Ad Widget .

ಜನರ ಮನ ಗೆದ್ದಿದ್ದ ರಾಮಾಯಣ/ ಮರುಪ್ರಸಾರದ ದಿನಾಂಕ ಘೋಷಿಸಿದ ಡಿಡಿ

ಸಮಗ್ರ ನ್ಯೂಸ್: ದೇಶದ ಜನರ ಮನ ಗೆದ್ದಿದ್ದ ರಮಾನಂದ್ ಸಾಗರ್ ಅವರ ನಿರ್ದೇಶನದ ರಾಮಾಯಣವನ್ನು ಮತ್ತೆ ಪ್ರಸಾರ ಮಾಡುವುದಾಗಿ ರಾಷ್ಟ್ರೀಯ ವಾಹಿನಿ ಡಿಡಿ ನ್ಯಾಷನಲ್ ಘೋಷಣೆ ಮಾಡಿದ್ದು, ಅದರಂತೆ ಇದೀಗ ಫೆಬ್ರವರಿ 5 ರಿಂದ ನೀವು ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುಪ್ರಸಾರವನ್ನು ಮರುದಿನ ಮಧ್ಯಾಹ್ನ 12 ಗಂಟೆಗೆ ವೀಕ್ಷಣೆ ಮಾಡಬಹುದು’ ಎಂದು ಧಾರಾವಾಹಿಯ ಪ್ರಸಾರದ ದಿನಾಂಕ ಹಾಗೂ ಸಮಯವನ್ನು ಡಿಡಿ ಪ್ರಕಟಿಸಿದೆ.

Ad Widget . Ad Widget .

ಈ ಮೆಗಾ ಸೀರಿಯಲ್‍ನಲ್ಲಿ ರಾಮನಾಗಿ ನಟಿಸಿದ್ದ ಅರುಣ್ ಗೋವಿಲ್, ಸೀತೆಯಾಗಿ ನಟಿಸಿದ್ದ ದೀಪಿಕಾ ಚಿಕಾಲಿಯಾ ಹಾಗೂ ಲಕ್ಷ್ಮಣ ಪಾತ್ರದಲ್ಲಿ ನಟಿಸಿದ್ದ ಸುನೀಲ್ ಲೆಕ್ರಿ ಅವರಿಗೆ ಜನವರಿ 22 ರಂದು ನಡೆದ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಅಧಿಕೃತ ಆಹ್ವಾನ ನೀಡಲಾಗಿತ್ತು. ಅಯೋಧ್ಯೆಗೆ ಹೋಗಿದ್ದ ಇವರನ್ನು ಸ್ಥಳೀಯ ಜನ ಖುಷಿಯಿಂದಲೇ ಸ್ವಾಗತಿಸಿದ್ದರು. ಇದೀಗ ಸೀರಿಯಲ್ ಅನ್ನು ಮರು ಪ್ರಸಾರ ಮಾಡುವುದಾಗಿ ಡಿಡಿ ನ್ಯಾಷನಲ್ ಘೋಷಣೆ ಮಾಡಿದೆ.

Ad Widget . Ad Widget .

Leave a Comment

Your email address will not be published. Required fields are marked *