ನೇತ್ರಾವತಿ ನದಿಗೆ ಹಾರಿ ತಾಯಿ ಮಗು ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಒಂದು ವರ್ಷದ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಡ್ಯಾಂ ಬಳಿಯ ನಡೆದಿದೆ.

Ad Widget ... ..

ಅಡ್ಯಾರ್ ಪದವು ನಿವಾಸಿ ಚೈತ್ರಾ ಹಾಗೂ ಒಂದು ವರ್ಷದ ಮಗು ದಿಯಾಂಶ್ ಮೃತ ದುರ್ದೈವಿಗಳು. ಇಬ್ಬರ ಮೃತದೇಹಗಳು ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ. ಗುರುವಾರವಷ್ಟೇ ಚೈತ್ರ ಮಗುವಿನ ಹುಟ್ಟುಹಬ್ಬವನ್ನು ದೇರಳಕಟ್ಟೆಯ ಸೇವಾಶ್ರಮದಲ್ಲಿ ಆಚರಿಸಿದ್ದರು. ನಂತರ ನಿನ್ನೆ ಶುಕ್ರವಾರ ಮಧ್ಯಾಹ್ನದ ನಂತರ ತಾಯಿ-ಮಗು ನಾಪತ್ತೆಯಾಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

Ad Widget

ಸಂಬಂಧಿಕರು ಮನೆ ಸುತ್ತಮುತ್ತ ಹುಡಕಾಡಿದ್ದರು. ಕಾಣದಿದ್ದಾಗ ಸಾಮಾಜಿಕ ಜಾಲತಾಣದ ಮೂಲಕ ಹುಡುಕಾಟಕ್ಕೆ ಮನವಿ ಮಾಡಿದ್ದರು. ಆದರೆ ಇಂದು ಹರೇಕಳ ಸೇತುವೆ ಸಮೀಪ ತಾಯಿ-ಮಗುವಿನ ಮೃತದೇಹ ಪತ್ತೆಯಾಗಿದ್ದು,. ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *