January 2024

ಚಿಕ್ಕಮಗಳೂರು: ಬೀಟಮ್ಮ ಗ್ಯಾಂಗ್ ಓಡಿಸಲು ಅಖಾಡಕ್ಕಿಳಿದ ಅಭಿಮನ್ಯು ಆ್ಯಂಡ್ ಟೀಮ್

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆ ಆವರಣದಲ್ಲಿ ಬೀಟಮ್ಮ ಗ್ಯಾಂಗ್ ನ 30 ಕಾಡಾನೆಗಳು ಬೀಡು ಬಿಟ್ಟಿದ್ದವು. ಇದೀಗ ಬೀಟಮ್ಮ ಗ್ಯಾಂಗ್ ಉಪಟಳ ಹೆಚ್ಚಾಗಿದ್ದು ಇದಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡ ಅಖಾಡಕ್ಕಿಳಿದಿದೆ. ಈ ಆನೆಗಳನ್ನು ಜ.29 ರಂದು ಶಾಲಾ ಆವರಣದಿಂದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಲಾಗಿದೆ, ಆದರೆ ಅದು ತನ್ನ ಉಪಟಳವನ್ನು ಮುಂದುವರಿಸಿದೆ. ಇದೀಗ ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗ್ಯಾಂಗ್ ಕಾರ್ಯಚರಣೆ ನಡೆಯಲಿದೆ, […]

ಚಿಕ್ಕಮಗಳೂರು: ಬೀಟಮ್ಮ ಗ್ಯಾಂಗ್ ಓಡಿಸಲು ಅಖಾಡಕ್ಕಿಳಿದ ಅಭಿಮನ್ಯು ಆ್ಯಂಡ್ ಟೀಮ್ Read More »

ಮಂಗಳೂರು: ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಸ್ಥಾನ ಪಡೆದ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಪ್ರತಾಪ್ ಅಭಿಮಾನಿ

ಸಮಗ್ರ ನ್ಯೂಸ್: ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೋನ್ ಪ್ರತಾಪ್ ವಿನ್ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಭಾವಿ ಸಿದ್ದರು. ಆದರೆ, ರನ್ನರ್ ಅಪ್ ಆಗಿದ್ದು, ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನಿಯೂರ್ವ ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂಟ್ರ

ಮಂಗಳೂರು: ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಸ್ಥಾನ ಪಡೆದ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಪ್ರತಾಪ್ ಅಭಿಮಾನಿ Read More »

ತಂಗಿಯನ್ನು ಕಾಪಾಡಲು ಬಾವಿಗೆ ಹಾರಿದ ಅಣ್ಣ| ಅಣ್ಣ ತಂಗಿ ಇಬ್ಬರೂ ಸಾವು

ಸಮಗ್ರ ನ್ಯೂಸ್: ಕಾಲೇಜಿಗೆ ಹೋಗು ಎಂದು ಅಣ್ಣ ಬೈದು ಬುದ್ದಿ ಹೇಳಿದ್ದಕ್ಕೆ ಮನ ನೊಂದ ತಂಗಿ ಓಡಿ ಹೋಗಿ ಬಾವಿಗೆ ಜಿಗಿದಿದ್ದು ತಂಗಿಯನ್ನು ಕಾಪಾಡಲು ಅಣ್ಣ ಕೂಡ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ. ತಂಗಿ ನಂದಿನಿ(18), ಅಣ್ಣ ಸಂದೀಪ್(21) ಮೃತ ದುರ್ದೈವಿಗಳು. ನಂದಿನಿ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಸಂದೀಪ್ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದು, ಅಣ್ಣ ಬೈದ ಎಂದು ಕೋಪಗೊಂಡು

ತಂಗಿಯನ್ನು ಕಾಪಾಡಲು ಬಾವಿಗೆ ಹಾರಿದ ಅಣ್ಣ| ಅಣ್ಣ ತಂಗಿ ಇಬ್ಬರೂ ಸಾವು Read More »

