ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆ ಆವರಣದಲ್ಲಿ ಬೀಟಮ್ಮ ಗ್ಯಾಂಗ್ ನ 30 ಕಾಡಾನೆಗಳು ಬೀಡು ಬಿಟ್ಟಿದ್ದವು. ಇದೀಗ ಬೀಟಮ್ಮ ಗ್ಯಾಂಗ್ ಉಪಟಳ ಹೆಚ್ಚಾಗಿದ್ದು ಇದಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡ ಅಖಾಡಕ್ಕಿಳಿದಿದೆ.
ಈ ಆನೆಗಳನ್ನು ಜ.29 ರಂದು ಶಾಲಾ ಆವರಣದಿಂದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಲಾಗಿದೆ, ಆದರೆ ಅದು ತನ್ನ ಉಪಟಳವನ್ನು ಮುಂದುವರಿಸಿದೆ. ಇದೀಗ ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗ್ಯಾಂಗ್ ಕಾರ್ಯಚರಣೆ ನಡೆಯಲಿದೆ, ಅಭಿಮನ್ಯುಗೆ ಮಹೇಂದ್ರ ಸುಗ್ರೀವ, ಭೀಮ. ದುಬಾರೆ ಹಾಗೂ ನಾಗರಹೊಳೆಯಿಂದ ಆಗಮಿಸಿರುವ 8 ಕುಮ್ಕಿ ಆನೆಗಳು ಸಾಥ್ ನೀಡಲಿವೆ. ಸದ್ಯ ಅಭಿಮನ್ಯು ಮತ್ತು ತಂಡ ಮತ್ತಾವರ ಅರಣ್ಯ ಇಲಾಖೆಯ ವಸತಿ ಗೃಹದ ಆವರಣಕ್ಕೆ ಬಂದಿಳಿದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಬಳಿಕ ಕಾರ್ಯಚರಣೆ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ಬಳಿಕ ಕಾರ್ಯಚರಣೆ ಆರಂಭಿಸುವ ಸಾಧ್ಯತೆ ಇದೆ. ಸದ್ಯ, ಬೀಟಮ್ಮ ಗ್ಯಾಂಗ್ ಚಲನೆಯ ಮೇಲೆ ನಿಗಾಇಟ್ಟಿರುವ ಅರಣ್ಯ ಇಲಾಖೆಯು ಬಂದ ದಾರಿಯಲ್ಲೇ ಅವುಗಳನ್ನು ವಾಪಸ್ ಕಳಿಸಲು ಪ್ಲಾನ್ ಮಾಡಿಕೊಂಡಿದೆ. ಸದ್ಯ, ಕೆಆರ್ ಪೇಟೆ ಗ್ರಾಮದ ಶಾಲೆಯ ಹಿಂಭಾಗದ ಪ್ಲಾಂಟೇಶನ್ನಲ್ಲಿ 30 ಕಾಡಾನೆಗಳೊಂದಿಗೆ ಬೀಟಮ್ಮ ಬೀಟು ಬಿಟ್ಟಿದೆ.
ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಆವರಣದಲ್ಲೇ ಬೀಡುಬಿಟ್ಟಿದ್ದ ಕಾಡಾನೆ ಬೀಟಮ್ಮ ಮತ್ತು ಗ್ಯಾಂಗ್ ಜನರನ್ನ ಆತಂಕ್ಕೀಡು ಮಾಡಿತ್ತು. ಮುಂಜಾಗ್ರತಾ ಕ್ರಮ ಕೈಗೊಂಡು ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಸತಿ ಶಾಲಾ ಆವರಣದಿಂದ ಹೊರಗೆ ಓಡಿಸಿದ್ದಾರೆ.
ಈ ಹಿನ್ನಲೆ ಕಾಡಾನೆ ಸಂಚಾರ ಮಾಡುವ ರಸ್ತೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, 9 ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಆದ್ದರಿಂದ ಯಾರೂ ಕೂಡ ಮನೆಗಳಿಂದ ಹೊರ ಬರದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಬರೊಬ್ಬರಿ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿಗಳು ಸೇರಿ ಕಾಡಾನೆಗಳ ಹಿಂಡನ್ನು ಮತ್ತೆ ಕಾಡಿಗಟ್ಟಲು ಪಟಾಕಿ ಸಿಡಿಸಿ ಹರಸಾಹಸ ಪಟ್ಟಿದ್ದರು. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದೆ.