January 2024

ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಜೆಸಿಐ ಭಾರತದ ವಲಯ 14ರಲ್ಲಿರುವ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 13ನೇ ಅಧ್ಯಕ್ಷರಾಗಿ ಬಲ್ಯಮಂಡೂರು ಗ್ರಾಮದ ಪೆಮ್ಮಂಡ ಮಂಜು ಬೋಪಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2023ನೇ ಸಾಲಿನ ಘಟಕ ಅಧ್ಯಕ್ಷರಾಗಿರುವ ಮುಕ್ಕಾಟಿರ ನೀತ್ ಅಯ್ಯಪ್ಪರವರ ಅಧ್ಯಕ್ಷತೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಘಟಕದ ನಿಕಟಪೂರ್ವ ಅಧ್ಯಕ್ಷ ಅಪ್ಪಂಡೆರಂಡ ಪಿ. ದಿನೇಶ್ ಅವರ ಸಮ್ಮುಖದಲ್ಲಿ ನಡೆದ ಘಟಕದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು, 2024ನೇ ಸಾಲಿಗೆ ನೂತನ ಘಟಕಾಡಳಿತ ಮಂಡಳಿ ಪದಾಧಿಕಾರಿಗಳನ್ನು ಅವಿರೋಧವಾಗಿ ಚುನಾಯಿಸಲಾಯಿತು. ಕೋಶಾಧಿಕಾರಿಯಾಗಿ ಬೊಜ್ಜಂಗಡ […]

ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ Read More »

ವನ್ಯಜೀವಿ ಅಂಗಾಂಗ ಮರಳಿಸಲು 3 ತಿಂಗಳ ಗಡುವು| ಶೀಘ್ರವೇ ಅಧಿಸೂಚನೆ: ಈಶ್ವರ ಖಂಡ್ರೆ

ಸಮಗ್ರ ನ್ಯೂಸ್: ಹುಲಿ ಉಗುರು, ಆನೆ ದಂತ, ಜಿಂಕೆಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು. ಅಕ್ರಮವ ಸಂರಕ್ಷಣಾ ಅಧಿನಿಯಮ 1972 ಮತ್ತು ಇತ್ತೀಚೆಗೆ ಅಂದರೆ 2022ರಲ್ಲಿ ಕೇಂದ್ರ ಸರ್ಕಾರ ಈ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ವಯ ಯಾವುದೇ ವನ್ಯಜೀವಿಯ ಅಂಗಾಂಗವನ್ನು ಅಕ್ರಮವಾಗಿ

ವನ್ಯಜೀವಿ ಅಂಗಾಂಗ ಮರಳಿಸಲು 3 ತಿಂಗಳ ಗಡುವು| ಶೀಘ್ರವೇ ಅಧಿಸೂಚನೆ: ಈಶ್ವರ ಖಂಡ್ರೆ Read More »

ಬಿಇಎಲ್‌ನಿಂದ ಅಪ್ರೆಂಟಿಸ್ ಹುದ್ದೆಗೆ ಕರೆ| ಜನವರಿ 10ರಂದು ನೇರ ಸಂದರ್ಶನಕ್ಕೆ ಆಹ್ವಾನ

ಸಮಗ್ರ ನ್ಯೂಸ್: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ, ಸಾರ್ವಜನಿಕ ರಂಗದ ಸಂಸ್ಥೆಯಾಗಿದ್ದು, ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ 1954ರಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಸ್ಥೆಯು ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 10ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. *ಹುದ್ದೆಗಳ ವಿವರ*ಗ್ರ್ಯಾಜುಯೆಟ್ ಅಪ್ರೆಂಟಿಸ್ 63ಟೆಕ್ನಿಷಿಯನ್(ಡಿಪ್ಲೊಮಾ)ಅಪ್ರೆಂಟಿಸ್ 10ಬಿ.ಕಾಂ ಅಪ್ರೆಂಟಿಸ್ 08 ವಿದ್ಯಾರ್ಹತೆಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗ್ರ್ಯಾಜುಯೆಟ್

ಬಿಇಎಲ್‌ನಿಂದ ಅಪ್ರೆಂಟಿಸ್ ಹುದ್ದೆಗೆ ಕರೆ| ಜನವರಿ 10ರಂದು ನೇರ ಸಂದರ್ಶನಕ್ಕೆ ಆಹ್ವಾನ Read More »

