December 2023

ಡಿ.16 ರಿಂದ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಸಂಪ್ರೋಕ್ಷಣೆ ಪೂಜಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಮಡಿಕೇರಿ ಡಿ.11, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ರೂಢಿ ಸಂಪ್ರದಾಯದಂತೆ ಸಂಪ್ರೋಕ್ಷಣೆಯನ್ನು ನಡೆಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ವರ್ಷವೂ ಉಚ್ಚಿಲ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಡಿಸೆಂಬರ್, 16 ರಿಂದ ಡಿಸೆಂಬರ್, 19 ರವರೆಗೆ ಸಂಪ್ರೋಕ್ಷಣೆ” ಕಾರ್ಯಕ್ರಮ ನಡೆಯಲಿದೆ. ಶ್ರೀ ತಲಕಾವೇರಿ ದೇವಾಲಯದಲ್ಲಿ ಡಿ. 16ರಂದು ಬೆಳಗ್ಗೆ 7.30 ಗಂಟೆಗೆ ಗಣಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ. ಭಗಂಡೇಶ್ವರ ದೇವಾಲಯದಲ್ಲಿ ಡಿ. 17ರಂದು ಬೆಳಗ್ಗೆ 7.30 ಗಂಟೆಗೆ ಗಣಪತಿ ಹೋಮ, […]

ಡಿ.16 ರಿಂದ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಸಂಪ್ರೋಕ್ಷಣೆ ಪೂಜಾ ಕಾರ್ಯಕ್ರಮ Read More »

ಮನೆ ಬಳಿ ಮೇಯ್ತಿತ್ತು ಅಂತಾ 8 ದನಗಳ ಮೇಲೆ ಆ್ಯಸಿಡ್ ಹಾಕಿದ ಮುದುಕಿ

ಸಮಗ್ರ ನ್ಯೂಸ್: ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್‌ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ವೃದ್ಧೆ ಜೋಸೆಫ್ ಗ್ರೇಸ್ ಎಂಬುವವರು ಕೃತ್ಯ ಎಸಗಿದ್ದಾರೆ. ಜೋಸೆಫ್ ಗ್ರೇಸ್ ಆ್ಯಸಿಡ್‌ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಜೋಸೆಫ್ ಗ್ರೇಸ್ ಮನೆ ಬಳಿಯಿರುವ ಖಾಲಿ ಜಾಗದಲ್ಲಿ ಕಳೆದ ಮೂರು ದಿನಗಳಿಂದ ಹಸುಗಳು ಮೇಯಲು ಬರುತ್ತಿದ್ದವು. ಹೀಗಾಗಿ ಜೋಸೆಫ್ ಗ್ರೇಸ್ ನಿರಂತರವಾಗಿ ಆ್ಯಸಿಡ್‌ ಎರಚುತ್ತಿದ್ದಾರೆ. ನಾಗಣ್ಣ ಎಂಬುವರಿಗೆ ಸೇರಿದ

ಮನೆ ಬಳಿ ಮೇಯ್ತಿತ್ತು ಅಂತಾ 8 ದನಗಳ ಮೇಲೆ ಆ್ಯಸಿಡ್ ಹಾಕಿದ ಮುದುಕಿ Read More »

