Ad Widget .

ಇಂದು ಇಸ್ರೋದಿಂದ ಹವಾಮಾನ ಮುನ್ಸೂಚನಾ ಉಪಗ್ರಹ ಉಡಾವಣೆ

ಸಮಗ್ರ ನ್ಯೂಸ್: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಇನ್‌ಸ್ಯಾಟ್‌-3ಡಿಎಸ್‌ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಲಿದೆ ಎಂದು ವರದಿಯಾಗಿದೆ.

Ad Widget . Ad Widget .

ಫೆ.17ರ ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆಗೊಳ್ಳಲಿದ್ದು, 51.7 ಮೀಟರ್‌ ಎತ್ತರವಿರುವ ಜಿಎಸ್‌ಎಲ್‌ವಿ ರಾಕೆಟ್‌ ಉಪಗ್ರಹವನ್ನು ಹೊತ್ತೂಯ್ಯಲಿದೆ.

Ad Widget . Ad Widget .

ಇನ್ನು ಉಪಗ್ರಹ ಒಟ್ಟು ತೂಕ 2,274 ಕೆ.ಜಿ. ಇದರ ನಿರ್ಮಾಣಕ್ಕೆ 480 ಕೋಟಿ ರೂ. ವೆಚ್ಚವಾಗಿದ್ದು, ಕೇಂದ್ರ ಭೂವಿಜ್ಞಾನ ಇಲಾಖೆ ಸಂಪೂರ್ಣ ವೆಚ್ಚವನ್ನು ಭರಿಸಿದೆ.

ಈ ಉಪಗ್ರಹವು ಭೂಮಿಯ ಮೇಲ್ಪದರ, ಸಮುದ್ರಭಾಗಗಳ ಮೇಲೆ ನಿಗಾ, ಮಳೆ, ಪ್ರವಾಹಗಳು, ಭೂಕಂಪನಗಳ ಕುರಿತು ಉಪಗ್ರಹ ಮುನ್ಸೂಚನೆ ನೀಡಲಿದೆ.

Leave a Comment

Your email address will not be published. Required fields are marked *