ಕೆಲಸಗಾರರು ಬೇಕಾಗಿದ್ದಾರೆ ಎಂದು ರಸ್ತೆ ಬದಿ ಬೋರ್ಡ್ ಹಿಡಿದು ನಿಂತ ಕೊಡಗಿನ ಕಾಫಿ ಬೆಳೆಗಾರ

ಸಮಗ್ರ ನ್ಯೂಸ್: ಕಾಫಿ ಕೀಳಲು ಕಾರ್ಮಿಕರಿಗೆ ಭಾರೀ ಬೇಡಿಕೆ. ಅಧಿಕ ಸಂಬಳ ನೀಡಿದರು ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಕಾಫಿ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಂತೆ ವ್ಯಕ್ತಿಯೊಬ್ಬರು ಕಾಫಿ ಕೀಳಲು ಕಾರ್ಮಿಕರಿಲ್ಲದೆ ಏನು ಮಾಡಿದ್ದಾರೆ ಗೊತ್ತಾ? ಇದು ಕೊಡಗಿನಲ್ಲಿ ಬೆಳಕಿಗೆ ಬಂದ ಘಟನೆ. ಕಾಫಿ ಬೆಳಗಾರರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದೆ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಬೋರ್ಡ್​​ ಹಿಡಿದು ನಿಂತಿದ್ದಾರೆ. ಬೋರ್ಡ್​ನಲ್ಲಿ ‘ಕೆಲಸಗಾರರು ಬೇಕು’ ಎಂದು ಬರೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ಮಹಿಳೆಯರಿಗೆ ದಿನಕ್ಕೆ

ಕೆಲಸಗಾರರು ಬೇಕಾಗಿದ್ದಾರೆ ಎಂದು ರಸ್ತೆ ಬದಿ ಬೋರ್ಡ್ ಹಿಡಿದು ನಿಂತ ಕೊಡಗಿನ ಕಾಫಿ ಬೆಳೆಗಾರ Read More »

‘ಗಾಂಧಿ ಸ್ಮಾರಕ ಉದ್ಯಾನವನ’ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಭೋಸರಾಜು

ಸಮಗ್ರ ನ್ಯೂಸ್: ಮಡಿಕೇರಿಯ ಗಾಂಧಿ ಮಂಟಪದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರಪಿತ ಮಹಾತ್ಮ ‘ಗಾಂಧೀಜಿಯವರ ಸ್ಮಾರಕ ಉದ್ಯಾನವನ’ ಕಾಮಗಾರಿಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ವೀಕ್ಷಿಸಿದರು. ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಆದಷ್ಟು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದ್ದು, ವಿಧಾನ ಪರಿಷತ್ ಅನುದಾನದಿಂದಲೂ ಸಹ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ

‘ಗಾಂಧಿ ಸ್ಮಾರಕ ಉದ್ಯಾನವನ’ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಭೋಸರಾಜು Read More »

ಮದುವೆ ನಡೆಯುತ್ತಿರುವಾಗಲೇ ಮಾಜಿ ಪ್ರೇಯಸಿಯ ಹೈಡ್ರಾಮ| ಬೇರೊಬ್ಬಳಿಗೆ ತಾಳಿ ಕಟ್ಟಿ ವರ ಎಸ್ಕೇಪ್

ಸಮಗ್ರ ನ್ಯೂಸ್: ತನ್ನಗೆ ಮೋಸ ಮಾಡಿ ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ಪೊಲೀಸರೊಂದಿಗೆ ಎಂಟ್ರಿಕೊಟ್ಟ ಮಾಜಿ ಪ್ರೇಯಸಿ ಜಗಳವಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಬೀರಿ ಬಳಿ ನಡೆದಿದೆ. ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ಹೈಡ್ರಾಮ ನಡೆಸಿದ್ದಾಳೆ. ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ

ಮದುವೆ ನಡೆಯುತ್ತಿರುವಾಗಲೇ ಮಾಜಿ ಪ್ರೇಯಸಿಯ ಹೈಡ್ರಾಮ| ಬೇರೊಬ್ಬಳಿಗೆ ತಾಳಿ ಕಟ್ಟಿ ವರ ಎಸ್ಕೇಪ್ Read More »

ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ/ ಚುನಾವಣೆ ಬಹಿಷ್ಕರಿಸಿದ ವಿಪಕ್ಷಗಳು

ಸಮಗ್ರ ನ್ಯೂಸ್: ಬಾಂಗ್ಲಾದೇಶದಲ್ಲಿ ಜ. 7ರಂದು ಸಾರ್ವತ್ರಿಕ ಚುನಾವಣೆಗೆ ನಡೆಯಲಿದ್ದು, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಉಸ್ತುವಾರಿ ಸರ್ಕಾರದ ನೇತೃತ್ವದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಇಲ್ಲಿನ ವಿರೋಧ ಪಕ್ಷಗಳಾದ ಬಾಂಗ್ಲದೇಶ ರಾಷ್ಟ್ರೀಯ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಆಗ್ರಹವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿವೆ. ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಹಾಲಿ ಪ್ರಧಾನಿ ಶೇಖ್ ಹಸೀನಾ ಗೆಲುವುದು ಸುಲಭವಾಗಿದೆ. ಚುನಾವಣಾ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 750,000 ಪೆÇಲೀಸರು, ಅರೆಸೇನಾಪಡೆ ಮತ್ತು

ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ/ ಚುನಾವಣೆ ಬಹಿಷ್ಕರಿಸಿದ ವಿಪಕ್ಷಗಳು Read More »

