ಸಮಗ್ರ ನ್ಯೂಸ್: ಚಾಟ್ ಜಿಪಿಟಿ ತಂತ್ರಜ್ಞಾನದ (ಎಐ) ಮೂಲಕ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ Open AI, ಈಗ ಧ್ವನಿ ಪಡಿಯಚ್ಚು (ವಾಯ್ಸ್ ಕ್ಲೋನ್) ಮಾಡುವ ತಂತ್ರಜ್ಞಾನವನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ. ಈ ನೂತನ ತಂತ್ರಜ್ಞಾನದ ಮೂಲಕ ಕ್ಲೋನ್ ಮಾಡಬೇಕಾದ ಧ್ವನಿಯ ಮಾಲೀಕರು ಧ್ವನಿಯನ್ನು 15 ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿದರೆ ಸಾಕು, ಅವರ ಪಡಿಯಚ್ಚನಂತಾ ಧ್ವನಿ ಸಿದ್ಧವಾಗುತ್ತದೆ.
ಆದರೆ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆಯ ಕಾರಣ ಈ ಧ್ವನಿ ಕ್ಲೋನ್ ತಂತ್ರಜ್ಞಾನವನ್ನು ಸದ್ಯ ಸಾರ್ವಜನಿಕವಾಗಿಸುತ್ತಿಲ್ಲ. ಮಾಲಿಕರಿಗೆ ಅರಿವಿಲ್ಲದೆ ಅವರ ಧ್ವನಿಯಲ್ಲಿ ಸಂದೇಶವನ್ನು ರಚಿಸುವ ಸಾಧ್ಯತೆ ಹಾಗೂ ಈ ವರ್ಷ ಅನೇಕ ದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.