Ad Widget .

ಮೊಟ್ಟಮೊದಲ ಬುಲೆಟ್ ಟ್ರೈನ್ 2026ರಲ್ಲಿ ಕಾರ್ಯಾರಂಭ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಸಮಗ್ರ ನ್ಯೂಸ್: ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ 2026ರಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಹೇಳಿದ್ದಾರೆ.

Ad Widget . Ad Widget .

ಈವರೆಗೂ 270 ಕಿಲೋಮೀಟರ್‍ವರೆಗಿನ ಕೆಲಸ ಸಂಪೂರ್ಣವಾಗಿದೆ. ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾಪೆರ್Çರೇಷನ್ ಲಿಮಿಟೆಡ್ ಜನವರಿ 8 ರಂದು ಗುಜರಾತ್, ಮಹಾರಾಷ್ಟ್ರ ಮತ್ತು ದಾದ್ರಾ ಮತ್ತು ನಗರ ಹವೇಲಿಯಾದ್ಯಂತ ಬುಲೆಟ್ ರೈಲು ಯೋಜನೆ ಎಂದು ಕರೆಯಲ್ಪಡುವ ಮುಂಬೈ-ಅಹಮದಾಬಾದ್ ರೈಲು ಕಾರಿಡಾರ್‍ಗೆ ಯೋಜನೆಗೆ ಅಗತ್ಯವಿರುವ ಸಂಪೂರ್ಣ 1389.49 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Ad Widget . Ad Widget .

ಗುಜರಾತ್‍ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದ ಮತ 12.6 ಮೀಟರ್ ವ್ಯಾಸದ ಮೊದಲ ಪರ್ವತ ಸುರಂಗವನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾಪೆರ್Çರೇಷನ್ ಲಿಮಿಟೆಡ್ ಹೇಳಿದೆ.

ಜಪಾನ್‍ನ ಶಿಂಕನ್‍ನ್ ಟೆಕ್ನಾಲಜಿಯನ್ನು ಬಳಸಿಕೊಂಡು ಹೈ-ಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ ಮತ್ತು ಯೋಜನೆಯು ಹೆಚ್ಚಿನ ಆವರ್ತನ ಸಮೂಹ ಸಾರಿಗೆ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಜಪಾನ್ನಿನ್ನಂದ 88,000 ಕೋಟಿ ರೂಪಾಯಿಗಳ ಮೃದು ಸಾಲದೊಂದಿಗೆ ಜಪಾನ್ ಇಂಟನ್ರ್ಯಾಷನಲ್ ಕೋರ್ಪರೇಷನ್ ಏಜೆನ್ಸಿ ಈ ಯೋಜನೆಗೆ ಹಣವನ್ನು ನೀಡಿದೆ.

Leave a Comment

Your email address will not be published. Required fields are marked *