February 2024

ಅಶಕ್ತರ ಹೆಸರಿನಲ್ಲಿ ಹಣ ಸಂಗ್ರಹ | ನಕಲಿ ತಂಡವನ್ನು ಪೊಲೀಸರಿಗೊಪ್ಪಿಸಿದ ನಾಗರಿಕರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ತಂಡವೊಂದು ಆಶಕ್ತರ ಹೆಸರಿನಲ್ಲಿ ಹಣ ಸಂಗ್ರಹ ಮಾಡುತ್ತಿದ್ದು, ವಿಚಾರಣೆ ನಡೆಸಿ ನಾಗರೀಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಫೆ.3 ರಂದು ಪೆರ್ಲದಲ್ಲಿ ನಡೆದಿದೆ. ಈ ತಂಡ ಪೇಟೆಯಲ್ಲಿ,‌ ಜಾತ್ರೆ ಜನ ಜಂಗುಲಿ ಇರುವಲ್ಲಿ ದೇಣಿಗೆ ಸಂಗ್ರಹಿಸಿ ನಕಲಿ ಕೂಪನ್ ನೀಡುತ್ತಿತ್ತು. ಮೂರು ಜನರ ತಂಡವಾಗಿದೆ. ಆರಂಭದಲ್ಲಿ ಹರೀಶ ಎಂಬ ಹಿಂದೂ ಹೆಸರನ್ನು ಸೂಚಿಸಿದ, ಈತನ ಪೂರ್ವಪರ ದಾಖಲೆ ಪರಿಶೀಲಿಸಿದಾಗ ಹಾರೀಸ್ ಎಂದು ಪತ್ತೆಯಾಗಿತ್ತು. ಬಳಿಕ ಇನ್ನೋರ್ವನನ್ನು ವಿಚಾರಿಸಿದಾಗ ಈತನು […]

ಅಶಕ್ತರ ಹೆಸರಿನಲ್ಲಿ ಹಣ ಸಂಗ್ರಹ | ನಕಲಿ ತಂಡವನ್ನು ಪೊಲೀಸರಿಗೊಪ್ಪಿಸಿದ ನಾಗರಿಕರು Read More »

ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್| ಸಿಎಂ ಸಿದ್ದರಾಮಯ್ಯ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ದಾವಣಗೆರೆಯಲ್ಲಿ ನಡೆದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ, ಈ ಬಗ್ಗೆ ಬಜೆಟ್ ನಲ್ಲಿ ಘೋಷಿಸಲು ನಿರ್ಧರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸ್ವಾತಂತ್ರ್ಯಪೂರ್ವದ ಪತ್ರಿಕೋದ್ಯಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎನ್ನುವ ಆಶಯ ಪ್ರಧಾನವಾಗಿ ಕೆಲಸ ಮಾಡಿತ್ತು. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವವನ್ನು

ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್| ಸಿಎಂ ಸಿದ್ದರಾಮಯ್ಯ ಘೋಷಣೆ Read More »

ಸುಳ್ಯ: ಬಿಜೆಪಿ ಮಂಡಲದ ನೂತನ ಅದ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕ

ಸಮಗ್ರ ನ್ಯೂಸ್: ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಸಮಿತಿ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಘೋಷಿಸಿದ್ದಾರೆ. ವೆಂಕಟ್ ವಳಲಂಬೆಯವರು ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹರೀಶ್ ಕಂಜಿಪಿಲಿಯವರು ಪ್ರಸ್ತುತ ಅಧ್ಯಕ್ಷರಾಗಿದ್ದು, ಇವರ ನೇಮಕಕ್ಕೆ ಮೊದಲು ವೆಂಕಟ್ ವಳಲಂಬೆಯವರು ಅಧ್ಯಕ್ಷರಾಗಿದ್ದು ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಅವರು ಈ ಹಿಂದೆ 2015 ರಿಂದ 2020 ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವೆಂಕಟ್ ವಳಲಂಬೆ ನೇಮಕಕ್ಕೆ ಪಕ್ಷದೊಳಗೆ ಅಸಮಾಧಾನ ಇದ್ದರೂ ಕೊನೆಕ್ಷಣದಲ್ಲಿ ರಾಜ್ಯದ ಹಿರಿಯರ

ಸುಳ್ಯ: ಬಿಜೆಪಿ ಮಂಡಲದ ನೂತನ ಅದ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕ Read More »

