Ad Widget .

ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ/ ಚುನಾವಣೆ ಬಹಿಷ್ಕರಿಸಿದ ವಿಪಕ್ಷಗಳು

ಸಮಗ್ರ ನ್ಯೂಸ್: ಬಾಂಗ್ಲಾದೇಶದಲ್ಲಿ ಜ. 7ರಂದು ಸಾರ್ವತ್ರಿಕ ಚುನಾವಣೆಗೆ ನಡೆಯಲಿದ್ದು, ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಉಸ್ತುವಾರಿ ಸರ್ಕಾರದ ನೇತೃತ್ವದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಇಲ್ಲಿನ ವಿರೋಧ ಪಕ್ಷಗಳಾದ ಬಾಂಗ್ಲದೇಶ ರಾಷ್ಟ್ರೀಯ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಆಗ್ರಹವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿವೆ. ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಹಾಲಿ ಪ್ರಧಾನಿ ಶೇಖ್ ಹಸೀನಾ ಗೆಲುವುದು ಸುಲಭವಾಗಿದೆ.

Ad Widget . Ad Widget .

ಚುನಾವಣಾ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 750,000 ಪೆÇಲೀಸರು, ಅರೆಸೇನಾಪಡೆ ಮತ್ತು ಪೆÇೀಲೀಸ್ ಸಹಾಯಕರನ್ನು ನಿಯೋಜಿಸಲಾಗಿದೆ. ಅದಲ್ಲದೆ 127 ವಿದೇಶಿ ವೀಕ್ಷಕರು ಚುನಾವಣಾ ಪ್ರಕ್ರಿಯೆ ಮತ್ತು ಅದರ ನ್ಯಾಯ ಸಮ್ಮತೆಯನ್ನು ವೀಕ್ಷಿಸುತ್ತಾರೆ. ಚುನಾವಣಾ ದಿನದಂದು ವಿದೇಶದಿಂದ 59 ಪತ್ರಕರ್ತರು ಮಾತ್ರ ಮಾನ್ಯತೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Ad Widget . Ad Widget .

ಮತದಾನ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಕೊನೆಗೊಳ್ಳುತ್ತದೆ. ಮತದಾನ ಮುಗಿದ ಕೂಡಲೇ ಎಣಿಕೆ ಆರಂಭವಾಗಲಿದ್ದು, ಜ. 8 ರಂದು ಆರಂಭಿಕ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಬಾಂಗ್ಲಾದೇಶದಲ್ಲಿ ಸುಮಾರು 170 ದಶಲಕ್ಷ ಮತದಾರರು ಮತದಾನ ಹಕ್ಕು ಹೊಂದಿದ್ದಾರೆ. ಈ ಬಾರಿ ಸುಮಾರು 120 ಮಿಲಿಯನ್ ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಹಾಗೂ 15 ಮಿಲಿಯನ್ ಗೂ ಹೆಚ್ಚು ಮಹಿಳಾ ಮತದಾರರು ಮೊದಲ ಬಾರಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

Leave a Comment

Your email address will not be published. Required fields are marked *