ರಾಮ ಮಂದಿರ ಉದ್ಘಾಟನೆ/ ಬಾಬ್ರಿ ಮಸೀದಿ ಪರ ವಾದಿಯಾಗಿದ್ದ ಇನ್ಸಾಲ್ ಅನ್ಸಾರಿಗೂ ಆಹ್ವಾನ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಬ್ರಿ ಮಸೀದಿ ಪರ ವಾದಿಯಾಗಿದ್ದ ಇನ್ಸಾಲ್ ಅನ್ಸಾರಿಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನಿಂದ ಆಹ್ವಾನ ನೀಡಲಾಗಿದೆ. ಇನ್ಸಾಲ್ ಅನ್ಸಾರಿ ಅವರು ಬಾಬ್ರಿ ಮಸೀದಿಯ ಪ್ರಮುಖ ಬೆಂಬಲಿಗರಾಗಿದ್ದರು. ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುನರಾಭಿವೃದ್ಧಿ ಮಾಡಿದ ರೈಲ್ವೆ ನಿಲ್ದಾಣ ಮತ್ತು ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಅಲ್ಲದೇ ಉತ್ತರ ಪ್ರದೇಶದಲ್ಲಿ ಇತರ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದರು. ಈ ಸಂದರ್ಭ

ರಾಮ ಮಂದಿರ ಉದ್ಘಾಟನೆ/ ಬಾಬ್ರಿ ಮಸೀದಿ ಪರ ವಾದಿಯಾಗಿದ್ದ ಇನ್ಸಾಲ್ ಅನ್ಸಾರಿಗೂ ಆಹ್ವಾನ Read More »

ಹಂದಿ ಬೇಟೆಗೆ ಬಳಸುವ ಸ್ಫೋಟಕ ಉಂಡೆಯನ್ನು ಬಾಲ್ ಎಂದು ತಿಳಿದು ಆಟವಾಡಿದ ಮಕ್ಕಳು….!

ಸಮಗ್ರ ನ್ಯೂಸ್: ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆ ಮಕ್ಕಳ ಕೈಗೆ ಸಿಕ್ಕಿ ಅದರಿಂದ ದೊಡ್ಡ ದುರಂತವೇ ತಪ್ಪಿ ಹೋಗಿದೆ. ಹೌದು ತುಮಕೂರು ಜಿಲ್ಲೆಯ ಚಿಕ್ಕನಾಯನಕನಹಳ್ಳಿ ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆಯನ್ನು ಶಾಲೆಯೊಂದರ ಪಕ್ಕದಲ್ಲಿ ಎಸೆಯಲಾಗಿತ್ತು. ಇದನ್ನು ಬಾಲ್ ಅಂತ ಭಾವಿಸಿದ್ದ ಬಾಲಕನೊಬ್ಬ ಎತ್ತಿಕೊಂಡು ಶಾಲೆಯತ್ತ ತೆರಳಿದ್ದ. ಬಳಿಕ ಆತ ಅದನ್ನು ಶ್ರೀನಿವಾಸ್ ಎಂಬ ಹುಡುಗನಿಗೆ ನೀಡಿದ್ದ. ಆ ಸ್ಫೋಟಕ ಉಂಡೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದ ಶ್ರೀನಿವಾಸ್ ತಂದೆಗೆ ನೀಡಿದ್ದ. ಇದು

ಹಂದಿ ಬೇಟೆಗೆ ಬಳಸುವ ಸ್ಫೋಟಕ ಉಂಡೆಯನ್ನು ಬಾಲ್ ಎಂದು ತಿಳಿದು ಆಟವಾಡಿದ ಮಕ್ಕಳು….! Read More »

ಒಂದು ದೇಶ ಒಂದು ಚುನಾವಣೆ/ ಸಾರ್ವಜನಿಕರ ಸಲಹೆ ಆಹ್ವಾನ

ಸಮಗ್ರ ನ್ಯೂಸ್: ಒಂದು ದೇಶ ಒಂದು ಚುನಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ಮೂರು ಕಾನೂನುಗಳನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಲಹೆ ನೀಡುವಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ನೇಮಕವಾದ ಸಮಿತಿ ಜನರಲ್ಲಿ ಕೇಳಿಕೊಂಡಿದೆ. ಸಾರ್ವಜನಿಕರು ಜ.15 ರ ಒಳಗಡೆ ಸಲಹೆಯನ್ನು ಲಿಖಿತವಾಗಿ ಬರೆದು ಪೋಸ್ಟ್ ಮಾಡಬಹುದು ಅಥವಾ [email protected] ಗೆ ಇಮೇಲ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು. ಈ ಕುರಿತು ಜಾಹಿರಾತು ನೀಡಲಾಗಿದ್ದು, ಜನರು ನೀಡಿದ ಎಲ್ಲಾ ಸಲಹೆಯನ್ನು ಸಮಿತಿಯ ಮುಂದೆ ಇಡಲಾಗುತ್ತದೆ ಎಂದು

ಒಂದು ದೇಶ ಒಂದು ಚುನಾವಣೆ/ ಸಾರ್ವಜನಿಕರ ಸಲಹೆ ಆಹ್ವಾನ Read More »