MBA ಪಾಸಾದವರಿಗೆ ಕೆಲಸ ಇದೆ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಟ್ರೈನಿ ಆಫೀಸರ್-I ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 14, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಶೈಕ್ಷಣಿಕ ಅರ್ಹತೆ:ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಫೈನಾನ್ಸ್​ನಲ್ಲಿ ಎಂಬಿಎ ಪೂರ್ಣಗೊಳಿಸಿರಬೇಕು. ವಯೋಮಿತಿ: ಪುಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ

MBA ಪಾಸಾದವರಿಗೆ ಕೆಲಸ ಇದೆ, ಬೇಗ ಅಪ್ಲೈ ಮಾಡಿ Read More »

ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿಗೆ ಭಾರತರತ್ನ‌| ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಸಮಗ್ರ ನ್ಯೂಸ್: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಇಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ

ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿಗೆ ಭಾರತರತ್ನ‌| ಪ್ರಧಾನಿ ನರೇಂದ್ರ ಮೋದಿ ಘೋಷಣೆ Read More »

ಹೆಚ್‌ಎಸ್‌ಆರ್​ಪಿ ನೇಮ್ ಬೋರ್ಡ್| ಗಡುವು ಮುಗಿಯಲು 15 ದಿನವಷ್ಟೇ ಬಾಕಿ

ಸಮಗ್ರ ನ್ಯೂಸ್: ರಾಜ್ಯ ಸಾರಿಗೆ ಇಲಾಖೆ ಹೆಚ್‌ಎಸ್‌ಆರ್​ಪಿ ನೇಮ್ ಬೋರ್ಡ್ ಹಾಕಿಸಿಕೊಳ್ಳಲು ವಾಹನ ಸವಾರರಿಗೆ ಡೆಡ್ಲೈನ್ ಮುಗಿಯಲು ಹದಿನೈದು ದಿನಗಳಷ್ಟೇ ಬಾಕಿ ಇದೆ. 2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್‌ (ಹೆಚ್‌ಎಸ್‌ಆರ್‌ಪಿ) ಹಾಕಿಸಿಕೊಳ್ಳುವಂತೆ ನೀಡಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ ಫೆ.17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಹೆಚ್‌ಎಸ್‌ಆರ್​ಪಿ ನೇಮ್ ಬೋರ್ಡ್| ಗಡುವು ಮುಗಿಯಲು 15 ದಿನವಷ್ಟೇ ಬಾಕಿ Read More »

ಪಂಜಾಬ್ ನ್ಯಾಷನಲ್ ಬ್ಯಾಂಕ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಪಂಜಾಬ್​ ನ್ಯಾಷನಲ್​ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್, ಸೀನಿಯರ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್​ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 4, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ನ ಅಧಿಕೃತ ವೆಬ್​ಸೈಟ್​​www.pnbindia.in

ಪಂಜಾಬ್ ನ್ಯಾಷನಲ್ ಬ್ಯಾಂಕ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಸಲ್ಲಿಸಿ Read More »

ಅಂಡಾಣು ಸಂಗ್ರಹಿಸಿಟ್ಟು ಲಿಂಗ ಪರಿವರ್ತನೆ| ಗಂಡು ಮಗುವಿನ ತಂದೆಯಾದ ತೃತೀಯ ಲಿಂಗಿ!!

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಲಿಂಗ ಪರಿವರ್ತನೆ ಬಹಳ ಸಾಮಾನ್ಯವಾಗಿದೆ. ಆದರೆ ಕೇರಳದಲ್ಲಿ ಮಹಿಳೆಯೊಬ್ಬಳು ಲಿಂಗ ಪರಿವರ್ತನೆಗೂ ಮೊದಲು ತನ್ನ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟು, ಈಗ ತಂದೆಯಾಗಿದ್ದಾಳೆ. ಫ್ರೀಝ್‌ ಮಾಡಿಟ್ಟ ಅಂಡಾಣು ಮತ್ತು ದಾನಿಯ ವೀರ್ಯದಿಂದ ಗಂಡು ಮಗುವೊಂದು ಜನಿಸಿದೆ. ಲಿಂಗಪರಿವರ್ತನೆಗೆ ಒಳಗಾದ ವ್ಯಕ್ತಿ ಕೋಝಿಕ್ಕೋಡ್ ಜಿಲ್ಲೆಯ ನಿವಾಸಿ. ಕೊಚ್ಚಿಯ ರೆನೈ ಮೆಡಿಸಿಟಿ ಆಸ್ಪತ್ರೆಯಲ್ಲಿ ಈ ಪವಾಡ ನಡೆದಿದೆ. ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಸಂರಕ್ಷಿತ ಅಂಡಾಣುವಿನಿಂದ ತಂದೆಯಾದ ಮೊದಲ ಪ್ರಕರಣ ಇದಾಗಿದೆ. ಡಾ.ವರ್ಗೀಸ್ ನೇತೃತ್ವದ ತಂಡ ಗರ್ಭಧಾರಣೆಯನ್ನು