ಪ್ರವಾಸಿಗರಿಗೆ ಸಿಹಿ ಸುದ್ದಿ/ ಮುರ್ಡೇಶ್ವರದಲ್ಲಿ ಸೀ ವಾಕ್

ಸಮಗ್ರ ನ್ಯೂಸ್: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಕಡಲತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಸೀವಾಕ್ ಹಾಗೂ ಪ್ಯಾರಸೆಲಿಂಗ್ ಎಂಬ ಎರಡು ಹೊಸ ಜಲಕ್ರೀಡೆ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೊದಲ ಬಾರಿಗೆ ಸೀವಾಕ್ ಅಳವಡಿಸಲಾಗಿದ್ದು, ಇದೀಗ ಮುರ್ಡೇಶ್ವರದಲ್ಲಿ ರಾಜ್ಯದ ಎರಡನೇ ಸೀವಾಕ್ ಅನುಭವ ಪಡೆಯಲು ಪ್ರವಾಸಿಗರಿಗೆ ಅವಕಾಶವಾಗುತ್ತಿದೆ. ದೇಶ ವಿದೇಶಗಳಿಂದ ಪ್ರವಾಸಿಗರು ಇಂದಿಗೂ ಇಲ್ಲಿಗೆ ಆಗಮಿಸಿ ನೇತ್ರಾಣಿ ಹವಳದ ದ್ವೀಪದ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಅನುಭವ ಪಡೆದು ಹೋಗುತ್ತಿದ್ದಾರೆ. ಜಿಲ್ಲೆಯ ಗೋಕರ್ಣ ಕಡಲತೀರದಲ್ಲಿ

ಪ್ರವಾಸಿಗರಿಗೆ ಸಿಹಿ ಸುದ್ದಿ/ ಮುರ್ಡೇಶ್ವರದಲ್ಲಿ ಸೀ ವಾಕ್ Read More »

ಜೆಡಿಎಸ್ ಇಬ್ಭಾಗ/ ನೂತನ ರಾಷ್ಟ್ರಾಧ್ಯಕ್ಷರ ನೇಮಕ

ಸಮಗ್ರ ನ್ಯೂಸ್: ಜೆಡಿಎಸ್ ಉಚ್ಛಾಟಿತ ನಾಯಕರು ಜೆಡಿಎಸ್ ಪಕ್ಷವನ್ನು ಇಬ್ಬಾಗವನ್ನಾಗಿ ಮಾಡಿ ತಮ್ಮದೇ ರಾಷ್ಟ್ರಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಅವರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಲಾಯಿತು. ಇಂದು ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಲಾಯಿತು. ಸಭೆಯ ನಂತರ ಮಾತನಾಡಿದ ಸಿ.ಎಂ.ಇಬ್ರಾಹಿಂ, ಜೆಡಿಎಸ್ ರಾಷ್ಟ್ರೀಯ ಅದ್ಯಕ್ಷರನ್ನಾಗಿ ಸಿ.ಕೆ.ನಾಣು ಅವರನ್ನು ನೇಮಿಸಲಾಗಿದೆ. ಇದು ನನ್ನ ನಿರ್ಣಯವಲ್ಲ, ರಾಷ್ಟ್ರೀಯ ಕೌನ್ಸಿಲ್

ಜೆಡಿಎಸ್ ಇಬ್ಭಾಗ/ ನೂತನ ರಾಷ್ಟ್ರಾಧ್ಯಕ್ಷರ ನೇಮಕ Read More »

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್

ಸಮಗ್ರ ನ್ಯೂಸ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಉಜೈನ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಮೋಹನ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ನಿರ್ಧಾರದ ಮೂಲಕ ಆಯ್ಕೆ ಮಾಡಲಾಗಿದೆ. ಸುದೀರ್ಘ ವರ್ಷಗಳ ಕಾಲ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಶಿವರಾಜ್ ಸಿಂಗ್ ಚವ್ಹಾಣ್ ಬದಲಾಗಿ ಒಬಿಸಿ ನಾಯಕ ಯಾದವ್‍ಗೆ ಮಣೆ ಹಾಕಲಾಗಿದೆ ಜಗದೀಶ್ ದೇವಾಡ, ರಾಜೇಶ್ ಶುಕ್ಲಾ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ವಿಧಾನಸಭೆಯ ಸ್ಪೀಕರ್ ಆಗಿ ತೋಮರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಧ್ಯಪ್ರದೇಶಕ್ಕೆ ಬಿಜೆಪಿ ವೀಕ್ಷಕರಾದ ಹರಿಯಾಣ

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ Read More »

