Ad Widget .

ವುಮೆನ್ಸ್ ಪ್ರೀಮಿಯರ್ ಲೀಗ್‍ನಲ್ಲಿ ಫೈನಲ್‍ಗೆ ರಾಯಲ್ ಚಾಲೆಂಜರ್ಸ್/ ನನಸಾಗುವುದೇ ಅಭಿಮಾನಿಗಳ ಕಪ್ ನಮ್ದೇ ಎಂಬ ಕನಸು

ಸಮಗ್ರ ನ್ಯೂಸ್: 2ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್‍ನಲ್ಲಿ ಆರ್‍ಸಿಬಿ ಮಹಿಳಾ ತಂಡ ಫೈನಲ್‍ಗೆ ಲಗ್ಗೆ ಇಟ್ಟಿದ್ದು, ಪುರುಷರಿಗೆ ಸಿಗದಿರುವ ಟ್ರೋಫಿಯನ್ನು ತಾವು ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿದೆ. ಇದರೊಂದಿಗೆ ಮಹಿಳಾ ಐಪಿಎಲ್‍ನಲ್ಲಾದರೂ ಆರ್‍ಸಿಬಿಯ ಟ್ರೋಫಿ ಗೆಲ್ಲುವ ಅಭಿಮಾನಿಗಳ ಕನಸು ಸಾಕಾರಗೊಳ್ಳುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Ad Widget . Ad Widget .

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್‍ಸಿಬಿಗೆ 5 ರನ್ ರೋಚಕ ಗೆಲುವು ಲಭಿಸಿತು. ಇದರೊಂದಿಗೆ ಮಹಿಳಾ ಐಪಿಎಲ್ ಖ್ಯಾತಿಯ ಟೂರ್ನಿಯಲ್ಲಿ ಆರ್‍ಸಿಬಿ ಚೊಚ್ಚಲ ಬಾರಿ ಫೈನಲ್‍ಗೇರಿತು. ಈ ಮೂಲಕ ಸತತ 2ನೇ ಫೈನಲ್ ರೀಕ್ಷೆಯಲ್ಲಿದ್ದ ಹರ್ಮನ್‍ಪ್ರೀತ್ ಕೌರ್ ನಾಯಕತ್ವದ ಮುಂಬೈ ಕನಸು ಭಗ್ನಗೊಂಡಿತು. ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನಿಯಾಗಿದ್ದ ತಂಡಗಳ ನಡುವಿನ ಕಾದಾಟ ರೋಚಕವಾಗಿಯೇ ಮುಕ್ತಾಯಗೊಂಡಿತು.

Ad Widget . Ad Widget .

ಮೊದಲು ಬ್ಯಾಟ್ ಮಾಡಿದ ಆರ್‍ಸಿಬಿ ತಾರಾ ಬ್ಯಾಟರ್‍ಗಳ ವೈಫಲ್ಯದ ಹೊರತಾಗಿಯೂ ಎಲೈಸಿ ಪೆರ್ರಿಯ ಹೋರಾಟದ ಅರ್ಧಶತಕದದಿಂದಾಗಿ 20 ಓವರಲ್ಲಿ 135 ರನ್ ಕಲೆಹಾಕಿತು. ಗುರಿ ಸಣ್ಣದಾಗಿದ್ದರೂ ಮುಂಬೈಗೆ ಗೆಲುವು ಸಿಗಲಿಲ್ಲ. 10.4 ಓವರಲ್ಲಿ 68ಕ್ಕೆ 3 ವಿಕೆಟ್ ಕಳೆದುಕೊಂಡ ತಂಡ ಸೋಲಿನತ್ತ ಮುಖ ಮಾಡಿತ್ತು. ಆ ಹಂತದಲ್ಲಿ ಹರ್ಮನ್‍ಪ್ರೀತ್ ಕೌರ್(33) ಹಾಗೂ ಅಮೇಲಿಯಾ ಕೇರ್(ಔಟಾಗದೆ 27) ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿಸಿದರೂ ರೋಚಕ ಪೈಪೆÇೀಟಿಯಲ್ಲಿ ಆರ್‍ಸಿಬಿಗೆ ವಿಜಯಲಕ್ಷ್ಮಿ ಒಲಿಯಿತು. ಕೊನೆ 3 ಓವರಲ್ಲಿ 20 ರನ್ ಬೇಕಿದ್ದಾಗ ಮೊನಚು ದಾಳಿ ಸಂಘಟಿಸಿದ ಆರ್‍ಸಿಬಿ ಜಯಭೇರಿ ಬಾರಿಸಿತು. ನಿರ್ಣಾಯಕ ಘಟ್ಟದಲ್ಲಿ ಹರ್ಮನ್‍ಪ್ರೀತ್‍ರನ್ನು ಪೆವಿಲಿಯನ್‍ಗೆ ಅಟ್ಟಿದ ಶ್ರೇಯಾಂಕ ಆರ್‍ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 4 ಓವರಲ್ಲಿ 16 ರನ್ ನೀಡಿ 2 ವಿಕೆಟ್ ಕಿತ್ತರು.

ಮುಂಬೈಗೆ ದೊಡ್ಡ ಗುರಿ ನೀಡುವ ನಿರೀಕ್ಷೆಯೊಂದಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸ್ಮೃತಿ ಮಂಧನಾರ ಯೋಜನೆ ಆರಂಭದಲ್ಲೇ ತಲೆ ಕೆಳಗಾಯಿತು. ಆದರೆ ಕ್ರೀಸ್‍ನಲ್ಲಿ ಭದ್ರವಾಗಿ ನೆಲೆಯೂರಿದ ಪೆರ್ರಿ 50 ಎಸೆತಗಳಲ್ಲಿ 66 ರನ್ ಸಿಡಿಸಿದರು. 12 ಓವರಲ್ಲಿ 57ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಕೊನೆ 8 ಓವರಲ್ಲಿ 78 ರನ್ ಸೇರಿಸಿತು.

2ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್‍ನ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಚೊಚ್ಚಲ ಪ್ರಶಸ್ತಿಗಾಗಿ ಆರ್‍ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ. ಕಳೆದ ವರ್ಷದ ಟೂರ್ನಿಯಲ್ಲಿ ಡೆಲ್ಲಿಯನ್ನು ಮಣಿಸಿ ಮುಂಬೈ ಟ್ರೋಫಿ ಗೆದ್ದಿತ್ತು.

Leave a Comment

Your email address will not be published. Required fields are marked *