ಅಂಡಾಣು ಸಂಗ್ರಹಿಸಿಟ್ಟು ಲಿಂಗ ಪರಿವರ್ತನೆ| ಗಂಡು ಮಗುವಿನ ತಂದೆಯಾದ ತೃತೀಯ ಲಿಂಗಿ!! Read More »

ಅಮೆಜಾನ್ ನಲ್ಲಿ ಆಫರ್ ಗಳ ಸುರಿಮಳೆ! ಈ 5 ಫೋನ್ ಗಳು ತುಂಬಾ ಕಡಿಮೆ ಬೆಲೆ! ಬೇಗ ಪರ್ಚೇಸ್ ಮಾಡಿ

ಸಮಗ್ರ ನ್ಯೂಸ್: ನೀವು ಹೊಸ ಫೋನ್ ಖರೀದಿಸಲು ಬಯಸಿದರೆ, Amazon ನಿಮಗಾಗಿ ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಅತ್ಯುತ್ತಮ ಡೀಲ್ ಅಡಿಯಲ್ಲಿ ಕಡಿಮೆ ಬೆಲೆಗೆ ಯಾವ ಫೋನ್‌ಗಳನ್ನು ಮನೆಗೆ ತರಬಹುದು ಎಂಬುದನ್ನು ಇಲ್ಲಿ ನೋಡೋಣ. ಆನ್‌ಲೈನ್ ಇ-ಕಾಮರ್ಸ್ ಸೈಟ್‌ಗಳಲ್ಲಿ ಗ್ರಾಹಕರು ಬಹು ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯುತ್ತಿದ್ದಾರೆ. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಕೂಡ ಅಂತಹ ಕೆಲವು ಕೊಡುಗೆಗಳನ್ನು ಹೊಂದಿದೆ. ಇವುಗಳಿಗೆ ಇಲ್ಲ ಎಂದು ಹೇಳುವುದು ಬಹುತೇಕ ಕಷ್ಟ. ಅಮೆಜಾನ್ ನಲ್ಲೂ ಆಫರ್ ಗಳ ಮಳೆ ಸುರಿಯಲಿದೆ ಎನ್ನಬಹುದು. ಹಾಗಾದರೆ,

ಅಮೆಜಾನ್ ನಲ್ಲಿ ಆಫರ್ ಗಳ ಸುರಿಮಳೆ! ಈ 5 ಫೋನ್ ಗಳು ತುಂಬಾ ಕಡಿಮೆ ಬೆಲೆ! ಬೇಗ ಪರ್ಚೇಸ್ ಮಾಡಿ Read More »

ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ಆನೆ

ಸಮಗ್ರ ನ್ಯೂಸ್: ಅಬ್ಬಬ್ಬಾ ಈ ವಿಡಿಯೋ ನೋಡಿದ್ರೆ ನೀವು ಭಯ ಪಡ್ತಿರಾ.. ಹೌದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಆನೆಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಮತ್ತು ಮೂಲೆಹೊಳೆ ನಡುವೆ ಈ ಘಟನೆ ನಡೆದಿದೆ. ಇಬ್ಬರು ಪ್ರವಾಸಿಗರು ಆನೆಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ, ಓರ್ವ ಕೆಳಗೆ ಬಿದ್ದಿದ್ದಾನೆ. ಕೂಡಲೆ ವ್ಯಕ್ತಿ ಪಕ್ಕಕ್ಕೆ ಸರಿದಿದ್ದು, ಅದೃಷ್ಟವಶಾತ್

ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ಆನೆ Read More »