December 2023

ಜಾತ್ರೆಯಲ್ಲಿ ಮರಣ ಬಾವಿ ಪ್ರದರ್ಶನ ವೇಳೆ ಪಲ್ಟಿಯಾದ ಕಾರುಗಳು| ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಜಾತ್ರಾ ಮೈದಾನದಲ್ಲಿ ಮರಣಬಾವಿ ಪ್ರದರ್ಶನ ವೇಳೆ ಎರಡು ಮಾರುತಿ 800 ಕಾರುಗಳು ಪಲ್ಟಿಯಾದ ಘಟನೆ ಕುಶಾಲನಗರ ನಡೆದಿದೆ. ಮರಣ ಬಾವಿಯಲ್ಲಿ ಕಾರು ಹಾಗೂ ಬೈಕುಗಳು ಪ್ರದರ್ಶನ ನೀಡುತ್ತಿದ್ದ ವೇಳೆ ಕೆಳಗಿಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ‌ ಅಪಾಯದಿಂದ ಪಾರಾಗಿದ್ದಾರೆ.

ಜಾತ್ರೆಯಲ್ಲಿ ಮರಣ ಬಾವಿ ಪ್ರದರ್ಶನ ವೇಳೆ ಪಲ್ಟಿಯಾದ ಕಾರುಗಳು| ತಪ್ಪಿದ ಅನಾಹುತ Read More »

“ಕ್ಷಮಿಸು ವನಿತಾ, ಮಕ್ಕಳನ್ನು ಚೆನ್ನಾಗಿ ನೋಡಿಕೋ” | ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಗ್ರಾ.ಪಂ ಸದಸ್ಯ

ಸಮಗ್ರ ನ್ಯೂಸ್: ‘ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸು ವನಿತಾ..ಮಕ್ಕಳನ್ನು ನೋಡಿಕೋ’ ಎಂಬುದಾಗಿ ಡೆತ್‌ನೋಟ್ ಬರೆದಿಟ್ಟಿದ್ದದ್ದು ಪಂಚಾಯತ್ ಸದಸ್ಯರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನಿಂದ ವರದಿಯಾಗಿದೆ. ಮೃತರನ್ನು ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯ, ಮಾಡ್ನೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಶಂಕರ(41ವ.)ಎಂದು ಗುರುತಿಸಲಾಗಿದೆ. ಶಂಕರ್ 5 ವರ್ಷಗಳ ಹಿಂದೆ ಸಾಲ ಮಾಡಿ ಜಾಗ ಖರೀದಿ ಮಾಡಿದ್ದು, ಸಾಲ ಮರುಪಾವತಿ ಚಿಂತೆಯಲ್ಲಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಡಿ.3ರಂದು ಮನೆಯವರು

“ಕ್ಷಮಿಸು ವನಿತಾ, ಮಕ್ಕಳನ್ನು ಚೆನ್ನಾಗಿ ನೋಡಿಕೋ” | ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಗ್ರಾ.ಪಂ ಸದಸ್ಯ Read More »

ಐಷಾರಾಮಿ ಬಸ್ ಬೆಂಕಿಗಾಹುತಿ| ಓರ್ವ ಸಜೀವ ದಹನ

ಸಮಗ್ರ ನ್ಯೂಸ್: ಖಾಸಗಿ ಟ್ರಾವೆಲ್ಸ್ ಗೆ ಸೇರಿದ ಐಷಾರಾಮಿ ಬಸ್ ಭಸ್ಮಗೊಂಡ ಘಟನೆ ಆಂಧ್ರ ಪ್ರದೇಶದ ನಲ್ಲಗೊಂಡ-ಮರಿಗೂಡ ಬೈಪಾಸ್ ರಸ್ತೆ ಬಳಿ ಸಂಭವಿಸಿದೆ. ಶಾಕ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿಗೆ ಆಹುತಿಯಾದ ಬಸ್ ಶ್ರೀ ಕೃಷ್ಣ ಟ್ರಾವೆಲ್ಸ್ ಗೆ ಎಂಬ ಖಾಸಾಗಿ ಕಂಪೆನಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಒಬ್ಬ ಪ್ರಯಾಣಿಕ ಪ್ರಾಣ ಕಳೆದುಕೊಂಡಿದ್ದು, ದುರ್ಘಟನೆ ಸಂದರ್ಭ ಬಸ್ಸಿನಲ್ಲಿ 40 ಪ್ರಯಾಣಿಕರಿದ್ದರು ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳು, ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿದೆ. ಸಹಾಯಕ್ಕಾಗಿ

