Ad Widget .

ಚುನಾವಣೆಗೆ ಕಾಲಿಡುತ್ತಿದೆ ಕೃತಕ ಬುದ್ಧಿಮತ್ತೆಯ ಆ್ಯಂಕರ್

ಸಮಗ್ರ ನ್ಯೂಸ್: ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಕೃತಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷವು ಸೋಮವಾರ ಅನಾವರಣಗೊಳಿಸಿದೆ. ಕಮ್ಯುನಿಸ್ಟ್ ಪಕ್ಷವು ಟ್ವೀಟ್‍ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಬಂಗಾಳದ ಏಕತೆಯ ಹೊಸ ಪ್ರಯೋಗವನ್ನು ಪ್ರಾರಂಭಿಸಿದೆ.

Ad Widget . Ad Widget .

ಈ ಕೃತಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಸಮತಾ ಎಂದು ಕರೆಯಲಾಗುತ್ತದೆ. ಹೋಳಿ ಹಬ್ಬದಂದು ಸಮತಾ ಬಂಗಾಳಿ ಭಾಷೆಯಲ್ಲಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಐ ಅನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಇದೀಗ ಪಕ್ಷ ಮುಂದಾಗಿದೆ.

Ad Widget . Ad Widget .

ಈ ಕುರಿತು ಅಭ್ಯರ್ಥಿ ಸೃಜನ್ ಭಟ್ಟಾಚಾರ್ಯ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಕೃತಕ ಬುದ್ಧಿಮತ್ತೆ ಆಪರೇಟರ್ ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದೇನೆ. ನಾವು ಯಾವಾಗಲೂ ಯಾರಿಗೂ ಹಾನಿ ಮಾಡದ ಹೊಸ ವಿಷಯಗಳನ್ನು ಹುಡುಕುತ್ತಿರುತ್ತೇವೆ ಎಂದರು.

Leave a Comment

Your email address will not be published. Required fields are marked *