Ad Widget .

ಮಂಗಳೂರು: ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ದೈತ್ಯ ಕಾಳಿಂಗ ಸರ್ಪ

ಸಮಗ್ರ ನ್ಯೂಸ್‌ : ಪಂಜರದಲ್ಲಿದ್ದ ದೈತ್ಯ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಇಲ್ಲಿನ ಜೈವಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು ತಪ್ಪಿಸಿಕೊಂಡ ಈ ಹೆಣ್ಣು ಕಾಳಿಂಗ ಸರ್ಪ ರಸ್ತೆ ದಾಟಿ ವಿಜ್ಞಾನ ಸೆಂಟರ್​ನತ್ತ ಸಾಗುತ್ತಿತ್ತು. ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget .

ತಕ್ಷಣ ನಿಸರ್ಗಧಾಮದ ಸಿಬ್ಬಂದಿ ಧಾವಿಸಿ ಅದನ್ನು ಸೆರೆ ಹಿಡಿದು ಮರಳಿ ಪಂಜರಕ್ಕೆ ಹಾಕಿದ್ದಾರೆ. ಈ ಗ ಸಂತನೋತ್ತಿಯ ಸಮಯವಾಗಿದ್ದು ಒಂದು ಹೆಣ್ಣು ಮತ್ತು ಗಂಡು ಗಾಳಿಂಗ ಸರ್ಪಗಳು ಕಾದಾಟ ಮಾಡುತ್ತಿದ್ದಾಗ ಪಂಜರದ ಮೆಶ್ ಲಿಂಕ್ ತಪ್ಪಿ ಈ ಹೆಣ್ಣು ಕಾಳಿಂಗ ಸರ್ಪ ಹೊರಕ್ಕೆ ತಪ್ಪಿಸಿ ಹೋಗಿದ್ದು ಇದನ್ನು ಗಮನಿಸಿದ ಸಿಬಂದಿ ಕೂಡಲೇ ಹಿಡಿದು ಸಂತಾನೋತ್ಪತ್ತಿ ಕೇಂದ್ರಕ್ಕೆ ಸಾಗಿಸಿದ್ದಾರೆ.

ಸಂತನೋತ್ಪತ್ತಿ ಸಂದರ್ಭ ಕಾಳಿಂಗ ಸರ್ಪಗಳ ಈ ಕಾದಾಟ ಒಂದು ಸಹಜ ಪ್ರಕ್ರಿಯೆ ಆಗಿದೆ. ತಪ್ಪಿಸಿಕೊಂಡ ಹೆಣ್ಣು ಕಾಳಿಂಗ ಆರು ವರ್ಷ ವಯಸ್ಸಾಗಿದ್ದು ಸುಮಾರು 8 ಅಡಿ ಉದ್ದವಿದೆ. ಹೆಣ್ಣು ಕಾಳಿಂಗ ಸಪೂರವಿದ್ದ ಕಾರಣ ಹೊರಗೆ ಹೋಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *