January 2024

ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ :University of Agriculture Sciences Dharwad ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಫೆಸಿಲಿಟೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬಾಗಲಕೋಟೆ & ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 19, 2024 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಶೈಕ್ಷಣಿಕ ಅರ್ಹತೆ:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ […]

ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಹಾಕಿ Read More »

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯ| ರಾಜ್ಯ ಸರ್ಕಾರದಿಂದ ಸುಗ್ರಿವಾಜ್ಞೆ

ಸಮಗ್ರ ನ್ಯೂಸ್: ರಾಜ್ಯದ ಅಂಗಡಿ ಮುಂಗಟ್ಟು ಮತ್ತು ವ್ಯಾಪಾರ ಮಳಿಗೆಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ (Kannada) ಬಳಕೆ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜ. 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯ| ರಾಜ್ಯ ಸರ್ಕಾರದಿಂದ ಸುಗ್ರಿವಾಜ್ಞೆ Read More »

ಪುತ್ತೂರು:ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವಿನ ಕನ್ನಡ್ಕದಲ್ಲಿ ಜ. 7ರಂದು ನಡೆದಿದೆ. ಪಡುವನ್ನೂರು ಗ್ರಾಮದ ಕನ್ನಡ ಕಜೆಮೂಲೆ ನಿವಾಸಿ ಚಂದ್ರಶೇಖರ್ ಗೌಡರ ಮಗಳು ದೀಕ್ಷಾ (16) ಇಂದು(ಜ.7) ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿದ್ದ ತಂದೆ-ತಾಯಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಳು. ಮನೆಯ ರೂಮಲ್ಲಿ ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುತ್ತೂರು ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು

ಪುತ್ತೂರು:ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ನಮ್ಮ ಮೆಟ್ರೋ ಹಳಿಯಲ್ಲಿ ಬೆಕ್ಕು ಪ್ರತ್ಯಕ್ಷ!

ಸಮಗ್ರ ನ್ಯೂಸ್: ನಮ್ಮ ಮೆಟ್ರೋ ದಿನೇ ದಿನೇ ಒಂದಿಲ್ಲೊಂದು ಘಟನೆಯಲ್ಲಿ ಸುದ್ದಿಯಾಗುತ್ತಲೇ ಇದೆ.ಇದೀಗ ಜೆ.ಪಿ.ನಗರ ಮೆಟ್ರೋ ಹಳಿಗೆ ಬೆಕ್ಕು ನುಗ್ಗಿದ ವಿಚಿತ್ರ ಘಟನೆ ನಡೆದಿದೆ. ನಮ್ಮ ಮೆಟ್ರೋ ಹಳಿಯ ಮೇಲೆ ಬೆಕ್ಕು ಕಾಣಿಸಿಕೊಂಡ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಟ್ರ್ಯಾಕ್ನಲ್ಲಿ ಬೆಕ್ಕು ಕಾಣಿಸಿಕೊಂಡಿರುವ ಕುರಿತು ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಮ್ಮ ಮೆಟ್ರೋ ಸಿಬ್ಬಂದಿ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನ ಓಡಿಸಿ ಅಪಾಯವನ್ನು ತಡೆಗಟ್ಟಿದ್ದಾರೆ. ಹೀಗೆ ಹಲವು ಘಟನೆಗಳು ಮೆಟ್ರೋದಲ್ಲಿ ನಡೆಯುತ್ತಲೆ

ನಮ್ಮ ಮೆಟ್ರೋ ಹಳಿಯಲ್ಲಿ ಬೆಕ್ಕು ಪ್ರತ್ಯಕ್ಷ! Read More »

10 ರೂ. ನಾಣ್ಯದ ಗೊಂದಲ/ ಬಸ್ ಗಳಲ್ಲಿ ಕಡ್ಡಾಯ ಸ್ವೀಕಾರಕ್ಕೆ ಸಾರಿಗೆ ಇಲಾಖೆ ಸೂಚನೆ

ಸಮಗ್ರ ನ್ಯೂಸ್: ಕೆಎಸ್‌ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ನಿಗಮಕ್ಕೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲೂ 10 ರೂ. ನಾಣ್ಯ ಪಡೆಯುವಂತೆ ಗಳಲ್ಲೂ 10 ರೂ. ನಾಣ್ಯ ಪಡೆಯುವಂತೆ ಆದೇಶಿಸಲಾಗಿದೆ ಇಷ್ಟು ದಿನ 10 ರೂ. ನಾಣ್ಯ ಕೊಟ್ಟರೆ ಕಂಡಕ್ಟರ್‌ಗಳು ತೆಗೆದುಕೊಳ್ಳದೇ, ಇದು ಹೋಗಲ್ಲ ನೋಟು ಕೊಡಿ ಎಂದು ಹೇಳುತ್ತಿದ್ದರು. ಹೀಗಾಗಿ 10 ರೂಪಾಯಿ ನಾಣ್ಯದ ಬಗ್ಗೆ ನಿರ್ಲಕ್ಷ್ಯವಹಿಸಿದ ಹಿನ್ನೆಲೆಯಲ್ಲಿ ತಿಳುವಳಿಕೆ ಪತ್ರದ

10 ರೂ. ನಾಣ್ಯದ ಗೊಂದಲ/ ಬಸ್ ಗಳಲ್ಲಿ ಕಡ್ಡಾಯ ಸ್ವೀಕಾರಕ್ಕೆ ಸಾರಿಗೆ ಇಲಾಖೆ ಸೂಚನೆ Read More »

ರಾಮ ಮಂದಿರ ಉದ್ಘಾಟನೆ/ ಡಿಕೆಶಿಗೆ ಇಲ್ಲ ಆಹ್ವಾನ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಮುಖ್ಯಮಂತ್ರಿಗಳನ್ನ ಸಹ ಕರೆದಿಲ್ಲ. ನಾನು ಶಿವ ಭಕ್ತ, ಎಲ್ಲ ದೇವರುಗಳು ನನ್ನ ಹೃದಯದಲ್ಲಿದೆ. ನಮ್ಮ ಅಕ್ಕಿಯನ್ನ ಮಂತ್ರಾಕ್ಷತೆಗೆ ಉಪಯೋಗಿಸಿಕೊಳ್ತಿದ್ದಾರೆ, ಅನ್ನಭಾಗ್ಯ ಯೋಜನೆ ಅಕ್ಕಿ ಬಳಸ್ತಿದ್ದಾರೆ ಎಂದರು. ಅರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆ. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆ ಆಗುತ್ತಿದೆ. ಇದು

ರಾಮ ಮಂದಿರ ಉದ್ಘಾಟನೆ/ ಡಿಕೆಶಿಗೆ ಇಲ್ಲ ಆಹ್ವಾನ Read More »

ಪ್ರಾಮಾಣಿಕತೆ ಮೆರೆದ ಪುತ್ತೂರು ಶಾಸಕರ ಸಾರಥಿ| ಕಳೆದುಕೊಂಡ ಐಫೋನ್ ಹಿಂತಿರುಗಿಸಿ ಪ್ರಾಮಾಣಿಕತೆಗೆ ಪಾತ್ರರಾದರು

ಸಮಗ್ರ ನ್ಯೂಸ್: ಪುತ್ತೂರು ಶಾಸಕರ ಕಚೇರಿಗೆ ಆಗಮಿಸಿದ ಆಶಿಕ್ ಎಂಬವರು ಹಿಂದಿರುಗುವ ಸಮಯ ಕಚೇರಿ ಹೊರಾಂಗಣದಲ್ಲಿ ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಫೋನನ್ನು ಶಾಸಕರ ಕಾರು ಚಾಲಕ ಜಯಾನಂದ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಆಶಿಕ್ ಅವರು ಶಾಸಕರ ಜೊತೆ ಮಾತನಾಡಿ ಹಿಂದಿರುಗುವ ವೇಳೆ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ಮೊಬೈಲ್ ಹುಡುಕಾಟ ಮಾಡಿದಾಗ, ಶಾಸಕರ ಕಾರು ಚಾಲಕ ಜಯಾನಂದ ಗೌಡ ಅವರು ಕಚೇರಿ ಆವರಣದಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಗಮನಿಸಿ ಆಶೀಕ್ ಅವರಿಗೆ ನೀಡಿದ್ದಾರೆ.

ಪ್ರಾಮಾಣಿಕತೆ ಮೆರೆದ ಪುತ್ತೂರು ಶಾಸಕರ ಸಾರಥಿ| ಕಳೆದುಕೊಂಡ ಐಫೋನ್ ಹಿಂತಿರುಗಿಸಿ ಪ್ರಾಮಾಣಿಕತೆಗೆ ಪಾತ್ರರಾದರು Read More »