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಅಧ್ಯಯನ ಮತ್ತು ಸಮೀಕ್ಷೆ/ ಡಿಸೆಂಬರ್ 18 ರಂದು ವರದಿ ಸಲ್ಲಿಸಲು ಸೂಚನೆ

ಸಮಗ್ರ ನ್ಯೂಸ್: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಅಧ್ಯಯನ ಮತ್ತು ಸಮೀಕ್ಷೆಯ ವರದಿಯನ್ನು ಡಿಸೆಂಬರ್ 18 ರಂದು ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಸೂಚಿಸಿದ್ದಾರೆ ಸ್ಥಾಯಿ ಸರ್ಕಾರಿ ವಕೀಲ ಅಮಿತ್ ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವರದಿಯನ್ನು ಸಲ್ಲಿಸಬೇಕಿದ್ದ ಎಎಸ್‍ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಅವಿನಾಶ್ ಮೊಹಾಂತಿ ಅವರು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ಅರ್ಜಿಯ ಮೂಲಕ ಎಎಸ್‍ಐ ವರದಿ

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಅಧ್ಯಯನ ಮತ್ತು ಸಮೀಕ್ಷೆ/ ಡಿಸೆಂಬರ್ 18 ರಂದು ವರದಿ ಸಲ್ಲಿಸಲು ಸೂಚನೆ Read More »

ರಾಮಮಂದಿರಕ್ಕೆ ಥೈಲ್ಯಾಂಡ್ ಮಣ್ಣು/ ಪ್ರಭು ಶ್ರೀರಾಮಚಂದ್ರನಿಗೆ ಪುಟ್ಟ ರಾಷ್ಟದ ಅಳಿಲ ಸೇವೆ

ಸಮಗ್ರ ನ್ಯೂಸ್: ಭಾರತ ಹಾಗೂ ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕøತಿಕ, ಐತಿಹಾಸಿಕ ಬಾಂಧವ್ಯವಿದ್ದು, ಇದೀಗ ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಥೈಲ್ಯಾಂಡ್ ಇನ್ನಷ್ಟು ಬಲಗೊಳಿಸುತ್ತಿದೆ ಅಯೋಧ್ಯೆಯಲ್ಲಿ ನನಸಾಗುತ್ತಿರುವ ಕೋಟ್ಯಾಂತರ ಮನಸ್ಸುಗಳ ಕನಸ್ಸಾದ ಶ್ರೀರಾಮಚಂದ್ರನ ಮಂದಿರಕ್ಕೆ ಈ ಪುಟ್ಟ ರಾಷ್ಟ್ರ ಬರೋಬ್ಬರಿ ಮೂರೂವರೆ ಸಾವಿರ ಕಿಲೋ ಮೀಟರ್ ದೂರದಿಂದ ತನ್ನ ನೆಲದ ಮಣ್ಣು ಕಳುಹಿಸಿಕೊಡುತ್ತಿದೆ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್ ತನ್ನ ಊರಿನಿಂದ ವಿಶೇಷ ನೀರನ್ನು ಕಳುಹಿಸಿಕೊಟ್ಟಿದ್ದು, ಇದೀಗ ತನ್ನ ನೆಲದ ಮಣ್ಣನ್ನು ಕಳುಹಿಸಿಕೊಡುತ್ತಿದೆ. ಇನ್ನೂ ವಿಶೇಷವೆಂದರೆ

ರಾಮಮಂದಿರಕ್ಕೆ ಥೈಲ್ಯಾಂಡ್ ಮಣ್ಣು/ ಪ್ರಭು ಶ್ರೀರಾಮಚಂದ್ರನಿಗೆ ಪುಟ್ಟ ರಾಷ್ಟದ ಅಳಿಲ ಸೇವೆ Read More »

