Ad Widget .

ಮಾ. 2, ಐಲೇಸಾ ಜೂಮ್ ವೇದಿಕೆಯಲ್ಲಿ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ| ಇಲ್ಲಿದೆ ಜೂಮ್ ಮೀಟಿಂಗ್ ಲಿಂಕ್

ಸಮಗ್ರ ನ್ಯೂಸ್:ಕೃತಕ ಬುದ್ದಿ ಮತ್ತೆ ಮುಂದಿನ ಅನಿವಾರ್ಯತೆ AI(Artificial Intelligence) -ADOPTION INVITABLE_ ಎಂಬ ವಿಚಾರವಾಗಿ ಮಾ. 2ರಂದು ಸಂಜೆ ಐಲೇಸಾ ಜೂಮ್ ವೇದಿಕೆಯಲ್ಲಿ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ

Ad Widget . Ad Widget .

ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ ಆ ವೇಗಕ್ಕೆ ಹೊಂದಿಕೊಂಡು ನಮ್ಮ ವೃತ್ತಿ ಪ್ರವೃತ್ತಿಗಳನ್ನು ಬದಲಾಯಿಸಿಕೊಳ್ಳುವುದು ಇಂದಿನ ಅತ್ಯಂತ ಅಗತ್ಯಗಳಲ್ಲಿ ಒಂದು ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಯಾವ ಮಟ್ಟದಲ್ಲಿ ಮುಂದುವರಿದು ಇಡೀ ವಿಶ್ವಕ್ಕೆ ಬೆರಗನ್ನು ಹುಟ್ಟಿಸಿತು ಅನ್ನುವುದು ಈಗ ಇತಿಹಾಸ.

Ad Widget . Ad Widget .

ಮುಂದಿನ ದಿನಗಳು ತಾಂತ್ರಿಕತೆಯ ಜೊತೆಗೆ ಅತ್ಯಂತ ವೇಗವಾಗಿ ಬದಲಾಗುವಂತಹುದು. ಯುವಜನರೆ ತುಂಬಿರುವ ಭಾರತ ಈ ಬದಲಾವಣೆಗಳನ್ನು ಅಪ್ಪಿಕೊಳ್ಳುವುದು ಬಲು ಸುಲಭ. ಒಂದಿಷ್ಟು ಪೂರ್ವ ತಯಾರಿಯೊಂದಿಗೆ ನಾವು ನಮ್ಮ ಯುವಸಂಪತ್ತನ್ನು ಈ ದಿಸೆಯಲ್ಲಿ ತೊಡಗಿಸಿಕೊಳ್ಳಲು ಸಹಕರಿಸಿದರೆ ಪ್ರಪಂಚ ಅನಿವಾರ್ಯವಾಗಿ ಭಾರತದತ್ತ ತಿರುಗಿ ನೋಡದೆ ಅನ್ಯಥಾ ವಿಧಿಯಿಲ್ಲ.

ವೃತ್ತಿಯ ಜೊತೆ ಜೊತೆಗೆ ಸಂಗೀತ ಸಾಹಿತ್ಯ ಮುಂತಾದ ಪ್ರವೃತ್ತಿಯಲ್ಲಿಯೂ ಕೃತಕ ಬುದ್ದಿ ಮತ್ತೆಯ ಅವಲಂಬನೆ ಅನಿವಾರ್ಯವಾಗಿರುವುದರಿಂದ ಅದಕ್ಕಾಗಿ ನಾವು ಈಗಿಂದೀಗಲೆ ಸಜ್ಜಾಗುವುದು ಅಗತ್ಯ. ಈ ವಿಷಯದಲ್ಲಿ ಒಂದಿಷ್ಟು ವಿಚಾರ ಮಂಡನೆ, ಅನುಭವ ಹಂಚಿಕೆ ಮತ್ತು ಸಂವಾದ ಮೂಲಕ ಜನಜಾಗೃತಿ ಮೂಡಿಸಲು ಐಲೇಸಾದ ಜೂಮ್ ವೇದಿಕೆಯಲ್ಲಿ ಇಬ್ಬರು ಪ್ರತಿಭಾನ್ವಿತ ಸಂಪನ್ಮೂಲ ವ್ಯಕ್ತಿಗಳಾದ Indian Institute of Information Technology Dharwad ಇಲ್ಲಿಯ ಸಂಶೋಧನಾ ವೃತ್ತಿಯ ಯುವ ಪ್ರತಿಭೆ ಪ್ರದ್ಯೋತ್ ಹೆಗ್ಡ ಮತ್ತು HQ Connections Pte Ltd S ingapore ಇಲ್ಲಿನ Principal consultant ಆಗಿರುವ ಉಡುಪಿ‌ ಮೂಲದ ಉದ್ಯಮಿ ರಾಜೇಶ್ ಆಚಾರ್ಯ ಉತ್ಸುಕರಾಗಿದ್ದು ಮಾ. 2ರಂದು ಸಂಜೆ 7:30 (ಭಾರತ) ದ ಸಮಯ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಐಲೇಸಾದ ವಿವೇಕ್ ಮಂಡೆಕರ ನಡೆಸಿಕೊಡಲಿದ್ದು ತಾಂತ್ರಿಕವಾಗಿ ಗೋಪಾಲ್ ಪಟ್ಟೆ ಸಹಕರಿಸಲಿದ್ದಾರೆ.

ಜಗತ್ತು ಬಹುವೇಗವಾಗಿ ತಾಂತ್ರಿಕತೆಯಲ್ಲಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಉದ್ಯೋಗಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಅವಶ್ಯಕ ಕಾರ್ಯಕ್ರಮವಾಗಿದ್ದು ಪೋಷಕರ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಜೂಮ್ ವೇದಿಕೆ
Meeting ID: 81674349733 Pass Code: ilesa
Direct Link: https://us05web.zoom.us/j/81674349733?pwd=ZFcf5Kwdm1aGhkcxXhBodzXcCcSqWt.1 ಮೂಲಕ ಭಾಗವಹಿಸಿ ಇದರ ಸದುಪಯೋಗ ಪಡೆದು ಕೊಳ್ಳಲು ಐಲೇಸಾ ಮಾಧ್ಯಮ ಸಂಚಾಲಕ ಸುರೇಂದ್ರ ಮಾರ್ನಾಡ್ ಮತ್ತು ಶಾಂತಾರಾಮ್ ವಿ. ಶೆಟ್ಟಿ ವಿನಂತಿಸಿದ್ದಾರೆ.

Leave a Comment

Your email address will not be published. Required fields are marked *