Ad Widget .

15,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌

ಸಮಗ್ರ ನ್ಯೂಸ್: ಸ್ಯಾಮ್‌ಸಂಗ್‌ ( SAMSUNG) ಕಂಪನಿಯು ತನ್ನ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಆಕರ್ಷಕ ಫೀಚರ್ಸ್‌ ಫೋನ್‌ ಪರಿಚಯಿಸಿದ್ದು, ಸದ್ಯ ಆ ಪೈಕಿ ಗ್ಯಾಲಕ್ಸಿ M34 5G ಮೊಬೈಲ್‌ ಅಮೆಜಾನ್‌ ತಾಣದಲ್ಲಿ ಸೂಪರ್ ಆಫರ್‌ನಲ್ಲಿ ಕಾಣಿಸಿಕೊಂಡಿದೆ.

Ad Widget . Ad Widget .

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌ 35% ಪರ್ಸೆಂಟ್‌ನಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೊಬೈಲ್‌ ಅನ್ನು 6GB RAM + 128GB ವೇರಿಯಂಟ್‌ ಫೋನ್‌ 15,999 ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಬ್ಯಾಂಕ್‌ ಡಿಸ್ಕೌಂಟ್‌ ಸಹ ಗ್ರಾಹಕರಿಗೆ ಲಭ್ಯ ಸಿಗಲಿವೆ.

Ad Widget . Ad Widget .

ಗ್ಯಾಲಕ್ಸಿ M34 5G ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇನ್ನು ಈ ಮೊಬೈಲ್‌ ಪ್ರಿಸ್ಮ್ ಸಿಲ್ವರ್, ಮಿಡ್ನೈಟ್ ಬ್ಲೂ ಮತ್ತು ವಾಟರ್‌ಫಾಲ್‌ ಬ್ಲೂ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಫೀಚರ್ಸ್‌ ಹೀಗಿವೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಫೋನ್‌ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿದ್ದು, ಡಿಸ್‌ಪ್ಲೇಯು ಪಂಚ್‌ ಹೋಲ್‌ ಕಟ್‌ಔಟ್‌ ಮಾದರಿಯಲ್ಲಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಸಹ ಪಡೆದಿದೆ.

ಸ್ಯಾಮ್‌ಸಂಗ್ ಸಂಸ್ಥೆಯ ಈ ಮೊಬೈಲ್‌ ಆಕ್ಟಾ ಕೋರ್ Exynos 1280 SoC ಪ್ರೊಸೆಸರ್‌ ನಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಹೊಂದಿದೆ. ಇನ್ನು ಈ ಫೋನ್ 6GB + 128 GB ಮತ್ತು 8GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ M34 5G ಮೊಬೈಲ್‌ ಮೂರು ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ಸ್ಯಾಮ್‌ಸಂಗ್ ಸಂಸ್ಥೆಯ ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಪಡೆದುಕೊಂಡಿದೆ. ಇದಕ್ಕೆ ಸಪೋರ್ಟ್‌ ಆಗಿ 25W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಸಹ ಹೊಂದಿದೆ. ಹಾಗೆಯೇ ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ ಆಯ್ಕೆಗಳ ಜೊತೆಗೆ ಬ್ಲೂಟೂತ್ 5.2, ಎನ್‌ಎಫ್‌ಸಿ ಸೌಲಭ್ಯಗಳು ಸಹ ಇವೆ.

ಸ್ಯಾಮ್‌ಸಂಗ್‌ ಸಂಸ್ಥೆಯ ಈ ಗ್ಯಾಲಕ್ಸಿ ಫೋನ್‌ 6GB RAM + 128GB ಸ್ಟೋರೇಜ್ ವೇರಿಯಂಟ್‌ ಹಾಗೂ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನ್‌ ಪ್ರಿಸ್ಮ್ ಸಿಲ್ವರ್, ಮಿಡ್ನೈಟ್ ಬ್ಲೂ ಮತ್ತು ವಾಟರ್‌ಫಾಲ್‌ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ.

Leave a Comment

Your email address will not be published. Required fields are marked *