Ad Widget .

ತಂಗಿಯನ್ನು ಕಾಪಾಡಲು ಬಾವಿಗೆ ಹಾರಿದ ಅಣ್ಣ| ಅಣ್ಣ ತಂಗಿ ಇಬ್ಬರೂ ಸಾವು

ಸಮಗ್ರ ನ್ಯೂಸ್: ಕಾಲೇಜಿಗೆ ಹೋಗು ಎಂದು ಅಣ್ಣ ಬೈದು ಬುದ್ದಿ ಹೇಳಿದ್ದಕ್ಕೆ ಮನ ನೊಂದ ತಂಗಿ ಓಡಿ ಹೋಗಿ ಬಾವಿಗೆ ಜಿಗಿದಿದ್ದು ತಂಗಿಯನ್ನು ಕಾಪಾಡಲು ಅಣ್ಣ ಕೂಡ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಂಗಿ ನಂದಿನಿ(18), ಅಣ್ಣ ಸಂದೀಪ್(21) ಮೃತ ದುರ್ದೈವಿಗಳು. ನಂದಿನಿ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಸಂದೀಪ್ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದು, ಅಣ್ಣ ಬೈದ ಎಂದು ಕೋಪಗೊಂಡು ತಂಗಿ ಬಾವಿಗೆ ಹಾರಿದ್ದಾಳೆ. ತಂಗಿಯನ್ನು ಕಾಪಾಡಲು ಅಣ್ಣ ಕೂಡ ಬಾವಿಗೆ ಜಿಗಿದಿದ್ದು ಇಬ್ಬರೂ ನೀರು ಪಾಲಾಗಿದ್ದಾರೆ.

Ad Widget . Ad Widget . Ad Widget .

ಬಾವಿಯ ದಡದಲ್ಲಿ ನಂದಿನಿ ತಲೆಯಲ್ಲಿದ್ದ ಹೂವಿನ ಗೊಂಚಲು ಮುಡಿದುಕೊಂಡನ್ನು ಗಮನಿಸಿದ ಹೆತ್ತವರು ಅನುಮಾನಗೊಂಡು ಕಾರ್ಯಾಚರಣೆ ನಡೆಸಿದ ನಂತರ ಬಾವಿಯಲ್ಲಿ ಅಣ್ಣ ತಂಗಿಯ ಶವ ಪತ್ತೆಯಾಗಿದೆ. ಬಾವಿಯಲ್ಲಿ ಅಣ್ಣ-ತಂಗಿಯ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *