Ad Widget .

ಬೈಕ್ ಚಾಲನೆ ಮಾಡಿದ ಅಪ್ರಾಪ್ತ ಪುತ್ರ| ದಂಡ ತೆತ್ತು ಸಜೆ ಅನುಭವಿಸಿದ ತಾಯಿ

ಸಮಗ್ರ ನ್ಯೂಸ್: ಅಪ್ರಾಪ್ತ ಮಕ್ಕಳಿಗೆ ಚಾಲನೆ ಮಾಡಲು ವಾಹನ ಕೊಡಬೇಡಿ ಎಂದು ಪೊಲೀಸ್ ಇಲಾಖೆ ಎಚ್ಚರಿಸುತ್ತಲೇ ಇರುತ್ತದೆ. ಪೊಲೀಸರ ಕಳಕಳಿಯನ್ನು ಲೆಕ್ಕಿಸದೇ ಪೋಷಕರು ತಮ್ನ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಟ್ಟು ಅನಾಹುತ ಸೃಷ್ಠಿಕೊಂಡಿರುವ ಪ್ರಕರಣಗಳು ಕೂಡ ಘಟಿಸಿವೆ. ಆದರೂ ಎಚ್ಚೆತ್ತುಕೊಳ್ಳದ ಇಲ್ಲೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟು ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

Ad Widget . Ad Widget .

ಈ ಪ್ರಮಾದಕ್ಕಾಗಿ ಇವರಿಗೆ ಹಾಸನ ಜಿಲ್ಲೆ ಬೇಲೂರು ಸಿವಿಲ್ ಜಡ್ಜ್ ಕಿರಿಯ ಶ್ರೇಣಿ ನ್ಯಾಯಾಲಯವು ರೂ.16,000 ದಂಡವನ್ನು ವಿಧಿಸಿದೆ. ಅಲ್ಲದೇ ಒಂದು ದಿನದ ಮಟ್ಟಿಗೆ ಅಂದರೆ ಸಂಜೆ ನ್ಯಾಯಾಲಯಗಳ ಕಲಾಪ ಮುಗಿಯುವವರೆಗೂ ಸಜೆ ಅನುಭವಿಸುವ ಶಿಕ್ಷೆ ವಿಧಿಸಿದೆ. ಈ ಪ್ರಕರಣವು ಬೇಲೂರು ತಾಲೂಕು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

Ad Widget . Ad Widget .

Leave a Comment

Your email address will not be published. Required fields are marked *