Ad Widget .

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಸಹಭಾಗಿತ್ವ ದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

ಸಮಗ್ರ ನ್ಯೂಸ್: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಮುಳಿಯ ಜ್ಯುವೆಲ್ಸ್ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಂಚೆ ಜನ ಸಂಪರ್ಕ ಅಭಿಯಾನವನ್ನು ಮಾ.9 ರಂದು ಪುತ್ತೂರಿನಲ್ಲಿ ನಡೆಸಲಾಯಿತು.

Ad Widget . Ad Widget .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಸಂಸ್ಥೆ ಯ ನಿರ್ದೇಶಕಿ ಕೃಷ್ಣ ವೇಣಿ ಪ್ರಸಾದ್ ಮುಳಿಯ ಹಾಗೂ ಅಶ್ವಿನಿ ಕೃಷ್ಣ ಮುಳಿಯ ವಹಿಸಿದ್ದರು. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಜನರ ಬಳಿಗೆ ಇಲಾಖೆ ಯೋಜನೆಯನ್ನು ಕೊಂಡೊಯ್ಯಲು ಯೋಜಿಸಲಾಗಿದೆ. ಇದರ ಭಾಗವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಇತರ ಸೇವೆಗಳನ್ನು ಸ್ಥಳದಲ್ಲೇ ಜನರಿಗೆ ನೀಡಲಾಗುವುದು. ಗ್ರಾಮೀಣ ಭಾಗದ ಜನತೆಗೂ ಬ್ಯಾಂಕ್ ಹಾಗೂ ವಿಮೆ ಸೌಲಭ್ಯಗಳನ್ನು ನೀಡುತ್ತಿದೆ. ಗ್ರಾಮೀಣ ಜನತೆಗೂ ಅನುಕೂಲವಾಗುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

Ad Widget . Ad Widget .

ಮಾಹಿತಿಯನ್ನು ಅತಿಥಿಗಳಾಗಿ ಹರೀಶ್ ಜಿ, ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ, ಉಷಾ ಕೆ.ಆರ್ ಉಪ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ, ಸುನಿತಾ ಮಹಿಳಾ ಪೊಲೀಸ್ ಠಾಣಾಧಿಕಾರಿ ಪುತ್ತೂರು, ಗಣಪತಿ ಮರಡಿ ಸಹಾಯಕ ಅಂಚೆ ಅಧೀಕ್ಷಕರು ಪುತ್ತೂರು ಉಪವಿಭಾಗ, ತೀರ್ಥಪ್ರಸಾದ್ ಪ್ರಧಾನ ಅಂಚೆ ಪಾಲಕರು ಪ್ರಧಾನ ಅಂಚೆ ಕಛೇರಿ ಪುತ್ತೂರು ಇವರು ವಹಿಸಿದ್ದರು.

Leave a Comment

Your email address will not be published. Required fields are marked *