Ad Widget .

ಸಡನ್ ಆಗಿ ರಾಜೀನಾಮೆ ಕೊಟ್ಟಿದ್ದು ಯಾಕೆ ಇವರು? ಇದೇನಾ ರೀಸನ್

ಕಂಪನಿಗಳು ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರು ಚೆನ್ನಾಗಿ ಕೆಲಸ ಮಾಡಿದಾಗ ಶ್ಲಾಘಿಸುವುದು, ಅನುಕೂಲಕರ ಕೆಲಸದ ವಾತಾವರಣ ನಿರ್ಮಿಸುವುದು ಕಂಪನಿಯ ಜವಾಬ್ದಾರಿ. ಅಂದಾಗ ಮಾತ್ರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇದರಿಂದ ಫಲಿತಾಂಶವೂ ಉತ್ತಮವಾಗಿರುತ್ತದೆ. ಆದರೆ ಹೀಗೆ ಮಾಡದೇ ಹೋದಲ್ಲಿ ಉದ್ಯೋಗಿಗಳು ಏಕಾಏಕಿ ಕಂಪನಿಯನ್ನು ತೊರೆಯುತ್ತಾರೆ. ಯುಎಸ್‌ ಸ್ಟೋರ್‌ (US Store) ಒಂದರಲ್ಲಿ ಆಗಿದ್ದೂ ಇದೆ.

Ad Widget . Ad Widget .

ಯುಎಸ್‌ನ ವಿಸ್ಕಾನ್ಸಿನ್‌ನ ಮಿನರಲ್ ಪಾಯಿಂಟ್‌ನಲ್ಲಿರುವ ಡಾಲರ್ ಜನರಲ್ ಸ್ಟೋರ್‌ನಲ್ಲಿನ ಒಟ್ಟು ಏಳು ಸಿಬ್ಬಂದಿಗಳು ಕೆಲಸ ಬಿಟ್ಟಿದ್ದಾರೆ. ಬಾಗಿಲಿನ ಮೇಲೆ ಟಿಪ್ಪಣಿಗಳನ್ನು ಅಂಟಿಸಿ ಹೊರಟು ಹೋಗಿದ್ದಾರೆ. ಇದರಿಂದ ಆ ಸ್ಟೋರ್‌ ಏಕಾಏಕಿ ಬಂದ್‌ ಆಗಿದೆ.

Ad Widget . Ad Widget .

ವಿಸ್ಕಾನ್ಸಿನ್‌ನ ಮಿನರಲ್ ಪಾಯಿಂಟ್‌ನಲ್ಲಿರುವ “ಡಾಲರ್ ಜನರಲ್” ಅಂಗಡಿಯಲ್ಲಿನ ಏಳು ಸಿಬ್ಬಂದಿಗಳು ಏಕಾಏಕಿ ಹೊರಡುವ ನಿರ್ಧಾರ ಕೈಗೊಳ್ಳಲು ಕಾರಣ ಅಲ್ಲಿನ ವಾತಾವರಣ. ಹೌದು ಅಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳು ಅತಿಯಾದ ಕೆಲಸ ಹಾಗೂ ಕಡಿಮೆ ಸಂಬಳದಿಂದಾಗಿ ಬೇಸತ್ತು ಹೋಗಿದ್ದರು.

ಅಲ್ಲದೇ ವಾರದ ಏಳೂ ದಿನವೂ ಕೆಲಸ ಮಾಡಬೇಕೆಂಬ ಷರತ್ತಿಗೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಅಲ್ಲಿನ ಕೆಲಸ ವಾತಾವರಣದಿಂದ ಬೇಸತ್ತು ಉದ್ಯೋಗಿಗಳು ಕಳೆದ ಶುಕ್ರವಾರ ತಮ್ಮ ಶಿಫ್ಟ್‌ನ ನಂತರ ಹೊರಡಲು ನಿರ್ಧರಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶ್ಲಾಘನೆಯ ಕೊರತೆ, ಅತಿಯಾದ ಕೆಲಸ ಮತ್ತು ಕಡಿಮೆ ಸಂಬಳದಿಂದಾಗಿ ಇಡೀ ತಂಡವು ದೂರ ಸರಿದಿದೆ” ಎಂದು ಟಿಪ್ಪಣಿಗಳಲ್ಲಿದೆ. ಇನ್ನು, ಸ್ಟೋರ್‌ನ ಎಲ್ಲಾ ಉದ್ಯೋಗಿಗಳು ರಾಜೀನಾಮೆ ನೀಡಿದ ನಂತರ ಆ ಸ್ಟೋರ್‌ಅನ್ನು ಮುಚ್ಚಲಾಗಿದೆ.

ಗ್ರಾಹಕರಿಗೆ ಧನ್ಯವಾದ ಅರ್ಪಿಸಿದ ಉದ್ಯೋಗಿಗಳು

ಸ್ಟೋರ್‌ನ ಉದ್ಯೋಗಿಗಳು ಬರೆದಿಟ್ಟ ಮತ್ತೊಂದು ಟಿಪ್ಪಣಿಯಲ್ಲಿ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಲಾಗಿದೆ. ಭವಿಷ್ಯದಲ್ಲಿ ಆ ಗ್ರಾಹಕರಿಗೆ ಸೇವೆ ಸಲ್ಲಿಸುವುದನ್ನು ಕಳೆದುಕೊಳ್ಳುವುದಾಗಿ ಅವರು ಬರೆದಿದ್ದಾರೆ. “ನಾವು ಈ ಕೆಲಸವನ್ನು ತೊರೆದಿದ್ದೇವೆ! ನಮ್ಮ ಅದ್ಭುತ ಗ್ರಾಹಕರಿಗೆ ಧನ್ಯವಾದಗಳು. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮನ್ನು ಕಳೆದುಕೊಳ್ಳುತ್ತಿದ್ದೇವೆ!” ಟಿಪ್ಪಣಿಯಲ್ಲಿ ಬರೆಯಲಾಗಿದೆ.

