ಸಮಗ್ರ ನ್ಯೂಸ್: ಮದುವೆ ಸಮಾರಂಭ ಹೆಚ್ಚಾಗುತ್ತಿರುವಂತೆ ಆಹ್ವಾನವಿಲ್ಲದೆ ಮದುವೆಗಳಿಗೆ ಹೋಗಿ ಪುಕ್ಸಟ್ಟೆ ಆಹಾರ ತಿನ್ನೋರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ ಆಹ್ವಾನವಿಲ್ಲದ ಮದುವೆಯಲ್ಲಿ ಊಟ ಮಾಡೋದ್ರಿಂದ ಜೈಲು ಶಿಕ್ಷೆಯಾಗುತ್ತಂತೆ ಹೌದಾ?
ಇಲ್ಲಿವರೆಗೆ ಮದ್ವೆಗೆ ಸೂಕ್ತ ಮುಹೂರ್ತವಿರಲಿಲ್ಲ. ಈ ಮಾಸದಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿರಲಿಲ್ಲ. ಇದೀಗ ಶುಭ ಕಾರ್ಯಗಳು ಪ್ರಾರಂಭವಾಗಿವೆ. ಮದುವೆಗೆ ಬಾಕಿ ಇರುವ ತಯಾರಿಗಳೆಲ್ಲವೂ ನಡೆಯುತ್ತಿದೆ. ಗೃಹ ಪ್ರವೇಶದಿಂದ ಹಿಡಿದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಈಗ ಆರಂಭವಾಗಿದೆ. ನೀವು ಮದುವೆ ಅಥವಾ ಇತರ ಶುಭಾ ಸಮಾರಂಭಗಳಿಗೆ ರೆಡಿಯಾಗಿದ್ದೀರಾ?
ನಾವು ಮದುವೆ ಬಗ್ಗೆ ಮಾತನಾಡೋದಾದರೆ, ಮದುವೆ ಆಹಾರದ ಬಗ್ಗೆ ಮಾತನಾಡದೇ ಇರಲು ಸಾಧ್ಯವೇ? ಆಹಾರ ಎಷ್ಟು ಫೇಮಸ್ ಅಂದ್ರೆ ಅನೇಕ ಜನರು ಮದುವೆಗಳಿಗೆ ಆಹ್ವಾನ ಇಲ್ಲದೇ ಇದ್ದರೂ, ಕೆಲವು ಮದುವೆಗಳಿಗೆ ಹೋಗಿ, ಹೊಟ್ಟೆ ತುಂಬಾ ಊಟ ಮಾಡಿ ಬರುತ್ತಾರೆ.ನಿಮಗೂ ಹೀಗೆ ಮಾಡೊ ಅಭ್ಯಾಸ ಇದೆಯೇ?
ಆಮಂತ್ರಣವಿಲ್ಲದೆ ಮದುವೆಯ ಪಾರ್ಟಿಗೆ ಬರುವ ಜನರ ಸಂಖ್ಯೆ ತುಂಬಾನೆ ಇದೆ. ಈ ಜನರು ಹೆಚ್ಚಾಗಿ ಹಾಸ್ಟೆಲ್ ಗಳಲ್ಲಿ ವಾಸಿಸುವ ಅವಿವಾಹಿತರು. ಕಾಲೇಜಿಗೋ, ಕೆಲಸಕ್ಕೆಂದೋ ದೂರದ ಊರಲ್ಲಿ, ಹಾಸ್ಟೆಲ್, ಪಿಜಿಯಲ್ಲಿ ಇರುವ ಕೆಲವು ಅವಿವಾಹಿತ ಹುಡುಗ, ಹುಡುಗಿಯರು ಆ ಊರಲ್ಲಿ, ಯಾವುದೇ ಮದುವೆ ಇದ್ದರೆ, ಅಲ್ಲಿನ ಊಟ ಚೆನ್ನಾಗಿದೆ ಎಂದು ಅವರಿಗೆ ಅನಿಸಿದರೆ, ಅಲ್ಲಿಗೆ ಚೆನ್ನಾಗಿ ರೆಡಿಯಾಗಿ ಹೋಗಿ ಊಟ ಮಾಡಿ ಬರ್ತಾರೆ.