ಯುವನಿಧಿ ಜತೆ ಜಾಬ್ ಗ್ಯಾರಂಟಿ| ನಿರುದ್ಯೋಗ ಸಮಸ್ಯೆ ನೀಗಿಸಲು ತಜ್ಞರ ಸ್ಕಿಲ್ ಕೌನ್ಸಿಲ್ ರಚನೆ

ಸಮಗ್ರ ನ್ಯೂಸ್: ನಾವು ‘ಯುವನಿಧಿ’ ನಿರುದ್ಯೋಗ ಭತ್ಯೆ ನೀಡುವುದು ಮಾತ್ರವಲ್ಲ, ಯುವಕರಿಗೆ ಅಗತ್ಯ ಕೌಶಲ ಕೊಡಿಸಿ ಉದ್ಯೋಗವನ್ನೂ ನೀಡಲು ಸಂಕಲ್ಪಿಸಿದ್ದೇವೆ. ಈ ಸಂಬಂಧ ಮಹತ್ವದ ಕಾರ್ಯಕ್ರಮ ರೂಪಿಸಿದ್ದು, ನೀತಿಯನ್ನೂ ತರುತ್ತಿದ್ದೇವೆ ಎಂದು ಕೌಶಲಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸರ್ಕಾರದ ಮಹತ್ವಾಕಾಂಕ್ಷೆಯನ್ನು ಹೊರಗೆಡಹಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಜ. 6ರಂದು ಆಯೋಜಿಸಿದ್ದ ಸಂವಾದದಲ್ಲಿ ಈ ವಿಚಾರ ತಿಳಿಸಿದರು. ಯುವನಿಧಿ ಯೋಜನೆಗೆ ಸ್ವಾಮಿ ವಿವೇಕಾನಂದರ ಜಯಂತಿ ದಿನವಾದ ಜ.12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುತ್ತಿದೆ. ಸರ್ಕಾರದ ಉದ್ದೇಶ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ

ಯುವನಿಧಿ ಜತೆ ಜಾಬ್ ಗ್ಯಾರಂಟಿ| ನಿರುದ್ಯೋಗ ಸಮಸ್ಯೆ ನೀಗಿಸಲು ತಜ್ಞರ ಸ್ಕಿಲ್ ಕೌನ್ಸಿಲ್ ರಚನೆ Read More »

ಸೋಮವಾರಪೇಟೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ತಡೆಗೋಡೆಗೆ ಡಿಕ್ಕಿ

ಸಮಗ್ರ ನ್ಯೂಸ್:ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ನಿಲ್ದಾಣದ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ. ಡಿಕ್ಕಿಯಾದ ಪರಿಣಾಮ ತಡೆಗೋಡಯ ಒಂದು ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಇದರ ಬದಿಯಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳಿಗೂ ಕೂಡ ಹಾನಿ ಉಂಟಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಬಸ್ಸಿನ ಮುಂಭಾಗ ಜಖಂ ಗೊಂಡಿದೆ.

ಸೋಮವಾರಪೇಟೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ತಡೆಗೋಡೆಗೆ ಡಿಕ್ಕಿ Read More »

ಜೊಲ್ಲುಗುಳ್ಳೆಗಳು

ಸಮಗ್ರ ನ್ಯೂಸ್: ಕ್ಯಾನ್ಸರ್ ಅಲ್ಲದ ಜೊಲ್ಲುರಸದಿಂದ ತುಂಬಿರುವ, ಹೆಚ್ಚಾಗಿ ಕೆಳಗಿನ ತುಟಿಗಳ ಒಳಭಾಗದಲ್ಲಿ ಕಂಡು ಬರುವ ಸಣ್ಣಗುಳ್ಳೆಗಳನ್ನು ಜೊಲ್ಲು ಗುಳ್ಳೆಗಳು ಅಥವಾ ಜೊಲ್ಲು ಚೀಲಗಳು ಎಂದು ಕರೆಯುತ್ತಾರೆ. ಅತೀ ಸುಲಭವಾಗಿ ಗುರುತಿಸಬಹುದಾದ, ಯಾವುದೇ ವಿಶೇಷ ಪರೀಕ್ಷೆಯ ಅಗತ್ಯವಿಲ್ಲದ ಹಾಗೂ ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಖಾಯಿಲೆ ಇದಾಗಿರುತ್ತದೆ. ಹೆಚ್ಚಾಗಿ ಮಕ್ಕಳಲ್ಲಿ ಈ ಜೊಲ್ಲು ಚೀಲಗಳು ಕಂಡುಬರುತ್ತದೆ. ಮೇಲಿನ ತುಟಿಯಲ್ಲಿ ಕಂಡುಬರುವ ಸಾಧ್ಯತೆ ಇಲ್ಲವೇ ಇಲ್ಲ. ನೂರರಲ್ಲಿ 99 ಶೇಕಡಾ ಕೆಳಗಿನ ತುಟಿಯಲ್ಲಿಯೇ ಕಂಡುಬರುತ್ತದೆ. ವರ್ಷವೊಂದರಲ್ಲಿ ಭಾರತ ದೇಶವೊಂದರಲ್ಲಿಯೇ ಸುಮಾರು

ಜೊಲ್ಲುಗುಳ್ಳೆಗಳು Read More »