Ad Widget .

“ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಮಸೂದೆ 2023″/ ಲೋಕಸಭೆಯಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: ಜಿಎಸ್‍ಟಿ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರ ವಯೋಮಿತಿಯನ್ನು ಹೆಚ್ಚಿಸಲು ಅವಕಾಶ ನೀಡುವ “ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಎರಡನೆಯ ತಿದ್ದುಪಡಿ) ಮಸೂದೆ 2023″ಕ್ಕೆ ಲೋಕಸಭೆಯು ಅಂಗೀಕಾರ ನೀಡಿದೆ.

Ad Widget . Ad Widget .

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಿಎಸ್‍ಟಿ ನೋಟಿಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಜಿಎಸ್‍ಟಿ ಮೇಲ್ಮನವಿ ನ್ಯಾಯಮಂಡಳಿಗಳು ಕಾರ್ಯ ಆರಂಭಿಸಿದ ನಂತರದಲ್ಲಿ, ತಮ್ಮ ಅರ್ಜಿಗಳನ್ನು ಸ್ವಇಚ್ಛೆಯಿಂದ ಮೇಲ್ಮನವಿ ನ್ಯಾಯಮಂಡಳಿಗಳ ಎದುರು ತರುವ ಅವಕಾಶ ಇರುತ್ತದೆ ಎಂದು ವಿವರಿಸಿದರು.

Ad Widget . Ad Widget .

ಈ ಮಸೂದೆಯು ಅಧ್ಯಕ್ಷರ ವಯೋಮಿತಿಯನ್ನು ಈಗಿರುವ 67 ವರ್ಷದಿಂದ 70 ವರ್ಷಕ್ಕೆ, ಸದಸ್ಯರ ವಯೋಮಿತಿಯನ್ನು ಈಗಿನ 65 ವರ್ಷದಿಂದ 67 ವರ್ಷಕ್ಕೆ ಹೆಚ್ಚು ಮಾಡಲು ಅವಕಾಶ ನೀಡುತ್ತದೆ.

Leave a Comment

Your email address will not be published. Required fields are marked *