ಈ ಮದುವೆಗಳಲ್ಲಿ ನೀಡಲಾಗುವ ಆಹಾರವನ್ನು ಟೇಸ್ಟ್ ಮಾಡೋದೆ ಅವರ ಏಕೈಕ ಕೆಲಸ. ನೀವೂ ಇದನ್ನು ಮಾಡಿದರೆ, ಈ ಸುದ್ದಿ ನಿಮಗಾಗಿ. ಮದುವೆಯ ಪಾರ್ಟಿಯಲ್ಲಿ ಆಹ್ವಾನಿಸದೆ ತಿನ್ನುವುದು ನಿಮಗೆ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
ವಕೀಲರು ಏನು ಹೇಳ್ತಾರೆ ಇದರ ಬಗ್ಗೆ?
ವಕೀಲ ಉಜ್ವಲ್ ತ್ಯಾಗಿ ಈ ಪ್ರಶ್ನೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಉತ್ತರಿಸಿದ್ದಾರೆ. ಆಹ್ವಾನವಿಲ್ಲದೆ ಮದುವೆಗಳಲ್ಲಿ ತಿನ್ನಲು ಹೋಗುವ ಜನರು, ಆ ಮೂಲಕ ಅಪರಾಧ ಮಾಡುತ್ತಾರೆ ಎಂದು ಅವರು ಹೇಳಿದರು. ಸಿಕ್ಕಿಬಿದ್ದರೆ, ಸೆಕ್ಷನ್ 442 ಮತ್ತು 452 ರ ಅಡಿಯಲ್ಲಿ ಅವರಿಗೆ ಎರಡರಿಂದ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಸಹ ಅವರು ಹೇಳಿದ್ದಾರೆ.
ಹೌದು, ಆಮಂತ್ರಣವಿಲ್ಲದೆ ಮದುವೆಗೆ ಹೋಗುವುದು ಅತಿಕ್ರಮಣದ ಪ್ರಕರಣ ಎಂದು ವಕೀಲರು ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಎರಡು ವಿಭಾಗಗಳ ಅಡಿಯಲ್ಲಿ ಶಿಕ್ಷೆಯನ್ನು ನೀಡಬಹುದು. ಹಾಗಾಗಿ ಇನ್ನೊಂದು ಭಾರಿ ಆಹ್ವಾನವಿಲ್ಲದ ಮದುವೆಗೆ ಹೋಗುವ ಯೋಚನೆ ನೀವು ಮಾಡಿದ್ದರೆ, ಎರಡು ಬಾರಿ ಯೋಚನೆ ಮಾಡೋದನ್ನು ಮರೆಯಬೇಡಿ.
ಸದ್ಯ ಆ ವಕೀಲರ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕ ಜನರು ಈ ಬಗ್ಗೆ ಆಶ್ಚರ್ಯ ವ್ಯಕ್ತಪಸಿದ್ದಾರೆ. ಆಹ್ವಾನವಿಲ್ಲದ ಮದುವೆಯಲ್ಲಿ ಊಟ ಮಾಡಿದ್ರೆ, ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರೋದಾದ್ರೆ, ಪ್ರತಿಯೊಬ್ಬ ಹಾಸ್ಟೆಲ್ ವ್ಯಕ್ತಿ ಜೈಲಿಗೆ ಹೋಗುತ್ತಾನೆ ಎಂದು ಕೆಲವು ಜನರು ಅಭಿಪ್ರಾಯಪಟ್ಟರೆ, ಮತ್ತೊಬ್ಬರು ಭಾರತದಲ್ಲಿ, ಆಹ್ವಾನಿಸದೆ ಬರುವ ಅತಿಥಿಗಳಿಗೂ ಗೌರವ ನೀಡಲಾಗುತ್ತದೆ ಎಂದು ಬರೆದಿದ್ದಾರೆ.