February 2024

ರಿಲಯನ್ಸ್ ಜೊತೆಗೆ ವಾಲ್ಟ್ ಡಿಸ್ನಿ ವಿಲೀನ

ಸಮಗ್ರ ನ್ಯೂಸ್: ಭಾರತದಲ್ಲಿ ವಾಲ್ಟ್ ಡಿಸ್ನಿ ಸಂಸ್ಥೆಯು ರಿಲಯನ್ಸ್ ಜೊತೆಗೆ ಮಾಧ್ಯಮ ಕ್ಷೇತ್ರದಲ್ಲಿ ವಿಲೀನವಾಗುವುದಾಗಿ ಪ್ರಕಟಿಸಿದೆ. ಈ ಮೂಲಕ ಹೊಸ ಸಂಸ್ಥೆಯ ಒಟ್ಟಾರೆ ಮೌಲ್ಯ 70 ಸಾವಿರ ಕೋಟಿ ರು.ಗೂ ಅಧಿಕವಾಗಲಿದೆ. ಹೊಸ ಸಂಸ್ಥೆಯಲ್ಲಿ ಶೇ.63.16ರಷ್ಟು ಷೇರನ್ನು ರಿಲಯನ್ಸ್ ಮತ್ತು ಅದರ ಅಂಗ ಸಂಸ್ಥೆಗಳು ಹೊಂದಿದ್ದರೆ, ಡಿಸ್ನಿ ಸಂಸ್ಥೆಯು ಶೇ.36.84ರಷ್ಟು ಷೇರುಗಳನ್ನು ಹೊಂದಿರಲಿದೆ. ಹೊಸ ಸಂಸ್ಥೆಯ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರು ಕಾರ್ಯನಿರ್ವಹಿಸಲಿದ್ದು, ಉಪಾಧ್ಯಕ್ಷರಾಗಿ ಉದಯ್ ಶಂಕರ್ ಅವರು ಕಾರ್ಯನಿರ್ವಹಿಸಲಿದ್ದಾರೆ. ರಿಲಯನ್ಸ್ ಒಟಿಟಿ ಕ್ಷೇತ್ರದಲ್ಲಿ 11.5 ಸಾವಿರ […]

ರಿಲಯನ್ಸ್ ಜೊತೆಗೆ ವಾಲ್ಟ್ ಡಿಸ್ನಿ ವಿಲೀನ Read More »

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ/ ಸಜ್ಜಾಗಿವೆ ಪರೀಕ್ಷಾ ಕೇಂದ್ರಗಳು

ಸಮಗ್ರ ನ್ಯೂಸ್: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಮಾರ್ಚ್ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಜಾರಿಯಾಗಿರುವ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 2ರವರೆಗೆ ಯಾವುದೇ ಝರಾಕ್ಸ್ ಅಂಗಡಿ ತೆರೆಯುವಂತಿಲ್ಲ. ಸಿಸಿಟಿವಿ ಕ್ಯಾಮೆರಾಗಳನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಅಳವಡಿಸಲಾಗಿದೆ. ಈ ಬಾರಿ 80 ಅಂಕಕ್ಕೆ ಪರೀಕ್ಷೆ ಬರೆಯಲಿದ್ದು, 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ಒಟ್ಟಾರೆ 6,98,624 ವಿದ್ಯಾರ್ಥಿಗಳು ಪರೀಕ್ಷೆ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ/ ಸಜ್ಜಾಗಿವೆ ಪರೀಕ್ಷಾ ಕೇಂದ್ರಗಳು Read More »

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಇಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಸಮಗ್ರ ನ್ಯೂಸ್: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದಿನಿಂದ ಆರಂಭವಾಗುತ್ತಿದ್ದು, ಇಂದು ಸಂಜೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ಶಿವರಾಜ್ ಕುಮಾರ್, ಡಾ. ಜಬ್ಬಾರ್ ಪಟೇಲ್, ಬಾಂಗ್ಲಾ ನಟಿ ಅಜಮೇರಿ ಬಂದೋನ್, ವಿಮರ್ಶಕಿ ವಿಯರಾ ಲ್ಯಾ0ಗರೋವಾ ಭಾಗಿಯಾಗಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮೂರು ಬಾರಿ ಗ್ರಾಮಿ ಪ್ರಶಸ್ತಿ ಗಳಿಸಿದ ರಿಕಿ ಕೇಜ್ ಅವರು ಉದ್ಘಾಟನೆ ಮಾಡಲಿದ್ದಾರೆ. ಬೋಂಜೊರ್ ಸ್ವಿಟ್ಸಲೆರ್ಂಡ್ ಸಿನಿಮಾ ಉದ್ಘಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಇಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ Read More »

ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ/ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮಾಹಿತಿ

ಸಮಗ್ರ ನ್ಯೂಸ್: . ಸಂಸ್ಕರಣೆ ಮಾಡದೆ ನದಿಗೆ ಕೊಳಚೆ ನೀರು ಬಿಡುವುದರಿಂದ ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮಾಹಿತಿ ನೀಡಿದೆ. ಈ ರೀತಿ ಸಂಸ್ಕರಣೆ ಮಾಡದ ಕೊಳಚೆ ನೀರನ್ನು ನದಿಗೆ ಬಿಟ್ಟರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಒಟ್ಟಾರೆ 258 ಮಿಲಿಯನ್ ಲೀಟರ್‍ಗೂ ಹೆಚ್ಚು ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ಗಂಗಾ ನದಿಗೆ ಬಿಡಲಾಗುತ್ತಿದ್ದು, ಮಲದಲ್ಲಿ ಬೆಳೆಯುವ ಕೋಲಿಫಾರ್ಮ್ ಬ್ಯಾಕ್ಟಿರಿಯಾ ನದಿಯ ನೀರಿನಲ್ಲಿ ಕಂಡುಬಂದಿದೆ. ಗಂಗಾ

ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ/ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮಾಹಿತಿ Read More »

ರಾಜ್ಯದ ಬಜೆಟ್ ಅಧಿವೇಶನ/ ಇಂದು ಅಧಿಕೃತ ತೆರೆ

ಸಮಗ್ರ ನ್ಯೂಸ್: ರಾಜ್ಯದ ಬಜೆಟ್ ಅಧಿವೇಶನ ಕಳೆದ 15 ದಿನಗಳಿಂದ ನಡೆಯುತ್ತಿದ್ದು, ಇಂದು ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ. ಕಳೆದ ಶುಕ್ರವಾರ ಕೊನೆಗೊಳ್ಳಬೇಕಿದ್ದ ಬಜೆಟ್ ಅಧಿವೇಶನವನ್ನು ನಾಲೈದು ದಿನ ವಿಸ್ತರಿಸಲಾಗಿತ್ತು. ಇಂದು ಸಂಸತ್ತು ಮತ್ತು ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. 2024-2025 ರ ಬಜೆಟ್ ಅನ್ನು ಆಯವ್ಯಯ ವಿಧೇಯಕಕ್ಕೆ ಸದನದಲ್ಲಿ ಅಂಗೀಕಾರ ಪಡೆಯಲಿದ್ದಾರೆ. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಾಹಾಕಾರ ಶುರುವಾಗಿದೆ. ಆದರೆ, ಸರ್ಕಾರ ನೀರಿನ

ರಾಜ್ಯದ ಬಜೆಟ್ ಅಧಿವೇಶನ/ ಇಂದು ಅಧಿಕೃತ ತೆರೆ Read More »

ವಿವಾದಗಳ ಮೇಲೆ ಸಿಲುಕಿರುವ ಚಾಲೆಂಜಿಂಗ್ ಸ್ಟಾರ್| ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು

ಸಮಗ್ರ ನ್ಯೂಸ್: ನಟ ದರ್ಶನ್ ವಿವಾದಗಳ ಮೇಲೆ ವಿವಾದ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಆಡಿದ ಮಾತುಗಳು ದರ್ಶನ್​ ಅವರಿಗೆ ಸಂಕಷ್ಟ ತಂದೊಡ್ಡಿವೆ. ಈಗಾಗಲೇ ದರ್ಶನ್ ವಿರುದ್ದ ನಾಲ್ಕು ದೂರುಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಈಗ ರೇಣುಕಮ್ಮ ಎಂಬುವರು 37ನೇ ACMM ಕೋರ್ಟ್ ನಲ್ಲಿ ಖಾಸಗಿ ದೂರನ್ನು ದರ್ಶನ್ ವಿರುದ್ಧ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 295(A), 509, 298, 504 ಅಡಿ ಕೇಸ್ ನಮೂದಿಸುವಂತೆ ಖಾಸಗಿ ದೂರನ್ನು ರೇಣುಕಮ್ಮ ದಾಖಲಿಸಿದ್ದಾರೆ. IPC 295(A), ಉದ್ದೇಶ

ವಿವಾದಗಳ ಮೇಲೆ ಸಿಲುಕಿರುವ ಚಾಲೆಂಜಿಂಗ್ ಸ್ಟಾರ್| ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು Read More »

ಜಾರ್ಖಂಡ್‌ನಲ್ಲಿ ಭೀಕರ ರೈಲು ದುರಂತ| 12 ಮಂದಿ ಸಾವು

ಸಮಗ್ರ ನ್ಯೂಸ್: ಜಾರ್ಖಂಡ್‌ನ ಜಮ್ತಾರ ಜಿಲ್ಲೆಯಲ್ಲಿ ನಿನ್ನೆ ಸಂಜೆ ಭೀಕರ ರೈಲು ದುರಂತ ಸಂಭವಿಸಿದೆ. ಈ ದುರಂತದಲ್ಲಿ ಸ್ಥಳದಲ್ಲೇ 12 ಮಂದಿ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯೂ ಕೂಡಲೇ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯನಡೆದಿದೆ ಎಂದು ತಿಳಿದುಬಂದಿದೆ. ಭಾಗಲ್ಪುರಕ್ಕೆ ತೆರಳುತ್ತಿದ್ದ ಆಂಗ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಹರಡಿದೆ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆತಂಕದಲ್ಲಿ ನಿಧಾನವಾಗಿ ಚಲಿಸುತ್ತಿದ್ದ