ರೈಲ್ವೆ ವಲಯದಲ್ಲಿ ಉದ್ಯೋಗಾವಕಾಶಗಳು/ ಮೆರಿಟ್ ಆಧಾರದಲ್ಲಿ ನೇಮಕಾತಿ

ಸಮಗ್ರ ನ್ಯೂಸ್: ರೈಲ್ವೆ ವಲಯದಲ್ಲಿ ಅಪ್ರೆಂಟಿಸ್‍ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಉತ್ತರ ರೈಲ್ವೆ ವಲಯವು ಉದ್ಯೋಗಾವಕಾಶ ಕಲ್ಪಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.50ರಷ್ಟು ಅಂಕಗಳಿಸಿದ್ದು, ಎನ್‍ಸಿವಿಟಿ/ಎಸ್‍ಸಿವಿಟಿಯಿಂದ ಐಟಿಐ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಠ 15 ವರ್ಷ, 2024 ಜನವರಿ 11ಕ್ಕೆ ಗರಿಷ್ಠ 24 ವರ್ಷ ವಯೋಮಿತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ ಆಧಾರದ ಮೇಲೆ ಮೆರಿಟ್ ಲಿಸ್ಟ್ ಬಿಡುಗಡೆಗೊಳ್ಳಲಿದ್ದು, ದಾಖಲೆ ಪರಿಶೀಲನೆ ಮೂಲಕ

ರೈಲ್ವೆ ವಲಯದಲ್ಲಿ ಉದ್ಯೋಗಾವಕಾಶಗಳು/ ಮೆರಿಟ್ ಆಧಾರದಲ್ಲಿ ನೇಮಕಾತಿ Read More »

ಬುರ್ಖಾ ತೆಗೆದು ಒಳಗೆ ಬನ್ನಿ ಆಸ್ಪತ್ರೆಯಲ್ಲಿ ವಿವಾದಕ್ಕೀಡಾದ ಸೂಚನಾ ಫಲಕ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದು ವಿವಾದಕ್ಕೀಡಾಗಿದೆ. ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂದು ಬರೆದಿರುವ ಫಲಕ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ವರ್ಷದ ಹಿಂದೆಯೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ಆದರೆ ಈ ಸೂಚನಾ ಫಲಕದ ಫೋಟೋವನ್ನು ತೆಗೆದು

ಬುರ್ಖಾ ತೆಗೆದು ಒಳಗೆ ಬನ್ನಿ ಆಸ್ಪತ್ರೆಯಲ್ಲಿ ವಿವಾದಕ್ಕೀಡಾದ ಸೂಚನಾ ಫಲಕ Read More »

ಮಗ ಪ್ರೀತಿಸಿದ್ದಕ್ಕೆ ಹೆತ್ತವ್ವನಿಗೆ ಶಿಕ್ಷೆ |ತಾಯಿಯನ್ನು ಬೆತ್ತಲೆಗೊಳಿಸಿ, ಮನೆ ಧ್ವಂಸ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ.. ಅತ್ಯಾಚಾರ ನಡೆಸಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ ಕೇಸ್ ಭಾರಿ ಆಕ್ರೋಶ ಕ್ಕೆ ಕಾರಣವಾಗಿತ್ತು. ಆದರೆ ಈ ಕೇಸ್ ಮಾಸುವ ಮುನ್ನವೇ ಕರುನಾಡಿನಲ್ಲು ಇಂತಹದೆ ಘಟನೆ ಬೆಳಕಿಗೆ ಬಂದಿದೆ. ಹೌದು ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದ ಬಸವೇಶ್ವರ ಗಲ್ಲಿಯಲ್ಲಿ ಹೀನ ಕೃತ್ಯ ನಡೆದಿದೆ. ಪ್ರೀತಿಸಿದ ಜೋಡಿ ಮನೆ ಬಿಟ್ಟು

ಮಗ ಪ್ರೀತಿಸಿದ್ದಕ್ಕೆ ಹೆತ್ತವ್ವನಿಗೆ ಶಿಕ್ಷೆ |ತಾಯಿಯನ್ನು ಬೆತ್ತಲೆಗೊಳಿಸಿ, ಮನೆ ಧ್ವಂಸ Read More »