ಸಮಗ್ರ ನ್ಯೂಸ್: ಚಂದ್ರಯಾನ-3 ಮಿಷನ್ ಮತ್ತೊಂದು ಯಶಸ್ಸು ಸಾಧಿಸಿದೆ. ಮೊದಲ ಬಾರಿಗೆ ಚಂದ್ರನ ದಕ್ಷಿಣ ದಿಕ್ಕಿನಲ್ಲಿ ಲ್ಯಾಂಡ್ ಆಗಿದ್ದ ವಿಕ್ರಮ್ ಲ್ಯಾಂಡರ್ ಮತ್ತೆ ಆಕ್ಟಿವ್ ಆಗಿದೆ.
ಬರೋಬ್ಬರಿ 135 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತೆ ತನ್ನ ಕಾರ್ಯ ಆರಂಭಿಸಿರೋದನ್ನ ಇಸ್ರೋ ಹಾಗೂ ನಾಸಾ ವಿಜ್ಞಾನಿಗಳು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
2023ರ ಆಗಸ್ಟ್ 23ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ಇದಾದ ಮೇಲೆ ವಿಶೇಷ ಫೋಟೋ ಹಾಗೂ ಮಾಹಿತಿಗಳನ್ನು ಇಸ್ರೋಗೆ ರವಾನೆ ಮಾಡಿತ್ತು.
2023ರ ಸೆಪ್ಟೆಂಬರ್ 2ರಂದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್‌ನಿಂದ ಯಾವುದೇ ಸಿಗ್ನಲ್ ಹಾಗೂ ಸಂದೇಶಗಳು ಬಂದಿರಲಿಲ್ಲ. ವಿಕ್ರಮ್ ಲ್ಯಾಂಡರ್ ಸಂಪೂರ್ಣ ನಿದ್ರೆಗೆ ಜಾರಿದೆ ಎಂದೇ ಇಸ್ರೋ ಘೋಷಣೆ ಮಾಡಿತ್ತು. ಆದ್ರೆ 135 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತೆ ತನ್ನ ಕಾರ್ಯ ಆರಂಭಿಸಿದೆ ಅನ್ನೋದೇ ವಿಶೇಷವಾಗಿದೆ.