕ್ಸಲ್ ಸಂಚಾರ!?| ರಬ್ಬರ್ ತೋಟದಲ್ಲಿ ಕಂಡುಬಂದ ಅಪರಿಚಿತ ಮಹಿಳೆ ಯಾರು? ಚುರುಕುಗೊಂಡ ಶೋಧ ಕಾರ್ಯಾಚರಣೆ Read More »