December 2023

ಹೃದಯಾಘಾತದಿಂದ ಏಳನೇ ತರಗತಿ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ಏಳನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಸೃಷ್ಟಿ ಮೃತ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಶಾಲೆಗೆ ತೆರಳುವಾಗ ಸೃಷ್ಟಿ ಕುಸಿದು ಬಿದ್ದಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸೃಷ್ಟಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಹೃದಯಾಘಾತದಿಂದಲೇ ಸೃಷ್ಟಿ ಮೃತಪಟ್ಟಿದ್ದಾಳೆ ಎಂದು ಮೂಡಿಗೆರೆ ಎಂಜಿಎಂ ಸರ್ಕಾರಿ ವೈದ್ಯರು ಮಾಹಿತಿ ನೀಡಿದ್ದಾರೆ. ಮೃತ ವಿದ್ಯಾರ್ಥಿನಿ ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಗಳ ಸಾವಿನಿಂದ […]

ಹೃದಯಾಘಾತದಿಂದ ಏಳನೇ ತರಗತಿ ವಿದ್ಯಾರ್ಥಿನಿ ಸಾವು Read More »

ಪುತ್ತೂರು: ಮತ್ತೋರ್ವ ಹಿಂಜಾವೇ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್

ಸಮಗ್ರ ನ್ಯೂಸ್: ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಹಸಂಯೋಜಕ ದಿನೇಶ್ ಪಂಜಿಗ ಅವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳುವ ಆದೇಶ ಮಾಡಿ ಉಪವಿಭಾಗೀಯ ದಂಡಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಪುತ್ತೂರು ತಾಲೂಕಿನ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಪಂಜಿಗ ಮನೆ ಎಂಬಲ್ಲಿನ ದಿನೇಶ್ (37.ವ)ರವರು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ

ಪುತ್ತೂರು: ಮತ್ತೋರ್ವ ಹಿಂಜಾವೇ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್ Read More »

ಕೊರೊನಾ ಏರಿಕೆ ಹಿನ್ನಲೆ| ಸಾರಿಗೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸಲು ಸಚಿವ ರೆಡ್ಡಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಯೊಬ್ಬ ಪ್ರಯಾಣಿಕರು ಮಾಸ್ಕ್ ಧರಿಸಿ ಪ್ರಯಾಣಿಸಿ ಎಂದು ಸಲಹೆ ನೀಡಿದ್ದಾರೆ. ಸರ್ಕಾರದ ಆದೇಶವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಕೇಂದ್ರ ಆರೋಗ್ಯ ಸಚಿವರ ಜೊತೆ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವರು ಸಲಹೆ ಪಡೆದಿದ್ದಾರೆ. ಅದರಂತೆ ಮುಜರಾಯಿ ಇಲಾಖೆ, ಸಾರಿಗೆ ನಿಗಮಗಳಲ್ಲಿ

ಕೊರೊನಾ ಏರಿಕೆ ಹಿನ್ನಲೆ| ಸಾರಿಗೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸಲು ಸಚಿವ ರೆಡ್ಡಿ ಸೂಚನೆ Read More »

“ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಮಸೂದೆ 2023″/ ಲೋಕಸಭೆಯಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: ಜಿಎಸ್‍ಟಿ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರ ವಯೋಮಿತಿಯನ್ನು ಹೆಚ್ಚಿಸಲು ಅವಕಾಶ ನೀಡುವ “ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಎರಡನೆಯ ತಿದ್ದುಪಡಿ) ಮಸೂದೆ 2023″ಕ್ಕೆ ಲೋಕಸಭೆಯು ಅಂಗೀಕಾರ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಿಎಸ್‍ಟಿ ನೋಟಿಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಜಿಎಸ್‍ಟಿ ಮೇಲ್ಮನವಿ ನ್ಯಾಯಮಂಡಳಿಗಳು ಕಾರ್ಯ ಆರಂಭಿಸಿದ ನಂತರದಲ್ಲಿ, ತಮ್ಮ ಅರ್ಜಿಗಳನ್ನು ಸ್ವಇಚ್ಛೆಯಿಂದ ಮೇಲ್ಮನವಿ ನ್ಯಾಯಮಂಡಳಿಗಳ ಎದುರು ತರುವ

“ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಮಸೂದೆ 2023″/ ಲೋಕಸಭೆಯಲ್ಲಿ ಅಂಗೀಕಾರ Read More »