ಸಿಬ್ಬಂದಿಗಳು ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವುದನ್ನು ಎಂದಿಗೂ ವಿರೋಧಿಸಿರಲಿಲ್ಲ. ಕಾರ್ಪೊರೇಟ್ ದುರಾಸೆಯಿಂದಾಗಿ ತಾವು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಅವರು ಬರೆದಿದ್ದಾರೆ. “ನಾವು ನಮ್ಮ ಗ್ರಾಹಕರನ್ನು ಪ್ರೀತಿಸುತ್ತಿದ್ದರೂ ಸಮುದಾಯಕ್ಕಾಗಿ ಒಂದು ನಿಲುವನ್ನು ತೆಗೆದುಕೊಳ್ಳಬೇಕು. ಕಾರ್ಪೊರೇಟ್ ದುರಾಸೆಯೇ ಇದಕ್ಕೆಲ್ಲ ಕಾರಣವಾಗಿದೆ. ಇಲ್ಲಿನ ನೀತಿಗಳು, ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳು ಬದಲಾಗಬೇಕಾಗಿದೆ!” ಎಂದು ಬರೆಯಲಾಗಿದೆ.

ರಜೆಯನ್ನೇ ಕೊಡುತ್ತಿರಲಿಲ್ಲ

“ಡಾಲರ್ ಜನರಲ್” ನ ಮಾಜಿ ಸ್ಟೋರ್ ಮ್ಯಾನೇಜರ್ ಟ್ರಿನಾ ಟ್ರಿಬೋಲೆಟ್ ಅವರು, ತಾನು ಮತ್ತು ಉಳಿದ ಉದ್ಯೋಗಿಗಳು “ತಿಂಗಳ ಕಾಲ” ತ್ಯಜಿಸುವ ಬಗ್ಗೆ ಚರ್ಚಿಸುತ್ತಿದ್ದೆವು. ಮುಂಬರುವ ವಾರಾಂತ್ಯವು ಕ್ರಿಸ್‌ಮಸ್‌ನ ನಂತರ ನಾನು ತೆಗೆದುಕೊಳ್ಳುತ್ತಿರುವ ಮೊದಲ ರಜೆಯಾಗಿತ್ತು. ಇಲ್ಲಿ ರಜೆಯನ್ನೇ ಕೊಡುತ್ತಿರಲಿಲ್ಲ. ನನಗೆ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

ಡಾಲರ್ ಜನರಲ್‌ನ ಕೆಲವು ಪ್ರತಿನಿಧಿಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಉದ್ಯೋಗಿಗಳಿಗೆ ವೃತ್ತಿಜೀವನವನ್ನು ಬೆಳೆಸುವ ವಾತಾವರಣವನ್ನು ಒದಗಿಸಲು ಬದ್ಧರಾಗಿರುವುದಾಗಿ ಅವರು ಹೇಳಿದ್ದಾರೆ.

ಅಂದಹಾಗೆ ಅಂಗಡಿಯು ಶನಿವಾರದಂದು ಪುನಃ ತೆರೆಯಲ್ಪಟ್ಟಿದೆ. ಆದರೆ ಅವರು ಇತರ ಸ್ಥಳಗಳಿಂದ ಸಿಬ್ಬಂದಿಗಳನ್ನು ಕರೆಸಿಕೊಂಡಿದ್ದಾರೆಯೇ ಅಥವಾ ಕಾರ್ಯಾಚರಣೆಯನ್ನು ಪುನರಾರಂಭಿಸಲು ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ವಿಷಕಾರಿ ಕೆಲಸದ ವಾತಾವರಣದಲ್ಲಿ ಯಾರೂ ಇರಲು ಬಯಸುವುದಿಲ್ಲ. ಉದ್ಯೋಗಿಗಳಿಗೆ ಅವರದ್ದೇ ಆದ ಕಷ್ಟ ನಷ್ಟಗಳು, ವೈಯಕ್ತಿಕ ಬದುಕು ಇರುತ್ತೆ… ಕೆಲಸದ ಹೊರತಾಗಿಯೂ ಅವರಿಗೆ ಬದುಕಿದೆ ಎಂಬುದನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕಿತ್ತು. ಅಲ್ಲದೇ ಅವರ ಪರಿಶ್ರಮಕ್ಕೆ ಒಂದು ಚಿಕ್ಕ ಶ್ಲಾಘನೆ, ಸರಿಯಾದ ವೇತನ ನೀಡಿದ್ದರೆ ಬಹುಶಃ ಆ ಉದ್ಯೋಗಿಗಳು ಅಂಥ ನಿರ್ಧಾರ ಕೈಗೊಳ್ಳುತ್ತಿರಲಿಲ್ಲವೇನೋ!

Leave a Comment

Your email address will not be published. Required fields are marked *