Work From Home Job ಹುಡುಕುತ್ತಾ ಇದ್ದೀರಾ? ಇಲ್ಲಿದೆ ನೋಡಿ ನೂರಾರು ಆಪ್ಷನ್ ಗಳು

ಇಂದಿನ ದಿನಗಳಲ್ಲಿ ವಿದ್ಯಾವಂತ ವೃತ್ತಿಪರರಿಂದ ಹಿಡಿದು 12ನೇ ತರಗತಿ ಪಾಸಾದ ವಿದ್ಯಾರ್ಥಿಗಳವರೆಗೆ ಎಲ್ಲರೂ ಪಾರ್ಟ್‌ಟೈಮ್‌ ಉದ್ಯೋಗಗಳನ್ನು ಹುಡುಕುತ್ತಿದ್ದಾರೆ. ಗೃಹಿಣಿಯರೂ ಆರ್ಥಿಕವಾಗಿ ಸ್ವತಂತ್ರವಾಗಿರಲು ಬಯಸುತ್ತಾರೆ. ಇಂದಿನ ದಿನಗಳಲ್ಲಿ ವಿದ್ಯಾವಂತ ವೃತ್ತಿಪರರಿಂದ ಹಿಡಿದು 12ನೇ ತರಗತಿ ಪಾಸಾದ ವಿದ್ಯಾರ್ಥಿಗಳವರೆಗೆ ಎಲ್ಲರೂ ಪಾರ್ಟ್‌ಟೈಮ್‌ ಉದ್ಯೋಗಗಳನ್ನು ಹುಡುಕುತ್ತಿದ್ದಾರೆ. ಗೃಹಿಣಿಯರೂ ಆರ್ಥಿಕವಾಗಿ ಸ್ವತಂತ್ರವಾಗಿರಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ.. ಈ ಜನರು ಯಾವಾಗಲೂ ಪಾರ್ಟ್ ಟೈಮ್ ಉದ್ಯೋಗಗಳನ್ನು ಹುಡುಕುತ್ತಿರುತ್ತಾರೆ. ಬಿಡುವಿನ ವೇಳೆಯನ್ನು ಸರಿಯಾಗಿ ಬಳಸಿಕೊಂಡು ನಾಲ್ಕು ಪೈಸೆ ಗಳಿಸುವ ಆಸೆಯೇ ಇದಕ್ಕೆ ಕಾರಣ. ಇಂದಿನ ದಿನಗಳಲ್ಲಿಯೂ

Work From Home Job ಹುಡುಕುತ್ತಾ ಇದ್ದೀರಾ? ಇಲ್ಲಿದೆ ನೋಡಿ ನೂರಾರು ಆಪ್ಷನ್ ಗಳು Read More »

ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ ಪ್ರಕರಣ| ದ.ಕ ಜಿಲ್ಲೆಯ ಎಲ್ಲಾ ಸುಡುಮದ್ದು ಘಟಕಗಳ ತಾತ್ಕಾಲಿಕ ಬಂದ್ ಗೆ ಡಿಸಿ ಆದೇಶ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಪಟಾಕಿ ಘಟಕದಲ್ಲಿ ನಡೆದ ಸ್ಪೋಟದಿಂದ ಮೂವರ ಸಾವು ಘಟನೆ ನಡೆದ ಕೂಡಲೇ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಡುಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ದ.ಕ ಜಿಲ್ಲಾಧಿಕಾರಿ(ಪ್ರಭಾರ) ಡಾ.ಆನಂದ ಕೆ. ಆದೇಶ ಮಾಡಿದ್ದಾರೆ. ದ‌‌‌.ಕ ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ನಿರ್ಬಂಧಿಸಿ ಅಮಾನತಿನಲ್ಲಿಡಲು ಆದೇಶ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ, ಸರ್ಕಾರದ ಮಾರ್ಗಸೂಚಿ ಪಾಲನೆಯ ಮರುಪರಿಶೀಲನೆಗಾಗಿ ಪಟಾಕಿ ತಯಾರಿಕೆ, ಮಾರಾಟ ಘಟಕಗಳ ಮರುಪರಿಶೀಲನೆಗೆ ಜಿಲ್ಲಾ

ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ ಪ್ರಕರಣ| ದ.ಕ ಜಿಲ್ಲೆಯ ಎಲ್ಲಾ ಸುಡುಮದ್ದು ಘಟಕಗಳ ತಾತ್ಕಾಲಿಕ ಬಂದ್ ಗೆ ಡಿಸಿ ಆದೇಶ Read More »

ವಿಜಯಪುರ: ಶಾಸಕ ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್ ಆದೇಶಕ್ಕೆ ತಡೆಯಾಜ್ಞೆ| ಸತ್ಯದ ಗೆಲುವು ಎಂದ ಬಿಜೆಪಿ ಪೈರ್ ಬ್ರ್ಯಾಂಡ್

ಸಮಗ್ರ ನ್ಯೂಸ್: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್ ಮಾಡಲು ಸರ್ಕಾರ ನೀಡಿದ್ದ ಆದೇಶಕ್ಕೆ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಫೈರ್ ಬ್ರ್ಯಾಂಡ್​, ಕಾಂಗ್ರೆಸ್ ಸರ್ಕಾರ ನಮ್ಮ ಸಿದ್ದಸಿರಿ ಸಕ್ಕರೆ ಹಾಗು ಎಥನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗು ಮುಚ್ಚುವ ಷಡ್ಯಂತ್ರಕ್ಕೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ನೀಡಿದೆ. ಇದು “ಸತ್ಯದ ಗೆಲುವು” ಎಂದು ಬರೆದುಕೊಂಡಿದ್ದಾರೆ. ಏನಿದು ಪ್ರಕರಣ?ಕೆಲ ದಿನಗಳ

ವಿಜಯಪುರ: ಶಾಸಕ ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್ ಆದೇಶಕ್ಕೆ ತಡೆಯಾಜ್ಞೆ| ಸತ್ಯದ ಗೆಲುವು ಎಂದ ಬಿಜೆಪಿ ಪೈರ್ ಬ್ರ್ಯಾಂಡ್ Read More »

ಫೋನ್ ಕಳೆದು ಹೋದ್ರೂ ಇನ್ಮುಂದೆ ಈಸಿಯಾಗಿ ಸರ್ಚ್ ಮಾಡ್ಬೋದು, ಇಲ್ಲಿದೆ ನ್ಯೂ ಅಪ್ಡೇಟ್!

ಸಮಗ್ರ ನ್ಯೂಸ್: ಆಂಡ್ರಾಯ್ಡ್ ಮೊಬೈಲ್ (ANDROID MOBILE) ಬಳಕೆದಾರರಿಗಿಂತ ಐಫೋನ್ (I-Phone) ಬಳಕೆದಾರರು ಹೆಚ್ಚಿನ ಭದ್ರತೆಯನ್ನು ಪಡೆಯುತ್ತಾರೆ. ಐಫೋನ್ ಅನ್ನು ಬಹುಪಾಲು ಸುರಕ್ಷಿತಗೊಳಿಸಬಹುದು, ಆದರೆ ಅನಧಿಕೃತ ಪ್ರವೇಶವನ್ನು ತಡೆಯುವುದು ಕೆಲವು ಸಂದರ್ಭಗಳಲ್ಲಿ ಕಷ್ಟಕರವಾಗಿರುತ್ತದೆ. ಸಾಮಾನ್ಯವಾಗಿ, ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನವೀನ ವೈಶಿಷ್ಟ್ಯಗಳನ್ನು ಒದಗಿಸುವಲ್ಲಿ Apple ಯಾವಾಗಲೂ ಮುಂಚೂಣಿಯಲ್ಲಿದೆ. ಇತ್ತೀಚೆಗೆ, ಹೊಸ ಭದ್ರತಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಅದು ಮತ್ತೊಮ್ಮೆ ಸಾಬೀತಾಗಿದೆ. ಆಪಲ್ (Apple) ಇತ್ತೀಚೆಗೆ ಐಫೋನ್‌ಗಳಿಗಾಗಿ “ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್” ( Stolen