ಜಾರ್ಖಂಡ್‌ನಲ್ಲಿ ಭೀಕರ ರೈಲು ದುರಂತ| 12 ಮಂದಿ ಸಾವು Read More »

ಕುಡಿದ ಮತ್ತಲ್ಲಿ ಸಿಕ್ಕ ಸಿಕ್ಕವರಿಗೆ ಕಚ್ಚಿದ ಯುವಕ

ಸಮಗ್ರ ನ್ಯೂಸ್: ಕುಡಿದ ಮತ್ತಲ್ಲಿ ಏನೇನೆಲ್ಲ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸಾಕ್ಷಿ ಇದೆ ನೋಡಿ, ಮೂವರು ಪೊಲೀಸ್​ ಸಿಬ್ಬಂದಿ ಸೇರಿದಂತೆ ಸಿಕ್ಕ ಸಿಕ್ಕವರಿಗೆ ಮನಬಂದಂತೆ ಯುವಕ ಕಚ್ಚಿದಾನೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಂ.ಜಿ ರಸ್ತೆಯಲ್ಲಿ ನಡೆದಿದೆ. ಮಹೇಶ್​​ ಎನ್ನುವ ಯುವಕನಿಂದ ಕೃತ್ಯವೆಸಗಲಾಗಿದೆ. ಶೇಖರ್​​, ಪೆಂಚಲಯ್ಯ, ಅಶ್ವತ್ಥ್​ ಎಂಬ ಪೊಲೀಸ್​ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯ ಮಾಡಿದ ವ್ಯಕ್ತಿಯನ್ನು ಹಿಡಿದು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರ ಮನವಿಗೂ ಸ್ಪಂದಿಸದೆ ಯುವಕ ರಂಪಾಟ ಮಾತ್ರ ಜೋರಾಗಿತ್ತು.

ಕುಡಿದ ಮತ್ತಲ್ಲಿ ಸಿಕ್ಕ ಸಿಕ್ಕವರಿಗೆ ಕಚ್ಚಿದ ಯುವಕ Read More »

ಮೆಟ್ರೋದಲ್ಲಿ ರೈತನಿಗೆ ಅವಮಾನ: ಮಾನವ ಹಕ್ಕುಗಳ ಆಯೋಗದಿಂದ BMRCLಗೆ ನೋಟಿಸ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಮೆಟ್ರೋ ಅಂದ್ರೆ ಎಲ್ಲರಿಗೂ ಖುಷಿ, ಒಂದು ಸಲನಾದ್ರು ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂಬುದು ಜನರ ಆಸೆಯಾಗಿರುತ್ತದೆ. ಆದ್ರೆ ಇದೇ ಮೆಟ್ರೊದಲ್ಲಿ ಅಮಾನವೀಯ ಘಟನೆಯೊಂದು ನಡೆದು ಹೋಗಿದೆ.ಹೌದು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ರೈತನೊರ್ವನಿಗೆ ಅವಮಾನ ಮಾಡಲಾಗಿದೆ. ಫೆಬ್ರವರಿ 26 ರಂದು ಬಟ್ಟೆ ಕೊಳೆಯಿದೆ ಎಂಬ ಕಾರಣಕ್ಕೆ ಬಡ ರೈತನ ಮೇಲೆ‌ ಮೇಟ್ರೋ ಸಿಬ್ಬಂದಿ ದುರಹಂಕಾರದ‌ ವರ್ತನೆ ಮೆರೆದಿದ್ದರು. ಇದನ್ನು ಸಹ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಅಷ್ಟೇ ಅಲ್ಲ, ರೈತನನ್ನು ಒಳಗೆ ಬಿಡದ ಸಿಬ್ಬಂದಿ

ಮೆಟ್ರೋದಲ್ಲಿ ರೈತನಿಗೆ ಅವಮಾನ: ಮಾನವ ಹಕ್ಕುಗಳ ಆಯೋಗದಿಂದ BMRCLಗೆ ನೋಟಿಸ್ Read More »

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಯ ರಚನೆಗೆ ಸಿದ್ದತೆ| ಮಾ.11ರಂದು ಮತದಾನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಯ ರಚನೆಗೆ ಮಾ.11ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಫೆ.26ರಿಂದ ಪ್ರಾರಂಭಗೊಂಡಿದ್ದು, ನಾಮಪತ್ರ ಸಲ್ಲಿಸಲು ಮಾ. 3 ಅಂತಿಮ ದಿನವಾಗಿದೆ. ಮಾ.4ರಂದು ನಾಮಪತ್ರ ಪರಿಶೀಲನೆ, ಮಾ.5ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಅದೇ ದಿನ ರಿಟರ್ನಿಂಗ್‌ ಅಧಿಕಾರಿಯವರು ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಿದ್ದಾರೆ. ಮಾ.11ರಂದು ಮಂಗಳೂರಿನ ಕೋಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಯ ರಚನೆಗೆ ಸಿದ್ದತೆ| ಮಾ.11ರಂದು ಮತದಾನ Read More »