ಕುಮಾರಪರ್ವತ ಚಾರಣಿಗರ ಅನ್ನದಾತ‌ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ

ಸಮಗ್ರ ನ್ಯೂಸ್: ಕುಮಾರಪರ್ವತ ಚಾರಣ ವೇಳೆ ಸಿಗುವ ಗಿರಿಗದ್ದೆ ಮಹಾಲಿಂಗ ಭಟ್ಟರನ್ನು ಚಾರಣಿಗರಿಗೆ ಪರಿಚಯಿಸಬೇಕಾದ್ದಿಲ್ಲ. ಚಾರಣಿಗರ ಪಾಲಿನ ಅನ್ನದಾತರಾಗಿರುವ ಮಹಾಲಿಂಗ ಭಟ್ಟರು ಬುಧವಾರ(ಡಿ.20) ಅವರು ನಿಧನ ಹೊಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಲೋ ಮೀಟರ್ ದೂರದಲ್ಲಿ ಕುಮಾರ ಪರ್ವತದ ಹಾದಿಯ ಗಿರಿಗದ್ದೆಯಲ್ಲಿದ್ದ ಮಹಾಲಿಂಗೇಶ್ವರ ಭಟ್ಟರು ಇತ್ತೀಚಿನವರೆಗೂ ಅಲ್ಲೇ ವಾಸವಾಗಿದ್ದರು. ಚಾರಣಿಗರ ಪಾಲಿನ ಅನ್ನದಾತ, ಅನ್ನದೇವರಾಗಿದ್ದರು. ಗಿರಿಗದ್ದೆ ಭಟ್ಟರು ಅಂತಲೇ ಫೇಮಸ್ಸಾಗಿದ್ದ ಇವರು ಕಳೆದ ಕೆಲವು ತಿಂಗಳುಗಳ ಹಿಂದೆ ಇವರ ಸಹೋದರ ವೆಂಕಟ್ರಮಣ ಜೋಯಿಸರನ್ನು ಅಗಲಿದ್ದರು. ಈ ಕುಟುಂಬ

ಕುಮಾರಪರ್ವತ ಚಾರಣಿಗರ ಅನ್ನದಾತ‌ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ Read More »

ಹಿರಿಯ ನಟಿ ಹೇಮಾ ಚೌಧರಿಗೆ ತೀವ್ರ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಮಗ್ರ ಸಮಾಚಾರ: ಕನ್ನಡ ಚಿತ್ರರಂಗದ ಹಿರಿಯ ನಟಿಯಾದ ಹೇಮಾ ಚೌಧರಿ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೇಮಾ ಚೌಧರಿಗೆ ಬ್ರೇನ್ ಹ್ಯಾಮರೇಜ್ ಆಗಿದೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್‌ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಅವರನ್ನು ಇಡಲಾಗಿದೆ. ಹೇಮಾ ಅವರ ಮಗ ಐರ್ಲೆಂಡ್​ನಲ್ಲಿ ಇದ್ದಾರೆ. ಅವರ ಆಗಮನಕ್ಕಾಗಿ ಹೇಮಾ ಕಾಯುತ್ತಿದ್ದಾರೆ.

ಹಿರಿಯ ನಟಿ ಹೇಮಾ ಚೌಧರಿಗೆ ತೀವ್ರ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ Read More »

ಕೊರೊನಾ ರೂಪಾಂತರಿ ಆತಂಕ| ಕೊಡಗಿನ ಗಡಿಗಳಲ್ಲಿ ಕಟ್ಟೆಚ್ಚರ

ಸಮಗ್ರ ನ್ಯೂಸ್: ಕರಿಕೆ ಗಡಿಯಲ್ಲಿ ಆರೋಗ್ಯ, ಪೊಲೀಸ್ ಇಲಾಖೆಯಿಂದ ಓರ್ವ ಸಿಬ್ಬಂದಿ ನೇಮಕ ಮಾಡಲಾಗಿದೆ. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರ ಆಗಮನದ ಹಿನ್ನೆಲೆಯಲ್ಲಿಕೇರಳದ ಬಸ್ ಗಳು ನೇರವಾಗಿ ಕರ್ನಾಟಕದ ಪೆಟ್ರೋಲ್ ಬಂಕ್ ಗೆ ಆಗಮಿಸುತ್ತಿರುವುದರಿಂದ ಬಸ್ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸರಕಾರವು ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಕಟ್ಟಿನಿಟ್ಟಿನ ತಪಾಸಣೆಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.