ಫೋನ್ ಕಳೆದು ಹೋದ್ರೂ ಇನ್ಮುಂದೆ ಈಸಿಯಾಗಿ ಸರ್ಚ್ ಮಾಡ್ಬೋದು, ಇಲ್ಲಿದೆ ನ್ಯೂ ಅಪ್ಡೇಟ್! Read More »

ಫೆ.1ರಿಂದ ಕುಮಾರ ಪರ್ವತ ಚಾರಣ ನಿಷೇಧ| ಮುಂದಿನ ಋತುವಿನಿಂದ ಆನ್ ಲೈನ್ ಬುಕ್ಕಿಂಗ್ ಗೆ ಮಾತ್ರ ಅವಕಾಶ!?

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣವನ್ನು ಫೆ. 1ರಿಂದ ನಿಷೇಧಿಸಲಾಗಿದೆ. ಅಲ್ಲದೇ ಚಾರಣಿಗರ ದಂಡು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮುಂದಿನ ಋತುವಿನಿಂದ ಆನ್ ಲೈನ್ ಬುಕ್ಕಿಂಗ್ ಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ. ಪ್ರಸ್ತುತ ಜಿಲ್ಲೆಯಾದ್ಯಂತ ಬಿರುಬಿಸಿಲಿನ ವಾತಾವರಣ ಇರುವುದು ಮತ್ತು ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಫೆ. 1ರಿಂದ ಅಕ್ಟೋಬರ್‌ ತನಕ ಅಥವಾ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇ ಧಿಸಲಾಗಿದೆ ಎಂದು

ಫೆ.1ರಿಂದ ಕುಮಾರ ಪರ್ವತ ಚಾರಣ ನಿಷೇಧ| ಮುಂದಿನ ಋತುವಿನಿಂದ ಆನ್ ಲೈನ್ ಬುಕ್ಕಿಂಗ್ ಗೆ ಮಾತ್ರ ಅವಕಾಶ!? Read More »

ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಪುನರಾಯ್ಕೆ..!?

ಸಮಗ್ರ ನ್ಯೂಸ್: ದ.ಕ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಮಂಡಲವಾರು ನೇಮಕ ಪ್ರಕ್ರಿಯೆಗಳು ನಡೆಯುತಿದೆ. ಈ ನಡುವೆ ಸುಳ್ಯ ಮಂಡಲ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಅವರನ್ನು ಕೋರ್ ಕಮಿಟಿ ಆಯ್ಕೆ ಮಾಡಿದ್ದು ಘೋಷಣೆಯ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿ ಬೆಳ್ಳಾರೆ ಮೂಲದ ಯತೀಶ್ ಆರ್ವಾರ್ ಅವರನ್ನು ಆಯ್ಕೆ ಮಾಡಲಾಗಿದೆ.ವಕೀಲ ಮತ್ತು ಎಪಿಎಂಸಿ

ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಪುನರಾಯ್ಕೆ..!? Read More »

ಅಂಬೇಡ್ಕರ್​ ನಾಮಫಲಕ ವಿಚಾರ| 2 ಕೋಮುಗಳ ನಡುವೆ ಗಲಾಟೆ…!

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್​ ನಾಮಫಲಕ ವಿಚಾರವಾಗಿ 2 ಕೋಮುಗಳ ನಡುವೆ ಗಲಾಟೆ ನಡೆದಿದೆ. ಮನೆಗಳಿಗೆ ಕಲ್ಲು ತೂರಾಟ ನಡೆಸಿ, ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ್ದಾರೆ. ಕೆಲ ಕಿಡಿಗೇಡಿಗಳಿಂದ ಹಲ್ಲರೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಂಬೇಡ್ಕರ್​ ನಾಮಫಲಕ ವಿಚಾರ| 2 ಕೋಮುಗಳ ನಡುವೆ ಗಲಾಟೆ…! Read More »