Ad Widget .

ಜನವರಿ 6ಕ್ಕೆ ಕಕ್ಷೆ ತಲುಪಲಿರುವ ಆದಿತ್ಯ- ಎಲ್1

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಂಕ್ಷೆ ಯೋಜನೆ ಸೌರ ಮಿಷನ್ ಆದಿತ್ಯ-ಎಲ್ 1 ಜನವರಿ 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಆದಿತ್ಯ-ಎಲ್ 1 ಜನವರಿ 6ರಂದು ಎಲ್ 1 ಪಾಯಿಂಟ್‌ಗೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ. ಇದು ಯಾವ ಸಮಯಕ್ಕೆ ಅಲ್ಲಿಗೆ ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

Ad Widget . Ad Widget .

ಇವರು ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ವಿಜ್ಞಾನ ಭಾರತಿ (ವಿಭಾ) ಮತ್ತು ಗುಜರಾತ್ ಸರ್ಕಾರದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಆದಿತ್ಯ-ಎಲ್ 1 ಅಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆಯು ಮಾಹಿತಿ ನೀಡಿದ್ದಾರೆ. ಆದಿತ್ಯ-ಎಲ್ 1 ಮಿಷನ್​​​ ತನ್ನ ಉದ್ದೇಶಿತ ಕಕ್ಷೆಗೆ ತಲುಪಿದ ನಂತರ ಮಿಷನ್​​​​ನ​​​​ ಇಂಜಿನ್​​​ಗಳು ಸೂರ್ಯನ ಶಾಖಕ್ಕೆ ಬೆಂದು ಅಥವಾ ಮೆಲ್ಟ್​​​ ಆಗುವ ಹಂತಕ್ಕೆ ಹೋಗಬಹುದು. ಅದರೂ ಇದು ಕಾರ್ಯನಿರ್ವಹಿಸಲಿದೆ. ಇನ್ನು ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನಕ್ಕೆ ತಲುಪುವ ಮುನ್ನ ಸೂರ್ಯನ ಸುತ್ತಲೂ ತಿರುಗಿ ಎಲ್ 1 ಪಾಯಿಂಟ್​​​ನ್ನು ತಲುಪಲಿದೆ.

Ad Widget . Ad Widget .

ಆದಿತ್ಯ-ಎಲ್1 ತಲುಪಿದ ನಂತರ ಮುಂದಿನ 5 ವರ್ಷಗಳ ಕಾಲ ಸೂರ್ಯನ ಸುತ್ತ ನಡೆಯುವ ಘಟನೆಗಳನ್ನು ಹಾಗೂ ಬದಲಾವಣೆಗಳನ್ನು ಅಧ್ಯಯನ ಮಾಡಿ ನಮಗೆ ಮಾಹಿತಿ ನೀಡಿತ್ತದೆ. ಒಮ್ಮೆ ಇದು ಯಶಸ್ವಿಯಾಗಿ L1 ಪಾಯಿಂಟ್‌ನಲ್ಲಿ ಇಳಿದ ನಂತರ ಮುಂದಿನ ಐದು ವರ್ಷಗಳ ಕಾಲ ಅಲ್ಲಿಯೇ ಇರಲಿದೆ ಎಂದು ಎಸ್​​​ ಸೋಮನಾಥ್ ಹೇಳಿದ್ದಾರೆ. ಇದು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಬೇಕಾದ ಎಲ್ಲ ಡೇಟಾಗಳನ್ನು ನೀಡುತ್ತದೆ. ಆದಿತ್ಯ-ಎಲ್ 1ನ ಈ ಅಧ್ಯಯನದಿಂದ ಸೂರ್ಯ ಮನುಷ್ಯನ ಮೇಲೆ ಉಂಟು ಮಾಡುವ ಪರಿಣಾಮವನ್ನು ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರು ಸೂಚನೆಯಂತೆ ಅಮೃತ್ ಕಾಲ್ ಸಮಯದ ವೇಳೆಗೆ ಭಾರತವು ತನ್ನದೇ ಆದ ‘ಭಾರತ್ ಬಾಹ್ಯಾಕಾಶ ನಿಲ್ದಾಣ’ವನ್ನು ಹೊಂದಲಿದೆ ಎಂದು ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಇದೆ ಸಮಯದಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತೀಯ ವಿಜ್ಞಾನಿಗಳು ಚಂದ್ರನ ಮೇಲೆ ಇಳಿಯಲಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳು ಜ್ಞಾನ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

Leave a Comment

Your email address will not be published. Required fields are marked *