ಕೊರೊನಾ ರೂಪಾಂತರಿ ಆತಂಕ| ಕೊಡಗಿನ ಗಡಿಗಳಲ್ಲಿ ಕಟ್ಟೆಚ್ಚರ Read More »

ಅಕ್ಕಿ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಬಿಗ್ ಪ್ಲ್ಯಾನ್| ಬಾಸ್ಮತಿ ಅಕ್ಕಿ ಬಲು ಅಗ್ಗ

ಸಮಗ್ರ ನ್ಯೂಸ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಕ್ಕಿ ಬೆಲೆಗೆ ಸಂಬಂಧಿಸಿದಂತೆ ದೊಡ್ಡ ಹೆಜ್ಜೆ ಇಟ್ಟಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಚಿಲ್ಲರೆ ಬೆಲೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ಸೋಮವಾರ ನವದೆಹಲಿಯಲ್ಲಿ ಬಾಸ್ಮತಿ ಅಲ್ಲದ ಅಕ್ಕಿಯ ದೇಶೀಯ ಬೆಲೆಯನ್ನು ಪರಿಶೀಲಿಸಲು ಅಕ್ಕಿ ಸಂಸ್ಕರಣಾ ಉದ್ಯಮದ ಪ್ರಮುಖ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಈ ಖಾರಿಫ್‌ನಲ್ಲಿ ಉತ್ತಮ ಬೆಳೆ, ಭಾರತೀಯ ಆಹಾರ ನಿಗಮದಲ್ಲಿ (ಎಫ್‌ಸಿಐ) ಸಾಕಷ್ಟು ದಾಸ್ತಾನು

ಅಕ್ಕಿ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಬಿಗ್ ಪ್ಲ್ಯಾನ್| ಬಾಸ್ಮತಿ ಅಕ್ಕಿ ಬಲು ಅಗ್ಗ Read More »

ಕಲಾಪಕ್ಕೆ ಅಡ್ಡಿ/ ಮತ್ತೆ 49 ಸಂಸದರ ಅಮಾನತು

ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ನಿನ್ನೆ 79 ವಿಪಕ್ಷ ಸಂಸದರನ್ನು ಸಂಸತ್‍ನಿಂದ ಅಮಾನತುಗೊಳಿಸಲಾಗಿದ್ದು, ಇಂದು ಮತ್ತೆ 49 ವಿಪಕ್ಷ ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ. ಇದೀಗ ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸದಸ್ಯರ ಸಂಖ್ಯೆ 141ಕ್ಕೆ ಏರಿಕೆ ಆಗಿದೆ. ನ್ಯಾಷನಲ್ ಕಾನ್ಸರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಕಾರ್ತಿ ಚಿದಂಬರಂ, ಎನ್‍ಸಿಪಿಯ ಸುಪ್ರಿಯಾ ಸುಳೆ ಸೇರಿದಂತೆ 49 ಎಂಪಿಗಳನ್ನು ಅಮಾನತು ಮಾಡಲಾಗಿದೆ.

ಕಲಾಪಕ್ಕೆ ಅಡ್ಡಿ/ ಮತ್ತೆ 49 ಸಂಸದರ ಅಮಾನತು Read More »

ಮತ್ತೆ ಕಾವೇರಿಸುತ್ತಿರುವ ಕಾವೇರಿ/ ಡಿಸೆಂಬರ್ ಅಂತ್ಯದವರಿಗೆ 1030 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ

ಸಮಗ್ರ ನ್ಯೂಸ್: ಡಿಸೆಂಬರ್ ಅಂತ್ಯದವರಿಗೆ ತಮಿಳುನಾಡಿಗೆ 1030 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಕಳೆದ 15 ದಿನಗಳಿಂದಲೂ ಈಶಾನ್ಯ ಮಾನ್ಸೂನ್ ಮಾರುತದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹವೇ ಸೃಷ್ಟಿಯಾಗಿದೆ. ಇದರ ನಡುವೆ ತಮಿಳುನಾಡಿಗೆ ಡಿಸೆಂಬರ್ ಅಂತ್ಯದವರಿಗೆ 1030 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ರಾಜ್ಯದ ಪರ ಅಧಿಕಾರಿಗಳು ಹಲವು ಬಾರಿ ವಾದ ಮಂಡಿಸುತ್ತಲೇ

ಮತ್ತೆ ಕಾವೇರಿಸುತ್ತಿರುವ ಕಾವೇರಿ/ ಡಿಸೆಂಬರ್ ಅಂತ್ಯದವರಿಗೆ 1030 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ Read More »