ಐಷಾರಾಮಿ ಬಸ್ ಬೆಂಕಿಗಾಹುತಿ| ಓರ್ವ ಸಜೀವ ದಹನ Read More »

ಸಿಪಿವೈ ಬಾವ ನಾಪತ್ತೆ ಕೇಸ್… ಮಹದೇವಯ್ಯ ಕಾರು ಚಾಮರಾಜನಗರದಲ್ಲಿ ಪತ್ತೆ

ಸಮಗ್ರ ನ್ಯೂಸ್: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಾಣೆಯಾಗಿದ್ದು, ಎರಡು-ಮೂರು ದಿನ ಕಳೆದರು ಇದುವರೆಗೂ ಅವರ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಇದೀಗ ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿದೆ. ಆದ್ರೆ, ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಇದ್ದು, ಸ್ಥಳಕ್ಕೆ ಫಾರೆನ್ಸಿಕ್ ಹಾಗೂ ರಾಮನಗರ ಪೊಲೀಸ್ ತನಿಖಾ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ

ಸಿಪಿವೈ ಬಾವ ನಾಪತ್ತೆ ಕೇಸ್… ಮಹದೇವಯ್ಯ ಕಾರು ಚಾಮರಾಜನಗರದಲ್ಲಿ ಪತ್ತೆ Read More »

ಭಾರತೀಯ ಸೇನಾ ತರಬೇತಿ ವಿಮಾನ ಪತನ

ಸಮಗ್ರ ನ್ಯೂಸ್: ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೂಪ್ರಾನ್‌ನ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅಪಘಾತದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಐಎಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೈಲಟ್ ವಿಮಾನದಿಂದ ಹೊರಗೆ ಜಿಗಿದಿದ್ದಾರೆಯೇ ಎಂಬುದು ಪೊಲೀಸರಿಗೆ ಖಚಿತವಾಗಿಲ್ಲ.

ಭಾರತೀಯ ಸೇನಾ ತರಬೇತಿ ವಿಮಾನ ಪತನ Read More »

ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ |ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರಿಗೆ ಸನ್ಮಾನ

ಸಮಗ್ರ ನ್ಯೂಸ್: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಇದರ ವತಿಯಿಂದ ಡಿ.2ರಂದು ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಕಳ ತಾಲೂಕು ಹತ್ತೊಂಬತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಹಿರಿಯ ಶಿಶು ಸಾಹಿತಿ ನಿವೃತ್ತ ಶಿಕ್ಷಕ ಸೂಡ ಸದಾನಂದ ಶೆಣೈ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಸಮ್ನೇಳನದಲ್ಲಿ ಗೌರವ ನೆರವೇರಿತು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ

ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ |ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರಿಗೆ ಸನ್ಮಾನ Read More »

ಸಾಯೋದಕ್ಕೆ ನನ್ನ ಕಾರೇ ಬೇಕಿತ್ತಾ? ಬಸ್ ಗೆ ಗುದ್ದಿ ಸಾಯೋಕಾಗಲ್ವಾ? ಬಡ ಬೈಕ್ ಸವಾರನಿಗೆ ಭವಾನಿ ರೇವಣ್ಣ ಅವಾಚ್ಯವಾಗಿ ನಿಂದನೆ

ಸಮಗ್ರ ನ್ಯೂಸ್: ಸಂಚರಿಸುತ್ತಿದ್ದ ಕಾರಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ಶಾಸಕ ಎಚ್​.ಡಿ. ರೇವಣ್ಣರ ಪತ್ನಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಮಾನವೀಯತೆ ಮರೆತು ಬೈಕ್​ ಸವಾರನನ್ನು ಹಿಗ್ಗಾಮುಗ್ಗಾ ನಿಂದಿಸಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಡಿ.03ರಂದು ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ತಪ್ಪಾದ ಮಾರ್ಗದಲ್ಲಿ ಬಂದ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದಾನೆ. ಇದರ

