ಸಮಗ್ರ ನ್ಯೂಸ್: ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಜ.12 ರಿಂದ ವಿಶೇಷ ವ್ರತವನ್ನು ಮೋದಿ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ, ಲೇಪಾಕ್ಷಿ, ಗುರುವಾಯೂರು ದೇಗುಲಕ್ಕೂ ಆಗಮಿಸಿ ದರ್ಶನ ಹಾಗೂ ಪೂಜೆ ಸಲ್ಲಿಸಿದರು. ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಂಬ ರಾಮಾಯಣ ಪಠಣವನ್ನು ಪ್ರಧಾನಿ ಮೋದಿ ಆಲಿಸಿದರು.
ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದ ನಂತರ ದೇವಾಲಯದ ಆನೆಗೆ ಫಲಾಹಾರ ನೀಡಿದ್ದರು.

ಮುಖ್ಯವಾಗಿ ದೇವಾಲಯದಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು ಶ್ರೀ ರಂಗನಾಥ ಸ್ವಾಮಿ, ಇವರು ವಿಷ್ಣುವಿನ ಒರಗಿರುವ ರೂಪ. ವೈಷ್ಣವ ಗ್ರಂಥಗಳು ಈ ದೇವಾಲಯದಲ್ಲಿ ಪೂಜಿಸುವ ವಿಗ್ರಹಕ್ಕೂ ಅಯೋಧ್ಯೆಗೂ ಇರುವ ಸಂಬಂಧವನ್ನು ಉಲ್ಲೇಖಿಸುತ್ತವೆ.
ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಶನಿವಾರ ಸಂಜೆ ತಣ್ಣೀರು ಸ್ನಾನ ಮಾಡಿ, ಅಗ್ನಿ ತೀರ್ಥ ಕೊಳದಲ್ಲಿ ಮುಳುಗಿ, ನಂತರ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಕ್ಕೆ ಹೋಗಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಇರುವುದರಿಂದ ಈಗಾಗಲೇ ಕೆಲವು ಆಚರಣೆಗಳನ್ನು ಮಾಡುತ್ತಿದ್ದಾರೆ. ನೆಲದ ಮೇಲೆ ಮಲಗುವುದು, ದ್ರವರೂಪದ ಆಹಾರವನ್ನು ಮಾತ್ರ ಸೇವಿಸುತ್ತಿದ್ದಾರೆ. ಇದೀಗ ರಾಮೇಶ್ವರಂ ನಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಿ ಮತ್ತೊಮ್ಮೆ ಜನರನ್ನು ಸೆಳೆದಿದ್ದಾರೆ.