ಸಾಯೋದಕ್ಕೆ ನನ್ನ ಕಾರೇ ಬೇಕಿತ್ತಾ? ಬಸ್ ಗೆ ಗುದ್ದಿ ಸಾಯೋಕಾಗಲ್ವಾ? ಬಡ ಬೈಕ್ ಸವಾರನಿಗೆ ಭವಾನಿ ರೇವಣ್ಣ ಅವಾಚ್ಯವಾಗಿ ನಿಂದನೆ Read More »

ಪೊನ್ನಂಪೇಟೆ: ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

ಸಮಗ್ರ ನ್ಯೂಸ್: ಪೊನ್ನಂಪೇಟೆ ತಾಲೂಕು ಹುದಿಕೇರಿ ಹುಬ್ಬಳ್ಳಿಯ ಹೈಸೂಡಳುರು ಗ್ರಾಮದ ಐಗುಂದ ಬಳಿ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಹುದಿಕೇರಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವಿನಿ (48) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ನಿಕಿತಾ(21) ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ, ಅಕೆಯ ತಂಗಿ ನವ್ಯ(18) ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಮೂವರ ಶವ ಇಂದು ಕೂಟಿಯಲ ಹೊಳೆಯಲ್ಲಿ ಪತ್ತೆಯಾಗಿದೆ. ಮೂಲತಹ

ಪೊನ್ನಂಪೇಟೆ: ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ Read More »

‘ತ್ರಿ’ ವಿಕ್ರಮ ಮೆರೆದ ಬಿಜೆಪಿ| ದೇಶಕ್ಕೆ ಮೋದಿಯೇ ಗ್ಯಾರಂಟಿ ಟ್ರೆಂಡ್| ಕಾಂಗ್ರೆಸ್ ಗೆ ಸಿಹಿಗಿಂತ ಕಹಿಯೇ ಜಾಸ್ತಿ

ಸಮಗ್ರ ನ್ಯೂಸ್: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಬಿಜೆಪಿ ನಾಯಕರು ದೇಶಕ್ಕೆ “ಮೋದಿಯೇ ಗ್ಯಾರಂಟಿ” ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ. ಲೋಕಸಭೆಗೆ ಚುನಾವಣೆ ನಡೆಯುವ ಮುನ್ನದ ಸೆಮಿಫೈನಲ್‌ ಎಂದೇ ಬಿಂಬಿತವಾಗಿದ್ದ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ #ModikiGuarantee ಟ್ರೆಂಡ್‌ ಆಗಿದೆ. ಬಿಜೆಪಿ ನಾಯಕರು ದೇಶಕ್ಕೆ ಮೋದಿಯೇ ಗ್ಯಾರಂಟಿ ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್‌ ಈಗ ನಡೆಯುತ್ತಿರುವ ಚುನಾವಣಾ ರಾಜ್ಯಗಳಲ್ಲಿ

‘ತ್ರಿ’ ವಿಕ್ರಮ ಮೆರೆದ ಬಿಜೆಪಿ| ದೇಶಕ್ಕೆ ಮೋದಿಯೇ ಗ್ಯಾರಂಟಿ ಟ್ರೆಂಡ್| ಕಾಂಗ್ರೆಸ್ ಗೆ ಸಿಹಿಗಿಂತ ಕಹಿಯೇ ಜಾಸ್ತಿ Read More »

ತೆಲಂಗಾಣ ಸಿಎಂ ಆಗಿ ನಾಳೆ ರೇವಂತ್ ರೆಡ್ಡಿ ಪ್ರಮಾಣವಚನ

ಸಮಗ್ರ ನ್ಯೂಸ್: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದು ನಾಳೆ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವಂತೆ ರೇವಂತ್ ರೆಡ್ಡಿ ಡಿಜಿಪಿ ಅಂಜನಿ ಕುಮಾರ್ ಅವರಿಗೆ ನಿರ್ದೇಶನ ನೀಡಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ವ್ಯವಸ್ಥೆ ಮಾಡುವಂತೆ ಅಂಜನಿ ಕುಮಾರ್ ಅವರಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಅವರು ಹೇಳಿದರು. ಡಿಜಿಪಿ ಮತ್ತು ಹೆಚ್ಚುವರಿ ಡಿಜಿಗಳಾದ ಎಸ್.ಕೆ.ಜೈನ್

ತೆಲಂಗಾಣ ಸಿಎಂ ಆಗಿ ನಾಳೆ ರೇವಂತ್ ರೆಡ್ಡಿ ಪ್ರಮಾಣವಚನ Read More »